Advertisement
ಸೋಮವಾರ ರಾತ್ರಿ ಈ ಬಗ್ಗೆ ಕೇರಳ ಸರ್ಕಾರ ಆದೇಶ ಹೊರಡಿಸಿದ್ದು, ವೈದ್ಯರ ಅಸೋಸಿಯೇಷನ್ ಇದಕ್ಕೆ ತೀವ್ರ ಆಕ್ಷೇಪವ್ಯಕ್ತಪಡಿಸಿದೆ. ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಿರುವ ಸಂದರ್ಭದಲ್ಲಿ ಮದ್ಯ ವ್ಯಸನಿಗಳಿಗೆ ಮದ್ಯ ಸರಬರಾಜು ಮಾಡುವುದು ಸರಿಯಲ್ಲ ಎಂದು ತಿಳಿಸಿದೆ.
ಅವರು ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ, ಜಿಲ್ಲಾ ಆಸ್ಪತ್ರೆಗೆ, ತಾಲೂಕು ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ಪರೀಕ್ಷಿಸಿ ಲಿಖಿತವಾಗಿ ಮದ್ಯ ಸೇವನೆ ಅಗತ್ಯತೆ ಬಗ್ಗೆ ಬರೆದುಕೊಟ್ಟಿದ್ದರೆ ಮದ್ಯ ನೀಡಲಾಗುವುದು ಎಂದು ತಿಳಿಸಿದೆ. ಮದ್ಯವ್ಯಸನದ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ವೈದ್ಯರು ಪ್ರಿಸ್ ಕ್ರಿಪ್ಶನ್ ಕೊಟ್ಟಲ್ಲಿ ಅಂತಹವರಿಗೆ ನಿಗದಿತ ಪ್ರಮಾಣದಲ್ಲಿ ಮದ್ಯನೀಡಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ವಿವರಿಸಿದೆ. ಪ್ರಿಸ್ ಕ್ರಿಪ್ಶನ್ ಅನ್ನು ಸ್ಥಳೀಯ ಅಬಕಾರಿ ಕಚೇರಿಗೆ ನೀಡಬೇಕು, ಅದರ
ಜತೆಗೆ ಸರ್ಕಾರ ನೀಡಿರುವ ಗುರುತಿನ ಚೀಟಿ ತೆಗೆದುಕೊಂಡು ಹೋದಲ್ಲಿ ಮದ್ಯ ಪಡೆಯುವ ಪಾಸ್ ನೀಡುತ್ತಾರೆ. ನಂತರ ಆ ಪಾಸ್ ಅನ್ನು ಬೇವರೇಜಸ್ ಕಾರ್ಪೋರೇಶನ್ ಆಡಳಿತ ನಿರ್ದೇಶಕರಿಗೆ ನೀಡಬೇಕು. ಬಳಿಕ ಅವರು ಮದ್ಯ ಸರಬರಾಜು ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಆದೇಶದಲ್ಲಿ ವಿವರಿಸಿದೆ. ಆದರೆ ಇದಕ್ಕಾಗಿ ಮದ್ಯದ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.