Advertisement

ಈಗ ಮಾತೃಭೂಮಿ ಟಿವಿ ಮಹಿಳಾ ಉದ್ಯೋಗಿಗಳಿಗೂ ಋತುಚಕ್ರ ರಜೆ

04:45 PM Jul 20, 2017 | Team Udayavani |

ತಿರುವನಂತಪುರ : ಮಹಿಳಾ ಉದ್ಯೋಗಿಗಳಿಗೆ ತಮ್ಮ ಮಾಸಿಕ ಋತುಚಕ್ರದ ಮೊದಲ ದಿನ ರಜೆ ಪಡೆಯುವ ಸೌಕರ್ಯವನ್ನು ಇದೀಗ ಕೇರಳದ ಮಾತೃಭೂಮಿ ಟಿವಿ ಕಲ್ಪಿಸಿದೆ.

Advertisement

ಅಂತೆಯೇ ಮಾತೃಭೂಮಿ ಟಿವಿಯಲ್ಲಿ ದುಡಿಯುತ್ತಿರುವ ಮಹಿಳಾ ಉದ್ಯೋಗಿಗಳು ಈಗಿನ್ನು ವರ್ಷಕ್ಕೆ 12 ದಿನಗಳ “ಋತುಚಕ್ರದ ಮೊದಲ ದಿನ’ವಾಗಿ ರಜೆಯನ್ನು ಪಡೆಯಲಿದ್ದಾರೆ. ಈ ಮಹಿಳಾ ಉದ್ಯೋಗಿಗಳು ಈಗ ಪಡೆಯುತ್ತಿರುವ ಎಲ್ಲ ರಜಾ ಸೌಲಭ್ಯಕ್ಕೆ ಹೊರತಾದ ವಿಶೇಷ ರಜೆ ಇದಾಗಿದೆ. 

ಈ ಮೊದಲು ಮುಂಬಯಿಯ ಕಲ್ಚರ್‌ ಮಶೀನ್ಸ್‌ ಸಂಸ್ಥೆಯು ತನ್ನ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಋತು ಚಕ್ರದ ಮೊದಲ ದಿನದ ರಜೆ (ವರ್ಷಕ್ಕೆ 12 ದಿನ) ಸೌಕರ್ಯವನ್ನು ಪ್ರಕಟಿಸಿತ್ತು.

ಇಂಡೋನೇಶ್ಯ, ದಕ್ಷಿಣ ಕೊರಿಯ ಮತ್ತು ತೈವಾನ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಈ ರೀತಿಯ ರಜಾ ಸೌಕರ್ಯವಿದೆ. 

Advertisement

Udayavani is now on Telegram. Click here to join our channel and stay updated with the latest news.

Next