Advertisement

ಕೇರಳ ಬಜೆಟ್‌: ಕಾಸರಗೋಡಿಗೆ 90 ಕೋಟಿ ರೂ. ಪ್ಯಾಕೇಜ್‌

10:07 PM Feb 07, 2020 | mahesh |

ಕಾಸರಗೋಡು: ತಿರುವನಂತಪುರ – ಕಾಸರಗೋಡು ಹೈಸ್ಪೀಡ್‌ ಗ್ರೀನ್‌ಪೀಲ್ಡ್‌ ರೈಲು, ಕಾಸರಗೋಡು ಪ್ಯಾಕೇಜ್‌ಗೆ 90 ಕೋಟಿ ರೂ. ಯನ್ನೊಳಗೊಂಡ ರಾಜ್ಯ ಸರಕಾರದ 2020-21 ನೇ ವಿತ್ತೀಯ ವರ್ಷದ ಮುಂಗಡಪತ್ರವನ್ನು ಹಣಕಾಸು ಸಚಿವ ಡಾ|ಥೋಮಸ್‌ ಐಸಕ್‌ ಶುಕ್ರವಾರ ಬೆಳಗ್ಗೆ ವಿಧಾನಸಭೆಯಲ್ಲಿ ಮಂಡಿಸಿದರು.

Advertisement

ಕೇರಳ ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟಿ ನಲ್ಲಿ ಸಿಲುಕಿ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಲಭಿಸಬೇಕಾದ 8,330 ಕೋಟಿ ಇನ್ನೂ ಬಂದಿಲ್ಲ. ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ ಎಂದರು. ಕೇರಳವನ್ನು ಹಸಿವು ರಹಿತ ರಾಜ್ಯವನ್ನಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ 20 ಕೋಟಿ ರೂ. ಮೀಸಲಿರಿಸಲಾಗಿದೆ. ಜಲಾಶಲಯಗಳು, ರಾಜ್ಯದ ನದಿಗಳು ಪುನರುದ್ಧಾರಕ್ಕೆ 20 ಕೋಟಿ ರೂ. ಮೀಸಲಿರಿಸಲಾಗಿದೆ. ರಾಜ್ಯದ 50 ಸಾವಿರ ಕಿ.ಮೀ. ತೋಡುಗಳನ್ನು ನವೀಕರಿಸಲಾಗುವುದು. ಕುಟುಂಬಶ್ರೀಗೆ 600 ಕೋಟಿ ರೂ. ಮೀಸಲಿರಿಸಲಾಗಿದೆ. ತ್ಯಾಜ್ಯ ನಿರ್ಮೂಲನೆಗಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ 20 ಕೋಟಿ ರೂ. ನೀಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ
ಅತ್ಯಂತ ಕಡಿಮೆ ದರದಲ್ಲಿ ಕ್ಯಾನ್ಸರ್‌ ಔಷಧಿ ನೀಡಲಾಗುವುದು. ಕಾರುಣ್ಯ ಯೋಜನೆಯನ್ನು ಮುಂದುವರಿಸ ಲಾಗುವುದು. ಮೆಡಿಕಲ್‌ ಸರ್ವೀಸಸ್‌ ಕಾರ್ಪೋರೇಶನ್‌ಗೆ 50 ಕೋಟಿ ರೂ. ಮೀಸಲಿರಿಸಲಾಗುವುದು. ಸಾಂತ್ವನ ಪರಿಚರಣೆಗಾಗಿ 10 ಕೋಟಿ ರೂ. ಯನ್ನು ಕಾದಿರಿಸಲಾಗಿದೆ. 25 ರೂ.ಗೆ ಊಟ ನೀಡಲು 1000 ಹೊಟೇಲ್‌ಗ‌ಳನ್ನು ಕುಟುಂಬಶ್ರೀ ಮೂಲಕ ತೆರೆಯಲಾಗುವುದು. 12 ಸಾವಿರ ಸಾರ್ವ ಜನಿಕ ಶೌಚಾಲಗಳನ್ನು ತೆರೆಯ ಲಾಗುವುದು. 2020 ನವೆಂಬರ್‌ ತಿಂಗಳಿಂದ ಸಿ.ಎಫ್‌.ಎಲ್‌. ಬಲ್ಬ್ಗಳನ್ನು ನಿಷೇಧಿಸಲಾಗುವುದು. ಫಿಲಮೆಂಟ್‌ ಬಲ್ಬ್ಗಳನ್ನು ನಿಷೇಧಿಸಲಾಗುವುದು.

