Advertisement

ಲಂಕಾ ದಾಳಿಗೆ ಕೇರಳ ಲಿಂಕ್‌? ಕಾಸರಗೋಡು ಮತ್ತು ಪಾಲಕ್ಕಾಡ್‌ನ‌ಲ್ಲಿ ಶೋಧ ಕಾರ್ಯ

01:31 AM Apr 29, 2019 | sudhir |

ಹೊಸದಿಲ್ಲಿ / ತಿರುವನಂತಪುರ: ಶ್ರೀಲಂಕಾದಲ್ಲಿ ಎಪ್ರಿಲ್‌ 21ರಂದು ನಡೆದ ಸರಣಿ ಬಾಂಬ್‌ ಸ್ಫೋಟ ಮತ್ತು ಐಸಿಸ್‌ಗೆ ಸೇರಲು ಕೇರಳದ ಕೆಲವರು ವಿದೇಶಕ್ಕೆ ತೆರಳಿರುವ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕೈಗೆತ್ತಿಕೊಂಡಿದೆ.

Advertisement

ರವಿವಾರ ಕಾಸರಗೋಡು ಮತ್ತು ಪಾಲಕ್ಕಾಡ್‌ನ‌ಲ್ಲಿ ಮೂವರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಲ್ಲದೆ ಇವರ ಮನೆಗಳಿಂದ ಹಲವು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವರು ಐಸಿಸ್‌ ಸೇರುವುದಕ್ಕಾಗಿ ದೇಶ ತೊರೆದವರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಇವರಿಂದ ವಿವಾದಿತ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ ಭಾಷಣ ಇರುವ ಡಿವಿಡಿಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಆದರೆ ಶ್ರೀಲಂಕಾ ಸ್ಫೋಟ ಮತ್ತು ಕಾಸರಗೋಡಿನಲ್ಲಿ ಪತ್ತೆಯಾಗಿರುವ ಐಸಿಸ್‌ ಲಿಂಕ್‌ ನಡುವೆ ಸಂಪರ್ಕ ಇರುವುದು ಸದ್ಯಕ್ಕೆ ಗೊತ್ತಾಗಿಲ್ಲ ಎಂದು ವರದಿಯಾಗಿದೆ.

ಈಚೆಗಿನ ಕೆಲವು ವರ್ಷಗಳಲ್ಲಿ 21ಕ್ಕೂ ಹೆಚ್ಚು ಜನರು ಕೇರಳದಿಂದ ಸಿರಿಯಾ ಮತ್ತು ಇರಾಕ್‌ಗಳಿಗೆ ತೆರಳಿ ಅಲ್ಲಿ ಐಸಿಸ್‌ ಸಂಪರ್ಕ ಹೊಂದಿದ ಉಗ್ರ ಸಂಘಟನೆ ಸೇರಿದ್ದಾರೆ ಎನ್ನಲಾಗಿದೆ. ಇದು ತನಿಖಾ ಸಂಸ್ಥೆಗಳಿಗೆ ತಲೆನೋವು ಉಂಟು ಮಾಡಿದ್ದು, ಮೂಲಗಳ ಪ್ರಕಾರ ಈ ಪೈಕಿ ಹಲವರು ಸಿರಿಯಾ ಮತ್ತು ಇರಾಕ್‌ನಲ್ಲಿ ನಡೆದ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ.

ಸತ್ತದ್ದೇ ಒಳ್ಳೇದಾಯ್ತು!
ಆತ ಸತ್ತದ್ದೇ ಒಳ್ಳೆಯದಾಯ್ತು. ಈತ ನಮ್ಮ ಕುಟುಂಬವನ್ನೇ ನಾಶ ಮಾಡಿದ ಎಂದು ಝಹ್ರನ್‌ Öಶಿಮ್‌ನ ಸೋದರಿ ಮದನಿಯಾ ಪ್ರತಿಕ್ರಿಯಿಸಿದ್ದಾರೆ. ಝಹ್ರನ್‌ ಬಗ್ಗೆ ವಿಚಾರಣೆ ನಡೆಸಲು ಆಕೆಯ ಮನೆಗೆ ಶ್ರೀಲಂಕಾ ಪೊಲೀಸರು ತೆರಳಿದಾಗ, ಆತನ ಮನಃಸ್ಥಿತಿಯನ್ನು ಆಕೆ ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ.

