Advertisement

ಕೇರಳ ಚುನಾವಣಾ ಅಖಾಡ: ಮಹಿಳೆಯರಿಂದ ನಿಯಂತ್ರಣ ಕೊಠಡಿಯ “ಕಂಟ್ರೋಲ್”

06:26 PM Mar 22, 2021 | Team Udayavani |

ಕಾಸರಗೋಡು : ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯ ನಿಯಂತ್ರಣ ಮಹಿಳೆಯರ ಕೈಯಲ್ಲಿದೆ.  ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಯು ಜಿಲ್ಲಾಧಿಕಾರಿ ಕಚೇರಿಯ ಹುಸೂರ್‌ ಶಿರಸ್ತೇದಾರ್‌ ಎಸ್‌.ಶ್ರೀಜಾ ಅವರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ.

Advertisement

ಇದನ್ನೂ ಓದಿ:ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಗೆ ಕೋವಿಡ್ ದೃಢ

ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರುಗಳು, ಮತದಾರರ  ಸಹಾಯವಾಣಿ ನಿಯಂತ್ರಣ, ಫೀಲ್ಡ್‌ ಇನ್ವೆಸ್ಟಿಗೇಷನ್‌ ಟೀಂ ಮಾನಿಟರಿಂಗ್‌ ಸಹಿತ ಹೊಣೆ ಈ ನಿಯಂತ್ರಣ ಕೊಠಡಿಯದು. ಇದರ ಹೊಣೆ ಅಧಿಕಾರಿ ಮುಮ್ತಾಝ್ ಹಸನ್‌, ಸುಜಾ ವರ್ಗೀಸ್‌, ಸಹಾಯಕಿಯರಾದ ಕೆ.ಪ್ರಸೀದಾ, ಕೆ.ಎಸ್‌.ಶ್ರೀಕಲಾ, ಪಿ.ಸುಜಾ, ಪಿ.ಮಮತಾ, ಪದ್ಮಾವತಿ. ನಿಯಂತ್ರಣ ಕೊಠಡಿ ತಂಡ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ನಿಯಂತ್ರಣ ಕೊಠಡಿ ನಿಯಂತ್ರಿಸುತ್ತಾರೆ. ತದನಂತರ ರಾತ್ರಿ ಹೊಣೆಯ ಅಧಿಕಾರಿಗಳಾದ ಡಿ.ಎಸ್‌.ಸೆಲ್ವರಾಜ್‌, ಅನಿಲ್‌ ಕುಮಾರ್‌, ಸಹಾಯಕರಾದ ಕೆ.ಪಿ.ಶಶಿಧರನ್‌, ಸಲೀಂ ಕುಮಾರ್‌, ಶ್ರೀರಾಂ, ಅರುಣ್‌ ಲಾರೆನ್ಸ್‌ ನಿಯಂತ್ರಣ ಕೊಠಡಿಯನ್ನು ನಿಯಂತ್ರಿಸುತ್ತಾರೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರುಗಳನ್ನು ಸ್ವೀಕರಿಸುವ ಸಿ-ವಿಜಿಲ್‌ ಅಪ್ಲಿಕೇಷನ್‌, 1950 ಎಂಬ ಟೋಲ್‌ ಫ್ರೀ ನಂಬ್ರ, ಸಹಾಯವಾಣಿ ನಂಬ್ರಗಳಾದ 04994-255325, 255324ಕ್ಕೆ ಬರುವ ದೂರುಗಳು , ಚುನಾವಣೆ ಸಂಬಂಧ ಸಂಶಯಗಳು ಇತ್ಯಾದಿಗಳಿಗೆ ನಿಯಂತ್ರಣ ಕೊಠಡಿಯಲ್ಲಿ ಉತ್ತರ ಲಭಿಸಲಿದೆ. 1950 ಸಹಾಯ ನಂಬ್ರಕ್ಕೆ ದೂರು, ಸಂಶಯ ನಿವಾರಣೆ ಸಂಬಂಧ ಈ ವರೆಗೆ 96 ದೂರುಗಳು ಬಂದಿವೆ.

ಸಿ-ವಿಜಿಲ್‌ ನಲ್ಲಿ ದಾಖಲಾಗುವ ದೂರುಗಳು 5 ನಿಮಿಷದ ಅವಧಿಯಲ್ಲಿ ಫೀಲ್ಡ್‌ ಇನ್ವೆಸ್ಟಿಗೇಷನ್‌ ಟೀಂ ಗೆ ಹಸ್ತಾಂತರಗೊಳ್ಳುತ್ತಿದ್ದು, ಇದರ ಹೊಣೆ ನಿಯಂತ್ರಣ ಕೊಠಡಿಯದ್ದಾಗಿದೆ. ನೂರು ನಿಮಿಷಗಳ ಅವಧಿಯಲ್ಲಿ ದೂರಿಗೆ ಪರಿಹಾರ ಲಭ್ಯವಾಗಲಿದೆ. ಈ ಬಾರಿಯ ಚುನಾವಣೆ ಸಂಬಂಧ ಸಿ-ವಿಜಿಲ್‌ಗೆ ಈ ವರೆಗೆ 666 ದೂರು ಬಂದಿದೆ. ಇವುಗಳಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 292 ದೂರುಗಳು, ಕಾಸರಗೋಡು ಕ್ಷೇತ್ರದಲ್ಲಿ 191 ದೂರುಗಳು, ಉದುಮ ಕ್ಷೇತ್ರದಲ್ಲಿ 91 ದೂರುಗಳು, ಕಾಂಞಂಗಾಡ್‌ ಕ್ಷೇತ್ರದಲ್ಲಿ 69 ದೂರುಗಳು, ತ್ರಿಕರಿಪುರ ಕ್ಷೇತ್ರದಲ್ಲಿ 23 ದೂರುಗಳು ಬಂದಿವೆ. ಸಿ-ವಿಜಿಲ್‌ ಆ್ಯಪ್‌ ನಲ್ಲಿ ನೋಂದಣಿಗೊಂಡಿದ್ದು, ಎಲ್ಲ ದೂರುಗಳೂ ಪರಿಹಾರಗೊಂಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next