Advertisement

Kerala: ಕೇರಳದ ಖ್ಯಾತ ಚಿತ್ರಕಾರ ʻಆರ್ಟಿಸ್ಟ್‌ ನಂಬೂದರಿʼ ನಿಧನ

06:53 PM Jul 08, 2023 | Team Udayavani |

ತಿರುವನಂತಪುರಂ: ತಮ್ಮ ಸಾಹಿತ್ಯಿಕ ಚಿತ್ರಣಗಳು, ಶಿಲ್ಪಗಳು ಮತ್ತು ರೇಖಾ ರೇಖಾಚಿತ್ರಗಳ ಮೂಲಕ ಕೇರಳದಲ್ಲಿ ʻಆರ್ಟಿಸ್ಟ್‌ ನಂಬೂದರಿʼ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಚಿತ್ರಕಾರ ಕೆ.ಎಂ. ವಾಸುದೇವನ್‌ ನಂಬೂದರಿ ಅವರು ವಯೋಸಹಜ ಅನಾರೋಗ್ಯದಿಂದಾಗಿ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

Advertisement

ನಂಬೂದರಿ ಅವರು 1925 ರ ಸೆಪ್ಟೆಂಬರ್‌ನಲ್ಲಿ ಕೇರಲದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಎಂಬಲ್ಲಿ ಜನಿಸಿದ್ದರು. ಬಾಲಕನಾಗಿದ್ದಾಗಲೇ ತಮ್ಮ ಮನೆಯ ಬಳಿಯ ದೇವಾಲಯವೊಂದರಲ್ಲಿ ಕೆತ್ತಲಾಗಿದ್ದ ಶಿಲ್ಪಕಲೆಗಳನ್ನು ಕಂಡು ಪ್ರೇರೇಪಿತರಾಗಿದ್ದ ಅವರು ಅದನ್ನು ಮನೆಯ ಹಿತ್ತಲಿನಲ್ಲಿ ಮರಳಿನ ಮೂಲಕ ರಚಿಸುತ್ತಿದ್ದರು.

ಚಿತ್ರಕಲೆಯಲ್ಲಿ ಪರಿಣತಿ ಪಡೆದ ಬಳಿಕ ಅವರು ಚಿತ್ರಕಲೆಯಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದ್ದರು. ಅದಲ್ಲದೇ ಖ್ಯಾತ ಮಲಯಾಳಿ ಲೇಖಕರಾದ ಶಿವಶಂಕರ ಪಿಳ್ಳೈ, ಎಂ.ಟಿ ವಾಸುದೇವನ್‌ ನಾಯರ್‌, ವಿ.ಕೆ.ಎನ್‌ ಅವರ ಕಾದಂಬರಿಗಳಿಗೆ ಚಿತ್ರಗಳನ್ನು ಬರೆದು ಕೊಟ್ಟಿದ್ದರು.

ಕೇರಳ ಲಲಿತ ಕಲಾ ಅಕಾಡಮಿಯ ಅಧ್ಯಕ್ಷರೂ ಆಗಿದ್ದ ನಂಬೂದರಿ ಅವರಿಗೆ, ಅಕಾಡಮಿ ಕೊಡಮಾಡುವ ರಾಜಾ ರವಿ ವರ್ಮ ಪ್ರಶಸ್ತಿಯೂ ದೊರಕಿದೆ.

Advertisement

ಚಿತ್ರಕಾರ ಕೆ.ಎಂ. ವಾಸುದೇವನ್‌ ನಂಬೂದರಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಚುನಾವಣೆಗಳು ಬ್ಯಾಲೆಟ್ ನಿಂದ ನಡೆಯಬೇಕು, ಬುಲೆಟ್‌ ಗಳಿಂದ ಅಲ್ಲ: ಪ.ಬಂಗಾಳ ರಾಜ್ಯಪಾಲ

 

Advertisement

Udayavani is now on Telegram. Click here to join our channel and stay updated with the latest news.

Next