ಎಲ್ಲಾ ಕ್ಷೇಮ ಪಿಂಚಣಿಯನ್ನು ಹೆಚ್ಚಳಗೊಳಿಸಲಾಗುವುದು. 100 ರೂ. ಯಂತೆ ಕ್ಷೇಮ ಪಿಂಚಣಿಯನ್ನು ಹೆಚ್ಚಿಸಲಾಗಿದೆ. 2020-21 ರಲ್ಲಿ ಒಂದು ಲಕ್ಷ ಮನೆ ಹಾಗೂ ಫ್ಲಾಟ್‌ ನಿರ್ಮಿಸಲಾಗುವುದು. ಗ್ರಾಮೀಣ ರಸ್ತೆಗಳಿಗೆ 1000 ಕೋಟಿ ರೂ., ಲೋಕೋಪಯೋಗಿ ಕಾಮಗಾರಿಗೆ 11.2 ಕೋಟಿ ರೂ. ಕಾದಿರಿಸಲಾಗಿದೆ. 2.50 ಲಕ್ಷ ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಗುವುದು. ವಸತಿ ರಹಿತರಿಗೆ ಒಂದು ಲಕ್ಷ ಫ್ಲಾಟ್‌ ನಿರ್ಮಿಸಲಾಗುವುದು. ಅನಿವಾಸಿಗಳ ಕ್ಷೇಮಕ್ಕಾಗಿ 90 ಕೋಟಿ ರೂ. ನೀಡಲಾಗುವುದು. 10 ಬೈಪಾಸ್‌ಗಳು, 20 ಫ್ಲೆ$ç ಓವರುಗಳು, 74 ಸೇತುವೆಗಳು, 2 ಟ್ರಾನ್ಸ್‌ಗಿಡ್‌, ಉಚಿತ ಇಂಟರ್‌ನೆಟ್‌, ಸಂಪೂರ್ಣ ತರಗತಿಯನ್ನು ಡಿಜಿಟಲೈಸೇಶನ್‌, ಶಾಲಾ ಕಾಲೇಜು ಕಟ್ಟಡ ನಿರ್ಮಾಣ, 44 ಸ್ಟೇಡಿಯಂಗಳು, ಕುಡಿಯುವ ನೀರು ಯೋಜನೆ ಜಾರಿಗೊಳಿ ಸಲಾಗುವುದು ಎಂದು ಹಣಕಾಸು ಸಚಿವ ಥೋಮಸ್‌ ಐಸಾಕ್‌ ಹೇಳಿದರು.

ವೃದ್ಧಾಪ್ಯ ಮತ್ತಿತರ ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತದಲ್ಲಿ 100 ರೂ. ನಂತೆ ಹೆಚ್ಚಿಸಿ ಅದನ್ನು ಈಗಿನ 1200 ರೂ.ಯಿಂದ 1300 ರೂ.ಗೇರಿಸಲಾಗುವುದು. ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ 1000 ಕೋಟಿ ರೂ. ಮೀಸಲಿರಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 1000 ಕೋಟಿ ರೂ. ಮತ್ತು ಭತ್ತ ಕೃಷಿಗೆ 118 ಕೋಟಿ ರೂ., ಸಾಗರೋತ್ತರ ಕೇರಳೀಯರ ಕಲ್ಯಾಣ ನಿಧಿಗೆ 90 ಕೋಟಿ ರೂ. ಮೀಸಲಿರಿಸಲಾಗಿದೆ.

