Advertisement

ಮೀಡಿಯಾ ಒನ್‌ ಟಿವಿ ವಾಹಿನಿಗೆ ನಿಷೇಧ

07:22 PM Jan 31, 2022 | Team Udayavani |

ನವದೆಹಲಿ: ಮಲಯಾಳಂನ ಮೀಡಿಯಾ ಒನ್‌ ಟಿವಿ ವಾಹಿನಿಯ ಕಾರ್ಯಕ್ರಮಗಳ ಪ್ರಸಾರದ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

Advertisement

ಪ್ರಸಾರದ ಅನುಮತಿ ಪಡೆದ ವಾಹಿನಿಗಳ ಪಟ್ಟಿಯಿಂದ ಮೀಡಿಯಾ ಒನ್‌ ಟಿವಿ ವಾಹಿನಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಗಿಟ್ಟಿದೆ. ಕೇಂದ್ರ ಗೃಹ ಇಲಾಖೆಯಿಂದ ಈ ವಾಹಿನಿ ಕುರಿತಾಗಿ ಸೆಕ್ಯುರಿಟಿ ಕ್ಲಿಯರೆನ್ಸ್‌ ಸಿಗದ ಕಾರಣ ಈ ವಾಹಿನಿಯ ಕಾರ್ಯಕ್ರಗಳ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅತ್ತ, ಈ ಕುರಿತಂತೆ ಅಧಿಕೃತ ಪ್ರಕಟಣೆ ನೀಡಿರುವ ಮೀಡಿಯಾ ಒನ್‌ ಟಿವಿ ಸಂಸ್ಥೆ, “ತನ್ನ ಕಾರ್ಯಕ್ರಮಗಳ ಪ್ರಸಾರಕ್ಕೆ ನೀಡಲಾಗಿರುವ ಅನುಮತಿಯನ್ನು ನವೀಕರಣಗೊಳಿಸುವಂತೆ ಕೋರಿ ಕಳೆದ ವರ್ಷವೇ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ:ಹಾಕಿ ಪ್ರೊ ಲೀಗ್ : ಭಾರತದ ಮಹಿಳಾ ತಂಡಕ್ಕೆ ಚೀನಾದೆದುರು ಭಾರಿ ಗೆಲುವು

2021ರ ಸೆ. 30ರಿಂದ 2031ರ ಸೆ. 29ರವರೆಗೆ ಪ್ರಸಾರಕ್ಕೆ ಅವಕಾಶ ಕಲ್ಪಿಸುವಂತೆ ಕೋರಲಾಗಿತ್ತು.

Advertisement

ಆದರೆ, ಈಗ ನವೀಕರಣದ ಮನವಿ ತಿರಸ್ಕಾರಗೊಂಡಿದ್ದು ಕಾರ್ಯಕ್ರಮಗಳ ಪ್ರಸಾರಕ್ಕೂ ತಡೆಯೊಡ್ಡಲಾಗಿದೆ. ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next