Advertisement

ಕೇರಳ ಲೋಕಲ್‌ ಫೈಟ್‌: ಶೇ.74 ಮತ

07:10 AM Dec 09, 2020 | mahesh |

ತಿರುವನಂತಪುರ: ಕೇರಳದ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದ ಮತದಾನ ಮಂಗಳವಾರ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕೊರೊನಾ ಸೋಂಕು ಭೀತಿ ಹೊರತಾಗಿಯೂ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಇಡುಕ್ಕಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಗೆ ಮತದಾರರು ಉತ್ಸಾಹದಿಂದ ಹಕ್ಕು ಚಲಾಯಿಸಿದರು. ಚುನಾವಣಾ ಆಯೋಗ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿ ಪ್ರಕಾರ ಶೇ.74ರಷ್ಟು ಹಕ್ಕು ಚಲಾವಣೆಯಾಗಿದೆ. ಹಲವು ಮತಗಟ್ಟೆಗಳಲ್ಲಿ ಪಿಪಿಇ ಕಿಟ್‌ ಧರಿಸಿದವರಿಗೂ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು.

Advertisement

ಐದೂ ಜಿಲ್ಲೆಗಳಲ್ಲಿ ಸಂಜೆ ಆರು ಗಂಟೆಯ ಬಳಿಕವೂ ಜನರು ಸರತಿಯಲ್ಲಿ ಮತ ಚಲಾವಣೆಗೆ ನಿಂತಿದ್ದರು. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ನಡುವೆ ನೇರ ಹಣಾಹಣಿ ಇದೆ. ತಿರುವನಂತಪುರ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸವಾಲು ಇದೆ. ಎರಡನೇ ಹಂತದ ಚುನಾವಣೆ ಡಿ.10ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next