ಅಬುಧಾಬಿ: ಯುಎಇಯಲ್ಲಿ ನೆಲೆಸಿರುವ ಭಾರತೀಯರೊಬ್ಬರು ಎರಡನೇ ಬಾರಿಗೆ ಬಿಗ್ ಟಿಕೆಟ್ ಡ್ರಾ ಗೆದ್ದಿದ್ದಾರೆ. ಸೈದಾಲಿ ಕಣ್ಣನ್ 1 ಕೋಟಿ ರೂ.
ಮೌಲ್ಯದ ಎಲೆಕ್ಟ್ರಾನಿಕ್ ವಾರದ ಡ್ರಾವನ್ನು ಗೆದ್ದಿದ್ದಾರೆ.
ಬಾಣಸಿಗರಾಗಿ ಕೆಲಸ ಮಾಡುತ್ತಿರುವ ಕಣ್ಣನ್ ಅವರು 24 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. 1998 ರಲ್ಲಿ ನಗದು ಬಹುಮಾನ ಪಡೆದ ನಂತರ ಇದು ಎರಡನೇ ಬಾರಿಗೆ ಲಾಟರಿ ಗೆದ್ದಿದ್ದಾರೆ. ಕಣ್ಣನ್ ಫೆಬ್ರವರಿ 22 ರಂದು ಅವರ ಟಿಕೆಟ್ ಖರೀದಿಸಿದ್ದರು.
”ಕಳೆದ 20 ವರ್ಷಗಳಿಂದ ನಾನು ಸೈದಾಲಿಯೊಂದಿಗೆ ಬಹುತೇಕ ಪ್ರತಿ ತಿಂಗಳು ಟಿಕೆಟ್‌ಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅವನು ತುಂಬಾ ಅದೃಷ್ಟಶಾಲಿ ಎಂದು ನಾನು ನಂಬುತ್ತೇನೆ. ಅದು ಅಂತಿಮವಾಗಿ ಫಲ ನೀಡಿದೆ.” ಎಂದು ಕಣ್ಣನ್ ಅವರ ಸ್ನೇಹಿತ ಅಬ್ದುಲ್ ಮಜೀದ್ ಅವರು ಖಲೀಜ್ ಟೈಮ್ಸ್‌ಗೆ ಹೇಳಿಕೆ ನೀಡಿದ್ದಾರೆ.
ಭಾರತೀಯ ವಲಸಿಗರು ಯುಎಇಯಲ್ಲಿ ಲಾಟರಿ ಗೆದ್ದಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಯುಎಇಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇರಳದ ರಂಜಿತ್ ಸೋಮರಂಜನ್ ರಾಫೆಲ್ ಡ್ರಾದಲ್ಲಿ 40 ಕೋಟಿ ರೂ.( 20 ಮಿಲಿಯನ್ ದಿರ್ಹಮ್) ಗೆದ್ದಿದ್ದರು. ರಂಜಿತ್ ಸೋಮರಂಜನ್ ಮತ್ತು ಅವರ ಇತರ ಒಂಬತ್ತು ಸಹವರ್ತಿಗಳು ಬಹುಮಾನದ ಜಂಟಿ ವಿಜೇತರು ಎಂದು ಘೋಷಿಸಲಾಗಿತ್ತು.
“ನಾವು ಒಟ್ಟು 10 ಜನ. ಇತರರು ಭಾರತ, ಪಾಕಿಸ್ಥಾನ, ನೇಪಾಳ ಮತ್ತು ಬಾಂಗ್ಲಾದೇಶದಂತಹ ವಿವಿಧ ದೇಶಗಳಿಂದ ಬಂದವರು. ಅವರು ಹೋಟೆಲ್‌ನ ವ್ಯಾಲೆಟ್ ಪಾರ್ಕಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದವರು ಹಣ ಹಂಚಿಕೊಂಡಿದ್ದರು.