Advertisement

ಝಹ್ರನ್‌ ಇಸ್ಲಾಂ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿದ್ದ. ತನ್ನ ಧರ್ಮವೊಂದೇ ಶ್ರೇಷ್ಠ. ಆಧುನಿಕ ಮುಸ್ಲಿಂ ಮತ್ತು ಸೂಫಿಗಳೆಲ್ಲರೂ ಮಾದಕ ವ್ಯಸನಿಗಳು ಎನ್ನುತ್ತಿದ್ದ. ಇತರ ಧರ್ಮದವರನ್ನು ದ್ವೇಷಿಸುತ್ತಿದ್ದ. ಆತನ ಮನಸ್ಸಲ್ಲಿ ವಿಷವೇ ತುಂಬಿತ್ತು. ಸಂಗೀತ ಕೇಳುವುದೂ ತಪ್ಪು ಎನ್ನುತ್ತಿದ್ದ. ಈತನ ಚಿಂತನೆಯನ್ನು ನಾನು ವಿರೋಧಿಸುತ್ತಿದ್ದೆ. ಹೀಗಾಗಿ ನಾನು ಮತ್ತು ನನ್ನ ಪತಿ ಅವನಿಂದ ದೂರವಾಗಿದ್ದೆವು. ಆದರೆ ನನ್ನ ಸೋದರಿಯ ಮನೆಯಲ್ಲಿ ವಾಸಿಸುತ್ತಿರುವ ತಂದೆ ತಾಯಿಗೆ ತಿಂಡಿ ತಿನಿಸುಗಳನ್ನು ನಾನು ಕಳಿಸುತ್ತಿದ್ದೆ. ಎ. 18ರಂದು ಅವರು ಮನೆಯಲ್ಲಿಲ್ಲ ಎಂಬುದು ಪಕ್ಕದ ಮನೆಯವರಿಂದ ತಿಳಿಯಿತು. ಅನಂತರ ಎ. 21ರಂದು ನಡೆದ ಬಾಂಬ್‌ ಸ್ಫೋಟದಲ್ಲಿ ಝಹ್ರನ್‌ ಕೈವಾಡ ಇರುವುದು ತಿಳಿಯಿತು ಎಂದು ಮದನಿಯಾ ಹೇಳಿದ್ದಾರೆ. ಎ. 18ರಂದು ಝಹ್ರನ್‌ ಕುಟುಂಬದ 16 ಮಂದಿ ನಾಪತ್ತೆಯಾಗಿದ್ದಾರೆ.

ಭಾರತಕ್ಕೆ ಬಂದಿರಲಿಲ್ಲ?
ಝಹ್ರನ್‌ ಸೋದರಿ ಮದನಿಯಾ ಪ್ರಕಾರ ಈತ ಭಾರತಕ್ಕೆ ಪ್ರವಾಸ ಕೈಗೊಂಡಿರುವ ಸಾಧ್ಯತೆಯಿಲ್ಲ. ಯಾಕೆಂದರೆ ಒಂದು ದಶಕದ ಹಿಂದೆ ಆತ ಜಪಾನ್‌ಗೆ ಹೋಗಿದ್ದ. ಅನಂತರ ಆತನ ಪಾಸ್‌ಪೋರ್ಟ್‌ ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹೀಗಾಗಿ ಈತ ಭಾರತಕ್ಕೆ ಭೇಟಿ ನೀಡಿರುವ ಸಾಧ್ಯತೆಯಿಲ್ಲ ಎಂದಿದ್ದಾರೆ.

