Advertisement

Kerala ದಂಪತಿಯ ಆತ್ಮಹತ್ಯೆಗೆ ಮಗನ ಡ್ರಗ್‌ ವ್ಯಸನ ಕಾರಣ!

12:22 AM Jul 28, 2024 | Team Udayavani |

ಪತ್ತನಂತಿಟ್ಟ: ಜಿಲ್ಲೆಯ ವೆಂಗಾಲ್‌ ಎಂಬಲ್ಲಿ ಶುಕ್ರ ವಾರ ಕಾರಿಗೆ ಬೆಂಕಿ ಹತ್ತಿ ಮೃತಪಟ್ಟಿದ್ದ ದಂಪತಿಯ ಸಾವಿನ ತನಿಖೆಗೆ ಹೊಸ ತಿರುವು ಸಿಕ್ಕಿದ್ದು, ಈ ಘಟನೆ ಆಕಸ್ಮಿಕವಲ್ಲ, ಆತ್ಮಹತ್ಯೆ ಎಂದು ಪೊಲೀಸರು ಹೇಳಿ ದ್ದಾರೆ. ಅವರ ಮನೆಯಲ್ಲಿ ದೊರೆತ ಆತ್ಮಹತ್ಯಾ ಪತ್ರ ದಲ್ಲಿ ದಂಪತಿಯ ಪುತ್ರ ಮಾದಕವ್ಯಸನಿಯಾಗಿದ್ದು, ಅದರಿಂದ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಆತನ ಚಿಕಿತ್ಸೆಗೆ ಇದ್ದಬದ್ದ ಉಳಿತಾಯದ ಹಣ, ಆಸ್ತಿಯೆಲ್ಲ ಕಳೆದುಹೋಗಿದ್ದು, ಬೇರೆ ದಾರಿ ಉಳಿಯದೇ ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಬರೆಯಲಾಗಿದೆ. ಪೆಟ್ರೋಲ್‌ ಪಂಪ್‌ನಿಂದ ಪೆಟ್ರೋಲ್‌ ತಂದು, ಕಾರಿಗೆ ಬೆಂಕಿ ಹಚ್ಚಿ, ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next