ತ್ರಿಶೂರ್: ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವುದು ಸಾಮಾನ್ಯ. ಪೂಜಾ ಕಾರ್ಯದಲ್ಲಿ ಆನೆಗಳನ್ನು ಬಳಕೆ ಮಾಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ, ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀ ಕೃಷ್ಣ ದೇವಾಲಯದಲ್ಲಿ ಆಚರಣೆಗಳನ್ನು ನಿರ್ವಹಿಸಲು ಯಾಂತ್ರಿಕ ಆನೆಯನ್ನು ಬಳಸಲಾಗಿದೆ.
ನಟಿ ಪಾರ್ವತಿ ತಿರುವೋತ್ತು ಅವರ ಬೆಂಬಲದೊಂದಿಗೆ ಪೇಟಾ ಇಂಡಿಯಾ ಸಂಸ್ಥೆಯು ಈ ಕೃತಕ ಆನೆಯನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದೆ.
ಇರಿಂಜದಪಿಲ್ಲಿ ರಾಮನ್ ಎಂಬ ಹೆಸರಿನ ಯಾಂತ್ರಿಕ ಆನೆಯು 10 ಮತ್ತು ಒಂದೂವರೆ ಅಡಿ ಎತ್ತರ ಮತ್ತು 800 ಕೆಜಿ ತೂಕವಿದೆ. ಆನೆಯ ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲ ಎಲ್ಲವೂ ವಿದ್ಯುತ್ ಮೂಲಕ ಕೆಲಸ ಮಾಡುತ್ತವೆ.
ಇದನ್ನೂ ಓದಿ:ಇನ್ನೂ ಗುಣಮುಖವಾಗದ ಜಸ್ಪ್ರೀತ್ ಬುಮ್ರಾ..; ಐಪಿಎಲ್ ನಿಂದಲೂ ಔಟ್!
ಆನೆಗಳನ್ನು ಅಥವಾ ಇತರ ಯಾವುದೇ ಪ್ರಾಣಿಗಳನ್ನು ಆಚರಣೆಗಳು, ಉತ್ಸವಗಳು ಅಥವಾ ಯಾವುದೇ ಉದ್ದೇಶಕ್ಕಾಗಿ ಎಂದಿಗೂ ಇರಿಸಬೇಡಿ ಅಥವಾ ಬಾಡಿಗೆಗೆ ತೆಗೆದುಕೊಳ್ಳಬೇಡಿ ಎಂದು ದೇವಸ್ಥಾನವು ಕರೆ ನೀಡಿದ್ದನ್ನು ಅನುಸರಿಸಿ, ಪೇಟಾ ಸಂಸ್ಥೆಯು ರೋಬೋಟಿಕ್ ಆನೆಯನ್ನು ನೀಡಿದೆ.
ಭಾನುವಾರ, ಇರಿಂಜದಪ್ಪಿಲ್ಲಿ ರಾಮನ್ ಅವರ ‘ನಡಾಯಿರುತಲ್’ (ದೇವರಿಗೆ ಆನೆಗಳನ್ನು ಅರ್ಪಿಸುವ ಸಮಾರಂಭ) ನಡೆಸಲಾಯಿತು. ಪೇಟಾ ಸಂಸ್ಥೆಯು ಆನೆಗಳನ್ನು ಬಳಸುವ ಎಲ್ಲಾ ಸ್ಥಳಗಳು ಮತ್ತು ಕಾರ್ಯಕ್ರಮಗಳನ್ನು ನೈಜ ಆನೆಗಳ ಬದಲಿಗೆ ಯಾಂತ್ರಿಕ ಆನೆಗಳನ್ನು ಬಳಸಲು ಕೋರಿದೆ.