Advertisement

ಕೇರಳದಲ್ಲಿ ಸಿಪಿಎಂ ಹಿಂಸಾ ತಾಂಡವ: ರಾಧಾಕೃಷ್ಣನ್‌

03:45 AM Jan 13, 2017 | |

ಕಾಸರಗೋಡು: ಬಡವರ, ಕಾರ್ಮಿಕರ ಪರ ಪಕ್ಷ ಎಂದು ಹೇಳಿ ಕೊಂಡು ಅಧಿಕಾರಕ್ಕೆ ಬಂದ ಎಡರಂಗ ಸರಕಾರದ ಪ್ರಮುಖ ಪಕ್ಷವಾದ ಸಿಪಿಎಂ ಕೇರಳದಲ್ಲಿ ಹಿಂಸಾತಾಂಡವ ನಡೆಸುತ್ತಿದೆ. ಇದಕ್ಕೆ ಪೊಲೀಸರು ಕೈಜೋಡಿಸಿದ್ದಾರೆ ಎಂದು ಬಿಜೆಪಿ ಕೇರಳ ರಾಜ್ಯ ಪ್ರ. ಕಾರ್ಯದರ್ಶಿ ಎ.ಎನ್‌.ರಾಧಾಕೃಷ್ಣನ್‌ ಆರೋಪಿಸಿದರು.

Advertisement

ಪ್ರಧಾನಿ ನರೇಂದ್ರ ಮೋದಿ ನ.8ರಂದು 500 ಮತ್ತು 1,000 ರೂ.ಕರೆನ್ಸಿ ಹಿಂದೆಗೆದುಕೊಂಡ ತರುವಾಯ ಕೇರಳದಲ್ಲಿ ನಡೆಯುತ್ತಿರುವ ಎಡರಂಗ ಮತ್ತು ಐಕ್ಯರಂಗದ ಅಪಪ್ರಚಾರದ ವಿರುದ್ಧ ನಿಜಸ್ಥಿತಿಯನ್ನು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಬಿಜೆಪಿ ಆಯೋಜಿಸಿದ ಉತ್ತರ ವಲಯ ಪ್ರಚಾರ ಜಾಥಾ ಉದ್ದೇಶಿಸಿ ಮಾತನಾಡಿದರು.

ದೇಶದ ಪ್ರಗತಿಗೆ, ಭಯೋತ್ಪಾದಕರನ್ನು ನಿರ್ಮೂಲನಗೊಳಿಸಲು, ಭ್ರಷ್ಟಾಚಾರ ತೊಡೆದು ಹಾಕಲು, ಕಾಳಸಂತೆಕೋರರನ್ನು ಹತ್ತಿಕ್ಕಲು, ಕಾಳಧನ ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ಕರೆನ್ಸಿ ನಿಷೇಧಿಸಿದ್ದಾರೆ. ಆದರೆ ಸಿಪಿಎಂ ಮತ್ತು ಕಾಂಗ್ರೆಸ್‌ ಪಕ್ಷ ಕಪ್ಪು ಹಣದ ಸಹಕಾರಿ ಒಕ್ಕೂಟ ರಚಿಸಿಕೊಂಡಿದೆ ಎಂದರು.

ಬಡ ಜನರಿಗೆ ರೇಶನ್‌ ನೀಡಲು ಸಾಧ್ಯವಾಗದ ಕೇರಳ ಸರಕಾರ ನೋಟಿನ ಅಪಮೌಲ್ಯದ ಬಗ್ಗೆ ಪ್ರತಿಭಟಿಸುತ್ತಿದೆ. ಎಡರಂಗ ಪ್ರತಿಭಟನೆಯ ನೈತಿಕ ಹಕ್ಕು ಕಳೆದುಕೊಂಡಿದೆ. ಕೇರಳ ಸರಕಾರ ಎಲ್ಲ ರಂಗದಲ್ಲೂ ವಿಫಲವಾಗಿದ್ದು, ಸರಕಾರದ ಘಟಕ ಪಕ್ಷವಾದ ಸಿಪಿಎಂ ಹಿಂಸೆಯಲ್ಲಿ ಮಾತ್ರನಂಬರ್‌ ವನ್‌ ಎಂದರು.

ಉದುಮದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದ ಬಳಿಕ ಕಾಸರಗೋಡಿನಲ್ಲಿ ಪ್ರಚಾರ ಜಾಥಾ ನಾಯಕ ಎ.ಎನ್‌. ರಾಧಾಕೃಷ್ಣನ್‌ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿಕೆ. ಶ್ರೀಕಾಂತ್‌, ಚಿತ್ರ ನಿರ್ದೇಶಕ ರಾಜೇಶ್‌ ಕೃಷ್ಣನ್‌, ಬಿಜೆಪಿ ನೇತಾರರಾದ ವಿ.ವಿ. ರಾಜನ್‌, ಪಿ. ರಘುನಾಥನ್‌, ಸದಾನಂದ, ಸಂಜೀವ ಶೆಟ್ಟಿ, ರಾಮಪ್ಪ ಮಂಜೇಶ್ವರ, ಪ್ರಮೀಳಾ ಸಿ. ನಾೖಕ್‌, ಶೈಲಜಾ ಭಟ್‌, ಎಸ್‌. ಕುಮಾರ್‌, ಶಿವಕೃಷ್ಣ ಭಟ್‌, ಮಾಲತಿ, ಸ್ವಪ್ನಾ, ಶಿವರಾಮನ್‌, ಅವಿನಾಶ್‌, ಗಣೇಶ್‌, ಸುಕುಮಾರ ಕುದ್ರೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಹರೀಶ್‌ ನಾರಂಪಾಡಿ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next