ತಿರುವನಂತಪುರಂ: ಕೇರಳದ ಉದ್ಯಮಿ, ಎಂಐಜಿ ಡಿಜಿಟಲ್ ಕಂಪನಿಯ ಮಾಲಿಕ ಎ.ಜಿ.ಶಾಜಿ ತಮ್ಮ ಉದ್ಯೋಗಿ ಸಿ.ಆರ್.ಅನೀಶ್‌ಗೆ ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ.
ಸತತ 22 ವರ್ಷಗಳಿಂದ ನಿಷ್ಠೆಯನ್ನು ಬದಲಿಸದೇ, ಕಂಪನಿಯ ಏಳಿಗೆಗಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿರುವ ಅನೀಶ್‌ಗೆ ಶಾಜಿ ನೀಡಿರುವ ಉಡುಗೊರೆಯೇನು ಗೊತ್ತಾ?
ಮರ್ಸಿಡೆಸ್ ಬೆಂಜ್ ಜಿಎಲ್‌ಎ ಕ್ಲಾಸ್ 220ಡಿ ಕಾರು. ಅದರ ಮೌಲ್ಯ ಹತ್ತಿರಹತ್ತಿರ 46 ಲಕ್ಷ ರೂ.!
ಪ್ರಸ್ತುತ ಅನೀಶ್ ಕೇರಳದ ಕಲ್ಲಿಕೋಟೆಯಲ್ಲಿ ವಾಸಿಸುತ್ತಾರೆ.
ಇದನ್ನೂ ಓದಿ:ಕೋವಿಡ್ ದಿಂದಾಗಿ ವಿದೇಶಗಳಲ್ಲಿ 4,355 ಭಾರತೀಯರ ಸಾವು
ಎಂಐಜಿಯಲ್ಲಿ ಮುಖ್ಯ ಉದ್ಯಮ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಶಾಜಿ ಬೇರೆ ಬೇರೆ ಉದ್ಯೋಗಿಗಳ ನಿಷ್ಠೆಯನ್ನು ಗೌರವಿಸಿ ಅಚ್ಚರಿಯ ಉಡುಗೊರೆ ನೀಡಿದ್ದಾರೆ.