ಕೋಝೀಕೋಡ್(ಕೇರಳ): ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್(ಮಿದುಳು ತಿನ್ನುವ ಅಮೀಬಾ) ಎಂಬ ಅಪರೂಪದ ಮಿದುಳು ಸೋಂಕಿನಿಂದ ಕೊನೆಯುಸಿರೆಳೆದಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅನಂತ್ – ರಾಧಿಕಾ ಸಂಗೀತ್‌ಗೆ ಜಸ್ಟಿನ್ ಬೀಬರ್: ಕಾರ್ಯಕ್ರಮ ನೀಡಲು 83 ಕೋಟಿ ರೂ. ಸಂಭಾವನೆ.!
ಚಿಕ್ಕ ಕೊಳವೊಂದರಲ್ಲಿ ಈಜಾಡಿದ ನಂತರ ಬಾಲಕನಿಗೆ ಈ ಸೋಂಕು ಹರಡಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ಬಹಿರಂಗಪಡಿಸಿವೆ. ಅಪರೂಪದ ಮೆದುಳು ತಿನ್ನುವ ಅಮೀಬಾದಿಂದಾಗಿ ಸಾವನ್ನಪ್ಪಿರುವ ಮೂರನೇ ಘಟನೆ ಇದಾಗಿದೆ.
ಮೇ 21ರಂದು ಮಲಪ್ಪುರಂನ ಐದು ವರ್ಷದ ಪುಟ್ಟ ಬಾಲಕಿ ಈ ಸೋಂಕಿನಿಂದ ಮೃತಪಟ್ಟಿದ್ದು, ಜೂನ್ 25ರಂದು ಕಣ್ಣೂರ್ ನ 13 ವರ್ಷದ ