Advertisement

ಲೆಬನಾನ್‌ ಕ್ಷಿಪಣಿ ದಾಳಿ: 2 ತಿಂಗಳ ಹಿಂದೆಯಷ್ಟೇ ಇಸ್ರೇಲ್‌ ಗೆ ತೆರಳಿದ್ದ ಕೇರಳಿಗನ ಮೃತ್ಯು

08:42 AM Mar 06, 2024 | Team Udayavani |

ಜೆರುಸಲೇಂ: ಇಸ್ರೇಲನ್ನು ಗುರಿಯಾಗಿಸಿಕೊಂಡು ಲೆಬನಾನ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಅಸುನೀಗಿದ್ದಾರೆ. ಉತ್ತರ ಇಸ್ರೇಲ್‌ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮತ್ತಿಬ್ಬರು ಕೇರಳಿಗರೂ ಗಾಯ­ಗೊಂಡಿದ್ದಾರೆ.

Advertisement

ಮತೃರನ್ನು ಕೇರಳದ ಕೊಲ್ಲಂನ ಪ್ಯಾಟ್‌ನಿಬಿನ್‌ ಮ್ಯಾಕ್ಸ್‌ವೆಲ್‌ (30) ಎಂದು ಗುರುತಿಸಲಾಗಿದೆ. 2 ತಿಂಗಳು ಮೊದಲು ಕೋಳಿ ಫಾರಂವೊಂದರಲ್ಲಿ ಕೆಲಸ ಮಾಡುವುದಕ್ಕಾಗಿ ಇವರು ಇಸ್ರೇಲ್‌ಗೆ ಪ್ರಯಾಣಿಸಿದ್ದರು. ಅವರಿಗೆ ಈಗಾಗಲೇ 5 ವರ್ಷದ 1 ಮಗುವಿದ್ದು, 2ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಇದೇ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ, ಜೋಸೆಫ್ ಜಾರ್ಜ್‌ (31) ಮತ್ತು ಪಾಲ್‌ ಮೆಲ್ವಿನ್‌ (28) ಎಂಬ ಮತ್ತಿಬ್ಬರು ಗಾಯಗೊಂಡಿದ್ದಾರೆ.

ತಪ್ಪಿದ ಗುರಿಗೆ ಬಲಿ: ಸೋಮವಾರ ಇಸ್ರೇಲ್‌ ಟ್ಯಾಂಕರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಕ್ಷಿಪಣಿ ದಾಳಿ ಗುರಿ ತಪ್ಪಿ ಕೃಷಿ ಭೂಮಿಯೊಂದರ ಮೇಲೆ ಬಿದ್ದಿದೆ. ಹೀಗಾಗಿ ಈ ಅನಾಹುತ ಉಂಟಾಗಿದೆ.

ಭಾರತದ ಎಚ್ಚರಿಕೆ: ಕ್ಷಿಪಣಿ ದಾಳಿಗೆ ಭಾರತೀಯ­ನೊಬ್ಬ ಬಲಿಯಾದ ಬೆನ್ನಲ್ಲೆ ಎಚ್ಚರಿಕೆಯ ಮಾರ್ಗಸೂಚಿ ಬಿಡುಗಡೆ ಮಾಡಿರುವ ಭಾರತ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಇಸ್ರೇಲ್‌ನ ಗಡಿ ಪ್ರದೇಶಗಳನ್ನು ತೊರೆದು ದೇಶದೊಳಗಿನ ಸುರಕ್ಷಿತ ಸ್ಥಳಕ್ಕೆ ಸಾಧ್ಯವಾದಷ್ಟು ಬೇಗ ತೆರಳಬೇಕು ಎಂದು ಸೂಚಿಸಿದೆ.

13 ಭಾರತೀಯರಿದ್ದ ನೌಕೆಯ ಮೇಲೆ ಹೌತಿ ದಾಳಿ, ನೌಕಾಪಡೆಯಿಂದ ರಕ್ಷಣೆ
ಹೊಸದಿಲ್ಲಿ: ಕೆಂಪು ಸಮುದ್ರದ ಗಲ್ಫ್ ಏಡನ್‌ ಬಳಿ ಲೈಬೀರಿಯಾ ಹಗಡಿನ ಮೇಲೆ ಹೌತಿ ಉಗ್ರರು ನಡೆಸಿದ ಡ್ರೋನ್‌ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. ಈ ವೇಳೆ ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ 23 ಮಂದಿಯನ್ನು ರಕ್ಷಿಸಿದೆ. ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಉಪಟಳ ಹೆಚ್ಚಾದ ಬೆನ್ನಲ್ಲೇ ಭಾರತ ತನ್ನ ನೌಕಾಪಡೆಯನ್ನು ರಕ್ಷಣೆಗಾಗಿ ನೇಮಕ ಮಾಡಿದೆ. ಕಳೆದ ವಾರವೂ ಸಹ ಒಂದು ಹಡಗನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿತ್ತು.

Advertisement

ಇದನ್ನೂ ಓದಿ: Underwater Metro: ದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗಕ್ಕೆ ಇಂದು ಪ್ರಧಾನಿ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next