ಭಾರತದ ಎನ್‌ಎಸ್‌ಜಿ ಬೇಕಿಲ್ಲ: ರಾಜಪಕ್ಷೆ
ಈ ಹಿಂದೆ ಭಾರತ ನಮಗೆ ನೆರವಾಗಿದೆ. ಆದರೆ ಈಗ ಭಾರತದ ಎನ್‌ಎಸ್‌ಜಿಯ ಅಗತ್ಯ ಇಲ್ಲ; ನಮ್ಮ ಸೇನಾಬಲವೇ ಸಾಕು. ಅವರಿಗೆ ಅಧಿಕಾರ ಮತ್ತು ಸ್ವಾತಂತ್ರ್ಯ ನೀಡಬೇಕಷ್ಟೇ ಎಂದು ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆÕ ಹೇಳಿದ್ದಾರೆ. ಅಗತ್ಯವಿದ್ದರೆ ಶ್ರೀಲಂಕಾಗೆ ಕಳುಹಿಸಿಕೊಡಲು ಭಾರತ ಎನ್‌ಎಸ್‌ಜಿ ಪಡೆಯನ್ನು ಸಿದ್ಧವಾಗಿರಿಸಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ರಾಜಪಕ್ಸೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದೆಡೆ ಅವರು ಶ್ರೀಲಂಕಾ ಸರಕಾರದ ವಿರುದ್ಧ ಆರೋಪಗಳನ್ನೂ ಮಾಡಿದ್ದಾರೆ. ಸರಕಾರ ರಾಜಕೀಯ ಮಾಡುವುದರಲ್ಲಿ ತೊಡಗಿಸಿಕೊಂಡಿದೆ. ಉಗ್ರ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಇವರಿಗೆ ಮತ ಬ್ಯಾಂಕ್‌ನ ಚಿಂತೆಯಾಗಿತ್ತು. ಹೀಗಾಗಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

2 ಬಾರಿ ಭಾರತಕ್ಕೆ ಬಂದಿದ್ದ ಬಾಂಬರ್‌!
ಲಂಕಾ ಆತ್ಮಾಹುತಿ ದಾಳಿಕೋರರಲ್ಲಿ ಒಬ್ಬನಾದ ಮೊಹಮ್ಮದ್‌ ಮುಬಾರಜ್‌ ಆಝಾನ್‌ಗೂ ಭಾರತದ ನಂಟಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈತ 2017ರಲ್ಲಿ ಎರಡು ಬಾರಿ ಭಾರತಕ್ಕೆ ಬಂದಿದ್ದ ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಝಹ್ರಾನ್‌ ಹಾಶಿಮ್‌ ಎಂಬ ಹೆಸರಿನ ದಾಳಿ ಕೋರ ಭಾರತಕ್ಕೆ ಭೇಟಿ ನೀಡಿದ್ದ ವಿಚಾರ ಇತ್ತೀಚೆಗೆ ಗೊತಾಗಿತ್ತು. ಈಗ ಮತ್ತೂಬ್ಬ ದಾಳಿಕೋರನಿಗೂ ಭಾರತಕ್ಕೂ ಸಂಬಂಧವಿರುವ ವಿಚಾರ ಬಹಿರಂಗವಾಗಿದೆ. ಆತ ಬಂದದ್ದೇಕೆ ಮತ್ತು ಯಾರ್ಯಾರನ್ನು ಭೇಟಿ ಮಾಡಿದ್ದ ಎಂಬ ಬಗ್ಗೆ ವಿವರ ನೀಡಲು ಭಾರತೀಯ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು “ಹಿಂದುಸ್ಥಾನ್‌ ಟೈಮ್ಸ್‌’ ವರದಿ ಮಾಡಿದೆ.

