Advertisement
ದರ ಇಳಿಕೆಯಿಂದ ಕೇರಳದ ವಾಹನಗಳು ಸರತಿಯಲ್ಲಿ ಪೆಟ್ರೋಲ್ – ಡೀಸೆಲ್ ತುಂಬಿಸುವುದು ಕಂಡು ಬಂದಿದೆ. ಸೋಮೇಶ್ವರ ಉಚ್ಚಿಲ ಬಳಿಯ ಪೆಟ್ರೋಲ್ ಪಂಪ್‌ಗ್ಳಲ್ಲಿ, ಇನ್ನೊಂದೆಡೆ ಗಡಿಯ ಕೆಳಗಿನ ತಲ ಪಾಡಿ ಸರ್ವೀಸ್ ಸ್ಟೇಷನ್‌ನಲ್ಲಿ ಇಂಧನ ತುಂಬಿಸುವುದು ಕಂಡು ಬಂದಿದೆ.
ಮೇಲಿನ ತಲಪಾಡಿಯ ಕೇರಳದ ಪೆಟ್ರೋಲ್ ಪಂಪ್‌ನಲ್ಲಿ ಈ ಹಿಂದೆ ದಿನಕ್ಕೆ ಸರಾಸರಿ 3ರಿಂದ 4 ಸಾವಿರ ಲೀ. ಡೀಸೆಲ್ ಮಾರಾಟವಾಗುತ್ತಿದ್ದರೆ ಪ್ರಸ್ತುತ 1 ಸಾವಿರ ಲೀ. ಡೀಸೆಲ್ ಮಾರಾಟವಾಗುತ್ತಿದೆ ಎನ್ನುತ್ತಾರೆ ಪಂಪ್ ಸಿಬಂದಿ. ಎರಡು ದಿನಗಳಲ್ಲಿ ಗಣನೀಯವಾಗಿ ವ್ಯಾಪಾರ ಕುಸಿದಿದೆ ಎಂದಿದ್ದಾರೆ. ತಲಪಾಡಿ ಮಾರ್ಗವಾಗಿ ಕೇರಳದ ವಿವಿಧ ಪ್ರದೇಶಗಳಿಗೆ ಸಂಚರಿಸುವ ಖಾಸಗಿ ಬಸ್ಸುಗಳು ಡೀಸೆಲ್ ತುಂಬಲು ಸರತಿಯಲ್ಲಿ ನಿಂತದ್ದು ಕಂಡುಬಂತು. ಎರಡು ದಿನಗಳಲ್ಲಿ ವ್ಯವಹಾರ ಹೆಚ್ಚಿದ್ದು, ಸರಾಸರಿ 2 ಸಾವಿರ ಲೀ. ಡೀಸೆಲ್ ಹೆಚ್ಚು ಮಾರಾಟ ಆಗಿದೆ ಎಂದು ಸಿಬಂದಿ ಮಾಹಿತಿ ನೀಡಿದ್ದಾರೆ. ವಿಟ್ಲದಲ್ಲೂ ಭರ್ಜರಿ ವ್ಯಾಪಾರ
ವಿಟ್ಲ: ಈ ಆಸುಪಾಸಿನ ಪಂಪುಗಳ ಲ್ಲಿಯೂ ವ್ಯವ ಹಾರ ಹೆಚ್ಚಿದೆ. ಕೇರಳದ ಟಿಪ್ಪರ್ ಮತ್ತಿತರ ವಾಹನಗಳು ಲಗ್ಗೆಯಿಟ್ಟಿರುವುದು ಕಂಡುಬಂದಿದೆ. ಕುದ್ದುಪದವಿನ ಪೆಟ್ರೋಲ್ ಪಂಪಿನಲ್ಲಿ ಬುಧವಾರ ಸಂಜೆ 6 ಗಂಟೆಗೆ ಶೇ.30ರಷ್ಟು ವ್ಯವಹಾರ ಹೆಚ್ಚಳವಾಗಿದ್ದು, ರಾತ್ರಿ ಇನ್ನಷ್ಟು ಹೆಚ್ಚಬಹುದೆಂದು ಸಿಬಂದಿ ಹೇಳಿದ್ದಾರೆ. ಕೇರಳದ ವಾಹನಗಳು ಟ್ಯಾಂಕ್ ಭರ್ತಿ ಮಾಡಿ ತೆರಳುತ್ತಿವೆ. ಇಲ್ಲಿಂದ ಕೇರಳದ ಪೆರ್ಲಕ್ಕೆ ಕೇವಲ 15 ಕಿ.ಮೀ. ದೂರ, ಈ ಮಧ್ಯೆ ಬೇರೆ ಪಂಪ್‌ಗ್ಳಿಲ್ಲ. ಹೀಗಾಗಿ ಈ ಪಂಪನ್ನು ಕೇರಳಿಗರು ಆಶ್ರಯಿಸಿದ್ದಾರೆ.
