Advertisement

ಕೇರಳದ ಮೆಡಿಕಲ್ ವಿದ್ಯಾರ್ಥಿಗಳ ಸಖತ್ ಸ್ಟೆಪ್ : ವಿಡಿಯೋ ವೈರಲ್

04:06 PM Apr 04, 2021 | Team Udayavani |

ನವದೆಹಲಿ : ಕೋವಿಡ್ ಸೋಂಕು ಹೆಚ್ಚಾದ ಸಮಯದಿಂದ ಹಿಡಿದು ಇಲ್ಲಿಯವರೆಗೆ ವೈದ್ಯರ ಕಷ್ಟಗಳು ಹೇಳತೀರದು. ಹಗಲು ಇರುಳು ಎನ್ನದೆ, ತಿಂಗಳುಗಟ್ಟಲೆ ರಜೆ ಇಲ್ಲದೆ ಕೆಲಸ ಮಾಡಿ ಕೋವಿಡ್ ವಿರುದ್ಧ ಹೋರಾಟ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಮನರಂಜನೆಗಾಗಿ ಕೆಲವು ವೈದ್ಯರು ಬೇರೆ ಬೇರೆ ರೀತಿಯ ಕಲೆಗಳನ್ನು ಪ್ರದರ್ಶನ ಮಾಡಿದ್ದಾರೆ. ಇದೇ ಹಿನ್ನೆಲೆಯಲ್ಲಿಯೇ ಕೇರಳದ ವೈದ್ಯ ವಿದ್ಯಾರ್ಥಿಗಳು ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

Advertisement

ಕೇರಳದ ತ್ರಿಸ್ಸುರ್ ಮೆಡಿಕಲ್ ಕಾಲೇಜಿನ ನಾಲ್ಕನೇ ಮತ್ತು ಐದನೇ ವರ್ಷದ ಮೆಡಿಕಲ್ ವಿದ್ಯಾರ್ಥಿಗಳಾದ ಜಾನಕಿ ಓಂ ಕುಮಾರ್ ಮತ್ತು ನವೀನ್ ರಜಾಕ್ ಎಂಬುವವರು ಮಾಡಿರುವ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಾಲೇಜು ಕಾರಿಡಾರ್ ನಲ್ಲಿ ಬೋನಿ ಎಂ ಅವರ 1978 ಯೂರೋ ಡಿಸ್ಕೋಗೆ ಸ್ಟೆಪ್ ಹಾಕಿದ್ದಾರೆ.

ಜನಪ್ರಿಯ ಕೋರಿಯೋಗ್ರಾಫರ್ ವನೆಸಾ ಸಕೋ ಅವರಿಂದ ಪ್ರೇರೇಪಣೆ ಪಡೆದ ಈ ಇಬ್ಬರು ಮಡಿಕಲ್ ವಿದ್ಯಾರ್ಥಿಗಳು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಇದೇ ಜೋಡಿಯ ಮತ್ತೊಂದು ವಿಡಿಯೋಗಾಗಿ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next