Advertisement

ಕೋವಿಡ್ 19 ನಿಯಂತ್ರಣಕ್ಕೆ ಕೇರಳ ಮಾದರಿ

04:54 AM May 09, 2020 | Suhan S |

ಕೋಲಾರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಪ್ರತಿ ಹಳ್ಳಿಯಲ್ಲಿ ಟಾಸ್ಕ್ ಫೋರ್ಸ್‌ ರಚಿಸಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಂಚಾರಿ ಚಿಕಿತ್ಸಾಲಯ ತೆರೆಯಬೇಕು ಎಂದು ಬಾಗೇಪಲ್ಲಿಯ ವೈದ್ಯ ಡಾ.ಅನಿಲ್‌ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

Advertisement

ನಗರದ ಹೊರವಲಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಕ್ರವಾರ ನಡೆದ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೊವಿಡ್‌ 19 ದಿನೇ ದಿನೆ ದೇಶದಲ್ಲಿ ಹೆಚ್ಚುತ್ತಿದೆ. ಅದರಿಂದ ಜನರನ್ನು ರಕ್ಷಿಸಲು ಸರಿಯಾದ ವ್ಯವಸ್ಥಿತವಾಗಿ ವೈದ್ಯಕೀಯ ವ್ಯವಸ್ಥೆಯನ್ನು ಕೇರಳ ಮಾದರಿ ನಮ್ಮ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ಎಂದರು. ಹಳ್ಳಿಯಲ್ಲಿ ಆರೋಗ್ಯದ ಸಮಸ್ಯೆಗೆ ಕರೆ ಮಾಡಿದರೇ ಸಾಕು ರೋಗಿಯ ಮನೆಗೆ ಸಂಚಾರಿ ಚಿಕಿತ್ಸಾಲಯ ಪರೀಕ್ಷಿಸಿ ಚಿಕಿತ್ಸೆ ನೀಡಬೇಕು.

ನಂತರ ಅವರನ್ನು ಹೆಚ್ಚಿನ ಆರೋಗ್ಯಕ್ಕಾಗಿ ನಿರ್ದಿಷ್ಟವಾದ ವಾಹನದಲ್ಲಿ ಆಸ್ಪತ್ರೆಗೆ ಕಳಸಿಕೊಡಬೇಕು. ಇದರಿಂದ ಇಂತಹ ಮಾದರಿಯ ವಿಧಾನವು ಕೋವಿಡ್ 19 ಬರದಂತೆ ತಡೆಯಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಸರ್ಜನ್‌ ಡಾ.ನಾರಾಯಣಸ್ವಾಮಿ, ಆರ್‌ಸಿಎಚ್‌ಆರ್‌ ಅಧಿಕಾರಿ ಚಂದನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next