Advertisement

ವಿದ್ಯುತ್‌ : ವಿದ್ಯುತ್‌ ಅಪಘಾತಗಳನ್ನು ನಿಯಂತ್ರಿ ಸಲು ಇ-ಸೇಫ್‌ ಯೋಜನೆ ಜಾರಿಗೊಳಿಸ ಲಾಗುವುದು. ಕಾಸರಗೋಡು ಪ್ಯಾಕೇ ಜ್‌ಗಾಗಿ ಬಜೆಟ್‌ನಲ್ಲಿ 90 ಕೋಟಿ ರೂ. ಮೀಸಲಿರಿಸಲಾಗಿದೆ. ಕಾಸರ ಗೋಡು ಜಿಲ್ಲೆಯ ಬೇಕಲದಿಂದ ತಿರುವನಂತಪುರ ಕೋವಳಂ ತನಕದ ಜಲ ಸಾರಿಗೆ ಯೋಜನೆಯನ್ನು ಈ ವರ್ಷವೇ ಜಾರಿ ಗೊಳಿಸಲಾಗುವುದು. ರಾಜ್ಯದ 15 ಪುರಾತನ ಕಟ್ಟಡಗಳನ್ನು ನವೀಕರಿಸಲಾ ಗುವುದು. ಸ್ಮಾರ್ಟ್‌ ಅಫ್‌ಗಳಿಗೆ 10 ಕೋಟಿ ರೂ. ಮೀಸಲಿರಿಸಲಾಗಿದೆ. ಇದಕ್ಕೆ ಬಡ್ಡಿ ರಹಿತ ಸಾಲ ನೀಡಲಾಗುವುದು.

ಭತ್ತ ಕೃಷಿಕರಿಗೆ 40 ಕೋಟಿ ರೂ. ಮೀಸಲಿರಿಸಲಾಗಿದೆ. 1.7 ಲಕ್ಷ ಹೆಕ್ಟೇರ್‌ಗಿಳಿದಿದ್ದ ಭತ್ತದ ಹೊಲ ವ್ಯಾಪ್ತಿ ಈ ಸರಕಾರ ಅಧಿಕಾರಕ್ಕೇರಿದ ಬಳಿಕ 2.03 ಲಕ್ಷ ಹೆಕ್ಟೇರ್‌ಗೆàರಿದೆಯೆಂದು ಸಚಿವರು ತಿಳಿಸಿದರು. ರಾಜ್ಯ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 2000 ಕೋಟಿ ರೂ., ತರಕಾರಿ ಮತ್ತು ಹೂ ಕೃಷಿ ಅಭಿವೃದ್ಧಿಗೆ 1000 ಕೋಟಿ ರೂ., ಖಾದಿ ಉದ್ದಿಮೆಗೆ 16 ಕೋಟಿ ರೂ. ಕಾದಿರಿಸಲಾಗಿದೆ. ನೀರಾವರಿ ಯೋಜನೆಗಳಿಗೆ 866 ಕೋಟಿ ರೂ. ಮೀಸಲಿರಿಸಲಾಗಿದೆ. ಶಾಸಕರ ನಿಧಿಗೆ 1800 ಕೋಟಿ ರೂ. ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಪಾಲನ್ನು 12,407 ಕೋಟಿ ರೂ.ಗೇರಿಸಲಾಗುವುದು.

