Advertisement
ಕೇರಳದ 31 ವರ್ಷದ ಅನಾಸ್ ಕಳೆದ ಮೇ 29 ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,700 ಕಿ. ಮೀ. ಯಾತ್ರೆಯನ್ನು ಸ್ಕೇಟಿಂಗ್ ಮೂಲಕ ನಡೆಸಲು ನಿರ್ಧರಿಸಿದ್ದರು ಅದರಂತೆ ಮೇ 29 ರಂದು ಕನ್ಯಾಕುಮಾರಿಯಿಂದ ಹೋರಾಟ ಯಾತ್ರೆ ಸುಗಮವಾಗಿ ನಡೆಯಿತು ತನ್ನ ಪಯಣದ ವಿಡಿಯೋಗಳನ್ನು ಅನಾಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದರು ಆದರೆ ಅನಾಸ್ ಯಾವ ಉದ್ದೇಶಕ್ಕೆ ಹೊರಟಿದ್ದಾರೋ ಆ ಕೆಲಸ ಮಾತ್ರ ಪೂರ್ಣಗೊಳ್ಳಲಿಲ್ಲ ಇನ್ನೇನು ಕಾಶ್ಮೀರಕ್ಕೆ ೬೦೦ ಕಿ. ಮೀ ಮಾತ್ರ ಬಾಕಿ ಇರುವಾಗಲೇ ಯಮನ ರೂಪದಲ್ಲಿ ಬಂದ ಟ್ರಕ್ ಅನಾಸ್ ಗೆ ಢಿಕ್ಕಿ ಹೊಡೆದಿದೆ ಗಂಭೀರ ಗಾಯಗೊಂಡ ಯುವಕನನ್ನು ಆ ಕೂಡಲೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು ಆದರೆ ಅಷ್ಟೋತ್ತಿಗಾಗಲೇ ಅನಾಸ್ ನ ಜೀವ ಹೋಗಿತ್ತು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.
ಸ್ಕೇಟಿಂಗ್ ಬಗ್ಗೆ ಜಾಗೃತಿ ಮೂಡಿಸಲು ಯಾತ್ರೆ ಆರಂಭಿಸಿದ ಅನಾಸ್ ತನ್ನ ದಿನದ ಪ್ರಯಾಣದ ಕುರಿತು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದ ಅದರಲ್ಲಿ ಅವನು ಹೇಳಿದಂತೆ ದಿನಕ್ಕೆ 40 ರಿಂದ 50 ಕಿ.ಮೀ ಮಾತ್ರ ಸ್ಕೇಟಿಂಗ್ ಮಾಡುತ್ತಿದ್ದೇನೆ. ಇಲ್ಲಿಯವರೆಗೆ, ಎಲ್ಲವೂ ಸುರಕ್ಷಿತವಾಗಿದೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದ ಆದರೆ ವಿಧಿಯ ಬಯಕೆಯೇ ಬೇರೆ ಆಗಿತ್ತು. ಅನಾಸ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಮುಗಿಸಿದ ನಂತರ ತಿರುವನಂತಪುರಂನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಹೊಸ ಸ್ಕೇಟಿಂಗ್ ಬೋರ್ಡ್ ಕೊಂಡಿದ್ದರು ಅಲ್ಲದೆ ಕಶ್ಮೀರ ಯಾತ್ರೆ ಬಳಿಕ ಇನ್ನು ಹಲವು ಯಾತ್ರೆಗಳ ಯೋಚನೆಯನ್ನು ಮಾಡಿದ್ದರು ಎನ್ನಲಾಗಿದೆ.
Related Articles
Advertisement