Related Articles
ಮೇಲಿನ ತಲಪಾಡಿಯ ಪೆಟ್ರೋಲ್ ಪಂಪ್‌ನಲ್ಲಿ 1 ಲೀಟರ್ ಪೆಟ್ರೋಲ್‌ಗೆ 85.22 ರೂ., ಡೀಸೆಲ್‌ಗೆ 78.80 ರೂ. ದರವಿದ್ದರೆ, ಸ್ವಲ್ಪವೇ ದೂರದಲ್ಲಿರುವ ಕೆಳಗಿನ ತಲಪಾಡಿಯಲ್ಲಿ ಇದು 82.29 ರೂ. ಮತ್ತು 73.73 ರೂ. ಇದ್ದು, ಕೇರಳದ ಗ್ರಾಹಕರು ಅನುಕ್ರಮವಾಗಿ 2.93 ರೂ., 5.07 ರೂ. ಲಾಭ ಪಡೆದುಕೊಂಡರು.
Advertisement
ಪರಿಸ್ಥಿತಿ ಉಲ್ಟಾಕೆಲವು ವರ್ಷಗಳ ಹಿಂದೆ ಕರ್ನಾಟಕಕ್ಕಿಂತ ಕೇರಳದಲ್ಲಿ ತೈಲಬೆಲೆ ಕಡಿಮೆಯಾಗಿತ್ತು. ಆಗ ಪೆಟ್ರೋಲ್ ಬೆಲೆಯಲ್ಲಿ 5 ರೂ.; ಡೀಸೆಲ್ 4 ರೂ.ಗಳಷ್ಟು ವ್ಯತ್ಯಾಸ ಇತ್ತು. ಪ್ರಸ್ತುತ ವರ್ಷ ಹಂತ ಹಂತವಾಗಿ ಏರುತ್ತ ಸಾಗಿದ ತೈಲ ಬೆಲೆ ಸೆ.18ರ ರಾತ್ರಿಯವರೆಗೆ ಎರಡೂ ರಾಜ್ಯಗಳಲ್ಲೂ ಸಮಾನವಾಗಿತ್ತು. ಕೇರಳದಲ್ಲಿ ತುಸು ಹೆಚ್ಚೇ ಇತ್ತು. ಈಗ ಸ್ಥಿತಿಗತಿ ತಲೆಕೆಳಗಾಗಿದ್ದು, ಕರ್ನಾಟಕದಲ್ಲೇ ಕಡಿಮೆ ಇದೆ. ನಮ್ಮ ಪಂಪಿಗೆ ಕೇರಳದ ವಾಹನಗಳು ಹೆಚ್ಚು ಬಂದಿರುವುದು ನಿಜ. ರಾತ್ರಿ 10.30ರ ಸಮಯಕ್ಕೆ ವ್ಯಾಪಾರ ಇನ್ನಷ್ಟು ಹೆಚ್ಚಬಹುದು. ಕೇರಳದ ಅಡ್ಕಸ್ಥಳಕ್ಕೆ ನಮ್ಮ ಪಂಪಿನಿಂದ ಕೆಲವೇ ಕಿ.ಮೀ. ದೂರವಿರುವುದರಿಂದ ಆ ಭಾಗದ ಗ್ರಾಹಕರೂ ಬರಬಹುದು ಎಂದು ಕುದ್ದುಪದವಿನ ಪೆಟ್ರೋಲಿಯಂ ಮಾಲಕರು ಹೇಳಿದ್ದಾರೆ. ಜಾಲ್ಸುರಿನಲ್ಲೂ ಹೆಚ್ಚಳ
ಜಾಲ್ಸುರ್: ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಜಾಲ್ಸುರಿನ ಪೆಟ್ರೋಲ್ ಪಂಪ್‌ಗ್ಳಲ್ಲಿಯೂ ಕೇರಳ ಕಡೆಯಿಂದ ಇಂಧನ ತುಂಬಿಸಿಕೊಳ್ಳಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಕಾಸರಗೋಡು ಭಾಗದಿಂದ ಸುಳ್ಯ ಕಡೆಗೆ ಬರುವವರು, ಇಲ್ಲಿಂದ ಅತ್ತ ತೆರಳುವ ಕೇರಳ ವ್ಯಾಪ್ತಿಯವರು ಜಾಲ್ಸುರಿನಲ್ಲಿಯೇ ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಜೆಸಿಬಿ ಹಾಗೂ ಟಿಪ್ಪರ್ ಲಾರಿಗಳಲ್ಲಿ ಡೀಸೆಲನ್ನು ಕ್ಯಾನ್‌ಗಟ್ಟಲೆ ಖರೀದಿಸಿ ಒಯ್ಯುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ದ್ವಿಚಕ್ರ ವಾಹನ, ಕಾರು, ಜೀಪುಗಳಲ್ಲಿ ಸುಳ್ಯದಿಂದ ಕುಂಚಾರು, ಅಡೂರು, ಕೊಟ್ಯಾಡಿ, ಗಾಳಿಮುಖ ಪ್ರದೇಶಗಳಿಗೆ ಪ್ರಯಾಣಿಸುವವರು ಜಾಲ್ಸುರಿನ ಪೆಟ್ರೋಲ್ ಬಂಕ್ ಅವಲಂಬಿಸಿದ್ದಾರೆ.