Advertisement

ಕೋವಿಡ್-19 ಸವಾಲು ಎದುರಿಸಲು ಮದ್ಯ ಬೆಲೆ ಹೆಚ್ಚಿಸಿದ ಕೇರಳ ಸರ್ಕಾರ

08:31 AM May 14, 2020 | Sriram |

ಕೇರಳ: ಕೇರಳದಲ್ಲಿ ಮದ್ಯಪ್ರಿಯರಿಗೆ ಬೆಲೆ ಹೆಚ್ಚಳದ ಶಾಕ್ ಲಭಿಸಿದೆ. ಕೋವಿಡ್-19 ವೈರಸ್‌ ಸವಾಲುಗಳನ್ನು ಎದುರಿಸುವ ಸಲುವಾಗಿ ಕೇರಳ ಸರ್ಕಾರ ಬಿಯರ್ ಹಾಗೂ ಭಾರತೀಯ ಮದ್ಯಗಳ ಮೇಲಿನ ಬೆಲೆಯನ್ನು 10 ರಿಂದ 35% ವರೆಗೆ ಹೆಚ್ಚಿಸಿ ಇಂದು ಆದೇಶ ಹೊರಡಿಸಿದೆ.

Advertisement

ರಾಜ್ಯದಲ್ಲಿ ಬಾರ್‌ ಮತ್ತು ಸರ್ಕಾರಿ ಮದ್ಯದಂಗಡಿ ತೆರೆಯುವ ಮೊದಲು ಕೇರಳದ ಎಲ್‌ಡಿಎಫ್ ಸರ್ಕಾರ ಬುಧವಾರ ಮದ್ಯದ ಬೆಲೆಯನ್ನು ಶೇ.35 ರಷ್ಟು ಹೆಚ್ಚಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಎಲ್ಲಾ ಮದ್ಯದ ಬ್ರಾಂಡ್‌ಗಳು ಹಾಗು ಬಿಯರ್‌ಗಳ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ.

ಮದ್ಯ ಪ್ರಿಯರು ಈಗ ಕೇರಳ ರಾಜ್ಯದಲ್ಲಿ ಮದ್ಯ ಆನಂದಿಸಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇಂಡಿಯನ್‌ ಮೇಡ್‌ ಫಾರಿನ್‌ ಲಿಕ್ಕರ್ಸ್‌ (ಐಎಂಎಫ್ಎಲ್‌)ನ ಬಿಯರ್‌ ಮತ್ತು ಜನಪ್ರಿಯ ಬ್ರಾಂಡ್‌ಗಳ ಬೆಲೆಯನ್ನು ಅದರ ಪ್ರಸ್ತುತ ಬೆಲೆಯಿಂದ ಶೇ.35 ರಷ್ಟು ಹೆಚ್ಚಿಸಲಾಗುತ್ತದೆ. ರಾಜ್ಯದಲ್ಲಿ ಮಾರಟವಾಗುವ ಮದ್ಯದ ಬೆಲೆಯನ್ನು ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next