ತಿರುವನಂತಪುರ: ಸ್ವಯಂ ನಿರ್ಮಿತ ಬೈಕ್, ಕಾರನ್ನು ಕೇಳಿರುತ್ತೀರಿ. ಆದರೆ ಕೇರಳ ಮೂಲದ ಮೆಕಾನಿಕಲ್ ಇಂಜಿನಿಯರ್ ಒಬ್ಬರು ಪುಟಾಣಿ ವಿಮಾನವನ್ನೇ ತಯಾರಿಸಿಕೊಂಡು,ಬ್ರಿಟನ್‌ನಾದ್ಯಂತ ಫ್ಯಾಮಿಲಿ ಟ್ರಿಪ್ ಮಾಡಿದ್ದಾರೆ.
2006ರಿಂದ ಲಂಡನ್‌ನಲ್ಲಿ ನೆಲೆಸಿರುವ ಅಶೋಕ್ ಅಲಿಸೆರಿಲ್ ಥಾಮರಕ್ಷಣ್ 2018ರಲ್ಲಿ ಪೈಲೆಟ್ ಪರವಾನಗಿ ಪಡೆದಿದ್ದಾರೆ.
ಮೊದ ಮೊದಲು ಅವರು 2 ಸೀಟಿನ ವಿಮಾನವನ್ನು ಬಾಡಿಗೆ ಪಡೆದು ಅದರಲ್ಲಿ ಪ್ರವಾಸ ಮಾಡುತ್ತಿದ್ದರಂತೆ.
2018ರಲ್ಲಿ ಸ್ಲಿಂಗ್ ಏರ್‌ಕ್ರಾಫ್ಟ್ ಸಂಸ್ಥೆಯು 4 ಸೀಟಿನ ಸ್ಲಿಂಗ್ ಟಿಎಸ್‌ಐ ವಿಮಾನ ಬಿಡುಗಡೆ ಮಾಡಿದ್ದನ್ನು ಕಂಡು ಅದರಂತೆಯೇ ತಾವೂ ನಾಲ್ಕು ಸೀಟಿನ ವಿಮಾನ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಒಟ್ಟು 1.8 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳುಗಳಲ್ಲಿ ವಿಮಾನ ತಯಾರಿಸಿದ್ದಾರೆ. ಅದಕ್ಕೆ “ಜಿ-ದಿಯಾ’ ಹೆಸರು ಕೊಟ್ಟಿದ್ದು, ಪತ್ನಿ ಅಭಿಲಾಷಾ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪೂರ್ತಿ ಬ್ರಿಟನ್ ಅನ್ನು ಅದೇ ವಿಮಾನದಲ್ಲಿ ಪ್ರವಾಸ ಮಾಡಿದ್ದಾರೆ.
ಇದೀಗ ಅವರು ರಜೆಯ ಮೇರೆಗೆ ಕೇರಳದಲ್ಲಿದ್ದು, ಮಾಧ್ಯಮಗಳೊಂದಿಗೆ ತಮ್ಮ ವಿಮಾನದ ಕಥೆಯನ್ನು ಹಂಚಿಕೊಂಡಿದ್ದಾರೆ.