Advertisement

Israel-Hamas Conflict: ಇಸ್ರೇಲ್‌ನಲ್ಲಿದ್ದ ಕೇರಳದ ಮಹಿಳೆಗೆ ಗಂಭೀರ ಗಾಯ; ಕಂಗಾಲಾದ ಕುಟುಂಬ

01:44 PM Oct 09, 2023 | Team Udayavani |

ಗಾಜಾ ಪಟ್ಟಿ: ಇಸ್ರೇಲ್ ಹಾಗೂ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಘರ್ಷಣೆಯ ವೇಳೆ ಕೇರಳ ಮೂಲದ ನರ್ಸ್ ಒಬ್ಬರು ಗಂಭೀರ ಗಾಯಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Advertisement

ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಕೇರಳದ ಮೂಲದ ಮಹಿಳೆ ಶೀಜಾ ಆನಂದ್ ಅವರು ಭಾರತದಲ್ಲಿ ವಾಸಿಸುತ್ತಿರುವ ತನ್ನ ಪತಿಯೊಂದಿಗೆ ವೀಡಿಯೊ ಕರೆ ಮಾಡಿ ಸಂಭಾಷಣೆ ನಡೆಸುತ್ತಿದ್ದ ವೇಳೆ ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪು ಹಮಾಸ್‌ನ ದಾಳಿ ಮಾಡಿದ್ದು ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.

ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿರುವ ಶೀಜಾ ಆನಂದ್ ಶನಿವಾರ ಮುಂಜಾನೆ ಇಸ್ರೇಲ್‌ನ ಮೇಲೆ ಹಮಾಸ್ ಅನಿರೀಕ್ಷಿತ ದಾಳಿಯನ್ನು ಪ್ರಾರಂಭಿಸಿದ ಕುರಿತಾಗಿ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ, ಇದಾದ ಬಳಿಕ ಕೆಲ ಸಮಯದಲ್ಲೆ ಮತ್ತೊಂದು ಕರೆ ಬಂದಿದ್ದು ಶೀಜಾ ಅವರು ಪತಿಯೊಂದಿಗೆ ಮಾತನಾಡುವ ವೇಳೆ ಭಾರಿ ಸದ್ದು ಕೇಳಿದ ಬೆನ್ನಲ್ಲೇ ಶೀಜಾ ಅವರ ಕರೆ ಕಟ್ ಆಗಿದೆ ಆ ಬಳಿಕ ಪತಿ ಎಷ್ಟೇ ಪ್ರಯತ್ನ ಪಟ್ಟರು ಕರೆ ಸಿಗಲಿಲ್ಲ ಇದಾದ ಬಳಿಕ ಮರುದಿನ ಬಂದ ಕರೆಯಿಂದಲೇ ಗೊತ್ತಾಗಿದ್ದು ಹಮಾಸ್ ನಡೆಸಿದ ರಾಕೆಟ್ ದಾಳಿಯಿಂದ ಶೀಜಾ ಅವರಿಗೆ ಗಂಭೀರ ಗಾಯವಾಗಿದೆ ಎಂಬುದು ಸದ್ಯ ಒಂದು ಶಸ್ತ್ರ ಚಿಕಿತ್ಸೆ ನಡೆದಿದ್ದು ಇನ್ನೊಂದು ಶಸ್ತ್ರ ಚಿಕಿತ್ಸೆಗಾಗಿ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಬೇಕೆಂಬ ಮಾಹಿತಿ ಮಾತ್ರ ಸಿಕ್ಕಿದೆ ಆದರೆ ಸದ್ಯ ಆಕೆಯ ಸ್ಥಿತಿ ಹೇಗಿದೆ ಎಂಬುದು ಗೊತ್ತಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: Bigg Boss: ಮಾನಸಿಕ ಒತ್ತಡ, ಅನಾರೋಗ್ಯದಿಂದ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದ ಸ್ಪರ್ಧಿ

Advertisement

Udayavani is now on Telegram. Click here to join our channel and stay updated with the latest news.

Next