Advertisement

ಬಾಲಕಿಗೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅನುಮತಿ

11:43 PM Aug 17, 2021 | Team Udayavani |

ಕೊಚ್ಚಿ: ತಂದೆಯ ಜತೆಗೆ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ತೆರಳಲು ಅಪ್ರಾಪ್ತ ವಯಸ್ಕ ಬಾಲಕಿಗೆ ಕೇರಳ ಹೈಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.

Advertisement

ಕಳೆದ ವರ್ಷ ಇದೇ ಮಾದರಿಯ ಪ್ರಕರಣದಲ್ಲಿ ಹೈಕೋರ್ಟ್‌ ವಿಚಾರಣೆ ನಡೆಸಿ ಇದೇ ತೆರನಾದ  ತೀರ್ಪು ನೀಡಿತ್ತು. ಜತೆಗೆ ಕೇರಳ ಸರಕಾರ ಲಸಿಕೆ ಪಡೆದವರ ಜತೆಗೆ ದೇಗುಲಗಳಿಗೆ ಭೇಟಿ ನೀಡಬಹುದು ಎಂಬ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯ  ಪ್ರವೇಶಕ್ಕೆ ಅನುಮತಿ ನೀಡಿದೆ.

ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಒಂಬತ್ತು ವರ್ಷದ ಬಾಲಕಿ ಆ.23ರಂದು ದೇಗುಲ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next