ಉಳ್ಳಾಲ: ಜನರು ತಮ್ಮ ಅದೃಷ್ಟ ಪರೀಕ್ಷೆಗೆ ವಿವಿಧ ಕಸರತುಗಳನ್ನು ಮಾಡುತ್ತಾರೆ. ಅದೃಷ್ಟದಾಟದಲ್ಲಿ ಹಣ ಕಳೆದುಕೊಂಡವರೂ ಇದ್ದಾರೆ. ಕೆಲವರು ದಿಢೀರ್ ಶ್ರೀಮಂತಿಕೆಯ ಆಸೆಯಲ್ಲಿ ಲಾಟರಿ ಟಿಕೆಟ್ ಖರೀದಿಸಿ ಬಹುಮಾನ ಬಂದಿದೆಯಾ ಎಂದು ಚಾತಕಪಕ್ಷಿಯಂತೆ ಕಾಯುತ್ತಾರೆ. ಆದರೆ ಇಲ್ಲೊಬ್ಬರಿಗೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದಿದ್ದರೂ ವಿಜೇತ ವ್ಯಕ್ತಿ ಯಾರು ಎಂದು ತಿಳಿದುಬಂದಿಲ್ಲ.
ಗಡಿ ಭಾಗವಾದ ತಲಪಾಡಿಯಲ್ಲಿರುವ ಅಮಲ್ ಕನಕದಾಸ ಅವರಿಗೆ ಸೇರಿದ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮೇ 7ರಂದು ಮಾರಾಟವಾದ ಕೇರಳ ರಾಜ್ಯದ ಅಕ್ಷಯ ಲಾಟರಿ ಟಿಕೆಟ್‌ಗೆ (ನಂಬರ್: ಎ.ಟಿ. 317545) 70 ಲಕ್ಷ ರೂ. ಬಂಪರ್ ಬಹುಮಾನ ಬಂದಿದೆ. ಟಿಕೆಟ್ ಖರೀದಿಸಿ ವ್ಯಕ್ತಿ ಈ ವರೆಗೆ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಏಜೆನ್ಸಿಯವರು ಬಂಪರ್ ಬಹುಮಾನ ವಿಜೇತನಿಗಾಗಿ ಕಾಯುತ್ತಿದ್ದಾರೆ.