ದಾಳಿಕೋರ ಹಾಶಿಮ್‌ಗೆ ತಮಿಳುನಾಡು ತೌಹೀದ್‌ ಜಮಾತ್‌ ಸಂಘಟನೆ ಜತೆ ನಂಟಿತ್ತು. ಆದರೆ ಈ ಸಂಘಟನೆಯು ಯಾವುದೇ ವಿಧ್ವಂಸಕ ಕೃತ್ಯಗಳಲ್ಲೂ ಭಾಗಿಯಾದ ಉದಾಹರಣೆಗಳಿಲ್ಲ. ಈ ಸಂಘಟನೆಯಿಂದ ಹೊರಬಂದ ಹಾಶಿಮ್‌, ಅನಂತರ ನ್ಯಾಷನಲ್‌ ತೌಹೀದ್‌ ಜಮಾತ್‌(ಎನ್‌ಟಿಜೆ) ಎಂಬ ಸಂಘಟನೆ ಹುಟ್ಟುಹಾಕಿ, ಶ್ರೀಲಂಕಾದಲ್ಲಿ ಹಿಂಸಾತ್ಮಕ ಮಾದರಿಯಲ್ಲಿ ಇಸ್ಲಾಂ ಬೋಧಿಸತೊಡಗಿದ್ದ. ಈ ವೇಳೆ ಈತನಿಗೆ ಐಸಿಸ್‌ ಜತೆ ಸಂಪರ್ಕವಾಗಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಹಾಶಿಮ್‌ ಕೇರಳದ ಮಲಪ್ಪುರಂ, ತಮಿಳುನಾಡಿನ ಕೊಯಮತ್ತೂರು, ತಿರುಚಿರಾಪಳ್ಳಿ, ತಿರುನಲ್ವೇಲಿ, ವೆಲ್ಲೂರ್‌ ಮತ್ತು ನಾಗಪಟ್ಟಿಣಂಗೆ ಭೇಟಿ ನೀಡಿದ್ದ. ತ.ನಾಡಿನ ರಾಮನಾಥಪುರ ಮತ್ತು ಲಂಕೆಯ ಕಲ್ಪಿತಿಯಾ ನಡುವೆ ಕಳ್ಳಸಾಗಣೆ ದಂಧೆಯನ್ನೂ ಈತ ನಡೆಸುತ್ತಿದ್ದ. ತನಿಖೆ ಆರಂಭಿಕ ಹಂತದಲ್ಲಿದ್ದು, ಹಾಶಿಮ್‌ ಮತ್ತು ಆಝಾನ್‌ ಲಂಕಾದಿಂದ ಭಾರತಕ್ಕೆ ಬಂದಿರುವ ಪ್ರಯಾಣ ದಾಖಲೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಸರಗೋಡಿನ 2 ಮನೆಗಳಿಗೆ ಎನ್‌ಐಎ ದಾಳಿ
ಕಾಸರಗೋಡು: ಶ್ರೀಲಂಕಾ ಸ್ಫೋಟದ ಸೂತ್ರಧಾರ ಝಹ್ರಾನ್‌ ಹಶೀಮ್‌ ಕೇರಳಕ್ಕೆ ಪದೇಪದೆ ಭೇಟಿ ನೀಡಿರುವ ಮಾಹಿತಿಯ ಬೆನ್ನಲ್ಲೇ ಎನ್‌ಐಎ ಕಾಸರಗೋಡಿನ ಎರಡು ಮನೆಗಳಿಗೂ ದಾಳಿ ನಡೆಸಿದೆ.

ಮಧೂರು ಕಾಳಾÂಂಗಾಡ್‌ ಮತ್ತು ತಾಯಲ್‌ ನಾಯಮ್ಮಾರ ಮೂಲೆ ನಿವಾಸಿಯ ಮನೆಗಳಿಗೆ ಎನ್‌ಐಎ ದಾಳಿ ನಡೆಸಿ ಇಬ್ಬರು ಯುವಕರನ್ನು ಎ. 29ರಂದು ಕೊಚ್ಚಿಯ ಎನ್‌ಐಎ ಕಚೇರಿಗೆ ಹಾಜ ರಾಗುವಂತೆ ನೋಟಿಸ್‌ ನೀಡಿದೆ.

ಮೊಬೈಲ್‌ ಫೋನ್‌ಗಳು, ಸಿಮ್‌ ಕಾರ್ಡ್‌ಗಳು, ಮೆಮೊರಿ ಕಾರ್ಡ್‌ , ಪೆನ್‌ ಡ್ರೈವ್‌ಗಳು, ಡೈರಿ, ಅರೆಬಿಕ್‌ ಮತ್ತು ಮಲಯಾಳದಲ್ಲಿ ಬರೆದ ಕೈಬರಹದ ಸಾಹಿತ್ಯ, ಧಾರ್ಮಿಕ ಭಾಷಣಗಳಿರುವ ಡಿವಿಡಿ, ಸಿಡಿಗಳು, ಹಲವು ದಾಖಲೆ ಪತ್ರಗಳು, ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರು ಯುವಕರು “ರಿಸೊರ್‌ ಓಡಿಯಸ್‌ ಇನ್‌ ಅಕ್ಯೂಟ್‌ ಮೈಗೆùನ್‌ ಅಟ್ಯಾಕ್‌ ಇನ್‌ ರೈಟ್‌ ಇನ್‌ ಟೈಂ ಫೋರ್‌ ಮೈಗೆùನ್‌’ ಎಂಬ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದರೆಂದೂ ಎನ್‌ಐಎಗೆ ಮಾಹಿತಿ ಲಭಿಸಿದೆ.

