ಮಲ್ಲಪುರಂ : ಗರ್ಭಿಣಿ ಆನೆಯ ಬಾಯಿಯಲ್ಲಿ ಪಟಾಕಿ ಸ್ಪೋಟಿಸಿ ಕೊಂದ ಕಟುಕರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆಯನ್ನು ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಆಹಾರವನ್ನು ಅರಸುತ್ತಾ ನಾಡಿಗೆ ಬಂದ ಕಾಡಾನೆಗೆ ಕಿಡಿಗೇಡಿಗಳು ಅನನಾಸಿನಲ್ಲಿ ಪಟಾಕಿ ಇಟ್ಟು ಕೊಡಲಾಗಿದೆ. ಏನೂ ಅರಿಯದ ಆನೆ ಅದನ್ನು ಜಗಿದಿದ್ದು, ಪಟಾಕಿ ಸ್ಫೋಟಿಸಿದೆ. ಇದರಿಂದ ಆನೆಯ ಇಡೀ ಬಾಯಿಗೆ ಹಾನಿಯಾಗಿದ್ದು, ಚೀರುತ್ತಾ ಹೋದ ಆನೆ ಹೋಗಿ ಸನಿಹದ ವೆಲ್ಲಿಯೂರ್ ನದಿಯಲ್ಲಿ ನಿಂತಿದೆ. ಅಲ್ಲೇ ನೋವಿನಿಂದ ನಿಂತಿದ್ದ ಆನೆ ಬಳಿಕ ಕೊನೆಯುಸಿರೆಳೆದಿದೆ.
ಗರ್ಭಿಣಿ ಕಾಡಾನೆ ಬಾಯೊಳಗೆ ಪಟಾಕಿ ಇಟ್ಟು ಕೊಂದ ದುರುಳರು!
ಕೇರಳದ ಅರಣ್ಯ ಅಧಿಕಾರಿಗಳು ಇದಕ್ಕಾಗಿ ಒಂದು ವಿಶೇಷ ತಂಡವನ್ನು ರಚಿಸಿದ್ದು ಆನೆಯ ಸಾವಿಗೆ ಕಾರಣರಾದವವರನ್ನು ಕೂಡಲೇ ಬಂಧಿಸುವ ಭರವಸೆಯನ್ನು ನೀಡಿದ್ದಾರೆ.
ಆನೆಯ ಸಾವಿನ ಸುದ್ದಿ ತಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆನೆಯನ್ನು ಕೊಂದ ದುರುಳರ ವಿರುದ್ಧ ಸಾಕಷ್ಟು ಆಕ್ರೋಶಗಳು ಕೇಳಿಬರುತ್ತಿವೆ ಇದರ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ತನಿಖಾ ತಂಡ ರಚಿಸಿದ್ದು ದುಷ್ಕೃತ್ಯವೆಸಗಿದವರ ಬಂಧನಕ್ಕೆ ಬಲೆ ಬಿಸಿದ್ದಾರೆ.