ಮಹಿಳೆಯರ ಕಲ್ಯಾಣಕ್ಕಾಗಿರುವ ಯೋಜನಾ ಮೊತ್ತವನ್ನು ಇಮ್ಮಡಿಗೊಳಿಸಿ 1059 ಕೋಟಿ ಗೇರಿಸಲಾಗಿದೆ. ನಿರ್ಭಯ ಯೋಜನೆಗಳಿಗೆ 10 ಕೋಟಿ ರೂ. ನೀಡಲಾಗುವುದು. ರಾಜ್ಯದಲ್ಲಿ 200 ಚಿಕನ್‌ ಮಾರಾಟ ಕೇಂದ್ರಗಳನ್ನು ಆರಂಭಿಸಲಾಗುವುದು. ಮೀನುಗಾರರಿಗೆ 40000 ಮನೆಗಳನ್ನು ನಿರ್ಮಿಸಲಾಗು ವುದು. 20,000 ಬಾವಿಗಳನ್ನು ರಿಚಾರ್ಜ್‌ ಗೊಳಿಸಲಾಗುವುದು. ರಾಜ್ಯದಲ್ಲಿ ಒಟ್ಟು ಒಂದು ಕೋಟಿ ಫಲ ವೃಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು.

ಸಾರ್ವಜನಿಕ ಶಿಕ್ಷಣಕ್ಕಾಗಿ 19,130 ಕೋಟಿ ರೂ. ನೀಡಲಾಗುವುದು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ನೀಡಲಾಗುವ ಹಣವನ್ನು 400 ರೂ.ಯಿಂದ 600 ರೂ.ಗೇರಿಸಲಾಗುವುದು. ಮೀನು ಮಾರುಕಟ್ಟೆಗಳಿಗೆ 100 ಕೋಟಿ ರೂ. ಮೀಸಲಿರಿಸಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸೌರ ವಿದ್ಯುತ್‌ ಉತ್ಪಾದಿಸಿ ಶಾಲೆಗಳಲ್ಲಿ ಬಳಸಲಾಗುವುದು.

ಪ್ರವಾಸೋದ್ಯಮ ಅಭಿವೃದ್ಧಿಗೆ 323 ಕೋಟಿ ರೂ. ಮೀಸಲಿರಿಸಲಾಗಿದೆ. ಆಲಪ್ಪುಳದಲ್ಲಿ ಪಾರಂಪರಿಕ ನಗರವಾಗಿ ಅಭಿವೃದ್ಧಿಪಡಿಸಲಾಗುವುದು. ಕೃಷಿಕರಿಗೆ ಆನ್‌ಲೈನ್‌ನಲ್ಲಿ ತೆಂಗಿನ ಮೊತ್ತ ಲಭಿಸಲಿದೆ. ತೆಂಗಿನೆಣ್ಣೆ ಮಾರುಕಟ್ಟೆಯನ್ನು ಬ್ಯಾಂಕ್‌ನೊಂದಿಗೆ ಜೋಡಿಸಲಾಗುವುದು.

ಕಿಫ್‌ಬಿ
2020-21 ರಲ್ಲಿ ಕಿಫ್‌ಬಿ ಮೂಲಕ 20,000 ಕೋಟಿ ರೂ. ಗಳ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುವುದು. 4,384 ಕೋಟಿ ರೂ.ವನ್ನು ಕುಡಿಯುವ ನೀರಿನ ಯೋಜನೆಗೆಂದು ಮೀಸಲಿರಿಸಲಾಗಿದೆ. ಇದರಂತೆ 2.5 ಲಕ್ಷ ಹೆಚ್ಚುವರಿ ನಳ್ಳಿ ನೀರು ಸಂಪರ್ಕ ಒದಗಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳಿಗೆ 12,024 ಕೋಟಿ ರೂ. ಮೀಸಲಿರಿಸಲಾಗಿದೆ. 74 ಹೊಸ ಸೇತುವೆಗಳನ್ನು ಮತ್ತು 15 ಬೈಪಾಸ್‌ಗಳನ್ನು ನಿರ್ಮಿಸಲಾಗುವುದು.

