ಕೊಚ್ಚಿ : ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್‌ಗೆ ಜೂನ್ 22ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಯ ಕೊಚ್ಚಿ ಘಟಕ ಸಮನ್ಸ್ ಜಾರಿ ಮಾಡಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಪತ್ನಿ ಮತ್ತು ಮಗಳು ಸೇರಿದಂತೆ ಅವರ ಕುಟುಂಬವು ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಹೇಳಿದ್ದರು.
ಜಾರಿ ನಿರ್ದೇಶನಾಲಯವು ಸೆಕ್ಷನ್ 164 ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ರಹಸ್ಯ ಹೇಳಿಕೆಯನ್ನು ನೀಡಿದ್ದರು . ಈ 27 ಪುಟಗಳ ಹೇಳಿಕೆಯ ಆಧಾರದ ಮೇಲೆ ಇಡಿ ಇದೀಗ ಸ್ವಪ್ನಾ ಸುರೇಶ್‌ಗೆ ನೋಟಿಸ್ ನೀಡಿದೆ.
ಇದನ್ನೂ ಓದಿ : ಕೋಮು ರಾಜಕಾರಣ ವಿಭಜನೆಗೆ ಕಾರಣವಾಯಿತು : ಕೇರಳ ರಾಜ್ಯಪಾಲ ಎ.ಎಂ. ಖಾನ್
Related Articles
ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕೇರಳದಲ್ಲಿ ಪ್ರತಿಭಟನೆ ಮುಂದುವರೆಸಿವೆ.