Advertisement

ಲವ್‌ ಜೆಹಾದ್‌: ಯುವತಿಯ ಹಾಜರುಪಡಿಸಲು ಆದೇಶ

06:40 AM Oct 31, 2017 | Team Udayavani |

ಹೊಸದಿಲ್ಲಿ: ಕೇರಳ “ಲವ್‌ ಜೆಹಾದ್‌’ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ಯುವಕನ  ಮದುವೆಯಾಗಿರುವ ಯುವತಿ ಹದಿಯಾ(ಅಖೀಲಾ)ಳನ್ನು ನ.27ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ಆಕೆಯ ತಂದೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

Advertisement

“ನಾವು ಕಾನೂನಿನ ಪ್ರಕಾರವೇ ನಡೆಯಬೇಕಾಗುತ್ತದೆ. ಹದಿಯಾ ನಮ್ಮ ಮುಂದೆ ಹಾಜರಾಗಲಿ. ಆಕೆಯ ಮಾನಸಿಕ ಸ್ಥಿತಿಯನ್ನು ಪರಿ ಶೀಲಿಸಿ, ಆಕೆಯ ಒಪ್ಪಿಗೆಯ ಮೇರೆಗೆ ಈ ಮದುವೆ ನಡೆದಿದೆಯೋ ಎಂಬುದನ್ನು ದೃಢಪಡಿಸಬೇಕಿದೆ. ಅವಳ ಜತೆ ಮಾತನಾಡಿದರೆ, ಕನಿಷ್ಠಪಕ್ಷ ಮೇಲ್ನೋಟಕ್ಕಾದರೂ ವಿಚಾರ ಮನದಟ್ಟಾಗುತ್ತದೆ,’ ಎಂದು ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಹೇಳಿದೆ.

ಇದೇ ವೇಳೆ, ಹದಿಯಾ ವಿವಾಹವಾದ ಯುವಕ ಒಬ್ಬ ಕ್ರಿಮಿನಲ್‌ ಎಂಬ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ವಾದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, “ಕ್ರಿಮಿನಲ್‌ನನ್ನು ಮದುವೆ ಆಗಬಾರದು ಎಂದು ಯಾವ ಕಾನೂನು ಹೇಳಿದೆ? ಯಾರನ್ನು ಬೇಕಿದ್ದರೂ ವಿವಾಹವಾಗುವ ಹಕ್ಕು ಯುವತಿಗಿರುತ್ತದೆ. ಅದು ಅವರವರ ವೈಯಕ್ತಿಕ ನಿರ್ಧಾರ’ ಎಂದಿದೆ.

ಎನ್‌ಐಎ ಹೇಳಿದ್ದೇನು?: ಕೇರಳದಲ್ಲಿ ವ್ಯವಸ್ಥಿತವಾಗಿ ಲವ್‌ ಜೆಹಾದ್‌ ಘಟನೆಗಳು ನಡೆಯುತ್ತಿದ್ದು, ಇಂಥ 89 ಪ್ರಕರಣಗಳು ದಾಖಲಾಗಿವೆ. ಹದಿಯಾಳ ಪತಿ ಶಫೀನ್‌ ಜಹಾನ್‌ ಉಗ್ರವಾದದತ್ತ ಪ್ರೇರೇಪಿತನಾದ ವ್ಯಕ್ತಿ. ಪಿಎಫ್ಐನಂಥ ಸಂಘಟನೆಗಳು ಸಮಾಜ ವನ್ನು ಉಗ್ರವಾದದತ್ತ ಪ್ರೇರೇಪಿಸುತ್ತಿದೆ ಎಂದು ಎನ್‌ಐಎ ವಾದಿಸಿದೆ.

ಮತ್ತೂಂದು ಪ್ರಕರಣ ಸುಪ್ರೀಂಗೆ
ಕೇರಳದ ಮತ್ತೂಂದು ಲವ್‌ ಜೆಹಾದ್‌ ಪ್ರಕರಣವೂ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ನನ್ನ ಮಗಳೂ ಲವ್‌ ಜೆಹಾದ್‌ನ ಬಲೆಗೆ ಬಿದ್ದಿದ್ದು, ಇಸ್ಲಾಂಗೆ ಮತಾಂತರಗೊಂಡಿ ದ್ದಾಳೆ. ಅಷ್ಟೇ ಅಲ್ಲ, ಅಫ್ಘಾನಿಸ್ಥಾನಕ್ಕೆ ತೆರಳಿ ಐಸಿಸ್‌ ಉಗ್ರ ಸಂಘಟನೆಗೆ ಸೇರಿದ್ದಾಳೆ. ಕೇರಳ ಸಹಿತ ದೇಶಾದ್ಯಂತ ಇಂಥ ಪ್ರಕರಣಗಳು ನಡೆಯುತ್ತಲೇ ಇದ್ದು, ಈ ಕುರಿತು ಎನ್‌ಐಎಯಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಅರ್ಜಿದಾರರಾದ ಬಿಂದು ಸಂಪತ್‌ ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next