ಲೈಫ್‌ ಮಿಷನ್‌
ಮನೆಯಿಲ್ಲದ ಎಲ್ಲರಿಗೂ ಮನೆ ಎಂಬ ಮಹತ್ತರ ಉದ್ದೇಶದಿಂದ ಜಾರಿಗೊಳಿಸಲಾದ ಲೈಫ್‌ ಮಿಷನ್‌ ಯೋಜನೆಯಂತೆ ಇನ್ನೂ ಒಂದು ಲಕ್ಷ ಮನೆ, ಫ್ಲಾÂಟ್‌ಗಳನ್ನು ನಿರ್ಮಿಸಲಾಗುವುದು. ವಿದ್ಯುತ್‌ ಉತ್ಪಾದಿಸುವ ಹೊಸ ಯೋಜನೆ ಜಾರಿಗೊಳಿಸಲಾಗುವುದು.

ಹೈಸ್ಪೀಡ್‌ ರೈಲು
ನಾಲ್ಕು ಗಂಟೆಗಳೊಳಗೆ ತಿರುವ ನಂತಪುರದಿಂದ ಕಾಸರಗೋಡಿಗೆ ತಲುಪುವ ಹೈಸ್ಪೀಡ್‌ ಗ್ರೀನ್‌ಫೀಲ್ಡ್‌ ರೈಲ್ವೇ ಯೋಜನೆಗೆ ಭೂಸ್ವಾಧೀನ ಪ್ರಸ್ತುತ ವರ್ಷದಿಂದಲೇ ಆರಂಭಿ ಸಲಾಗುವುದು. ಮೂರು ವರ್ಷ ಗಳಲ್ಲಿ ಈ ಯೋಜನೆ ಸಾಕಾರ ಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಆಗಸದ ಮೂಲಕ ಸರ್ವೇ ಪೂರ್ತಿಗೊಳಿಸಲಾಗಿದೆ. ಈ ಯೋಜನೆಗಾಗಿ ಬಂಡವಾಳ ಹೂಡಲು ವಿದೇಶಿ ಏಜೆನ್ಸಿಗಳು ಮುಂದೆ ಬಂದಿವೆ. ಈ ಯೋಜನೆ ಯಂಗವಾಗಿ ಸರ್ವೀಸ್‌ ರಸ್ತೆಗಳೂ, ಐದು ಟೌನ್‌ಶಿಪ್‌ಗ್ಳೂ ಇರುವುದು.
ಮೆಟ್ರೋ ವಿಪುಲೀಕರಣ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಮೆಟ್ರೋ ಪೇಟ್‌-ತೃಪ್ಪಣಿತುರ, ಸ್ಟೇಡಿಯಂ-ಇನ್ಫೋ ಪಾರ್ಕ್‌ ಹಳಿ ಈ ವರ್ಷವೇ ನಿರ್ಮಾಣವಾಗಲಿದೆ. 3025 ಕೋಟಿ ರೂ. ಅಂದಾಜಿಸಲಾಗಿದೆ. 682 ಕೋಟಿ ರೂ. ವೆಚ್ಚದಲ್ಲಿ 77 ಕಿಲೋ ಮೀಟರ್‌ ಜಲ ಸಾರಿಗೆ ಘೋಷಿಸಲಾಗಿದೆ.

ಬೇಕಲ-ಕೋವಳಂ ಜಲಸಾರಿಗೆ ಈ ವರ್ಷವೇ ಜಾರಿ
ಕಲ್ಯಾಣ ಪಿಂಚಣಿ 1,300 ರೂ.ಗೆ ಏರಿಕೆ
1 ಲಕ್ಷ ಮನೆ, ಸ್ಲಾ ಬ್‌ ನಿರ್ಮಾಣ

2.50 ಲಕ್ಷ ಹೊಸ ನಳ್ಳಿ ನೀರು ಸಂಪರ್ಕ
ನವಂಬರ್‌ನಿಂದ ಸಿ.ಎಫ್‌.ಎಲ್‌. ಬಲ್ಬ್ಗಳಿಗೆ ನಿಷೇಧ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ 1,000 ಕೋ. ರೂ.

Advertisement

Udayavani is now on Telegram. Click here to join our channel and stay updated with the latest news.

Next