ವಾರ ಕಳೆದರೂ ಭೀತಿ ದೂರವಾಗಿಲ್ಲ !
ಈಸ್ಟರ್‌ ರವಿವಾರ ನಡೆದ ಉಗ್ರರ ದುಷ್ಕೃತ್ಯದಿಂದ ನಲುಗಿದ ಶ್ರೀಲಂಕಾ ವಾರ ಕಳೆದರೂ ಚೇತರಿಸಿಕೊಂಡಿಲ್ಲ. ಲಂಕಾದ ಪ್ರತಿ ನಾಗರಿಕನಲ್ಲೂ ಕಳೆದ
ರವಿವಾರ ಮೂಡಿದ್ದ ಭೀತಿ ಇನ್ನೂ ನಿವಾರಣೆಯಾಗಿಲ್ಲ. ರವಿವಾರ ಶ್ರೀಲಂಕಾದ ಯಾವ ಚರ್ಚ್‌ನಲ್ಲೂ ಕ್ರೈಸ್ತರು ಪ್ರಾರ್ಥನೆ ನಡೆಸಲಿಲ್ಲ. ಬದಲಿಗೆ ಕೊಲಂಬೋದ ಆರ್ಚ್‌ ಬಿಷಪ್‌ ಕಾರ್ಡಿನಲ್‌ ಮಾಲ್ಕಮ್‌ ರಂಜಿತ್‌
ಟಿವಿ ಮೂಲಕ ಪ್ರಾರ್ಥನೆ ಮಾಡಿದರು. ಅದನ್ನೇ ಕ್ರೈಸ್ತರು ತಮ್ಮ ಮನೆಗಳಲ್ಲಿ ಕುಳಿತು ವೀಕ್ಷಿಸಿ ದರು. ಪ್ರಾರ್ಥನಾ ಕೇಂದ್ರಗಳಲ್ಲಿ ಇನ್ನೂ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕದ ರಾಯಭಾರ ಕಚೇರಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಸೋದರ, ತಂದೆಯೂ ಹತ
ಸ್ಫೋಟದ ಸಂಚುಕೋರ ಝಹ್ರಾನ್‌ ಹಶೀಮ್‌ನ ಇಬ್ಬರು ಸೋದರರು ಮತ್ತು ತಂದೆ ಶ್ರೀಲಂಕಾ ಸೇನೆ ಮತ್ತು ತನಿಖಾ ಸಂಸ್ಥೆಗಳು ಶುಕ್ರವಾರ ತಡರಾತ್ರಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ದಾಳಿಗೆ ಮುನ್ನ ಝಹ್ರಾನ್‌ ಮಾಡಿದ್ದ ವೀಡಿಯೋದಲ್ಲಿ ಇವರೂ ಕಾಣಿಸಿಕೊಂಡಿದ್ದರು. ಝೈನೀ ಹಶೀಮ್‌, ರಿಲ್ವಾಮ್‌ ಹಶೀಮ್‌ ಮತ್ತು ತಂದೆ ಮೊಹಮದ್‌ ಹಶೀಮ್‌ ಶುಕ್ರವಾರದ ದಾಳಿ ವೇಳೆ ಸಾವನ್ನಪ್ಪಿದ್ದು, ಮೃತ 15 ಜನರ ಪೈಕಿ ಈ ಮೂವರೂ ಇದ್ದಾರೆ ಎಂದು ಶ್ರೀಲಂಕಾ ತನಿಖಾ ಸಂಸ್ಥೆಗಳು ಖಚಿತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next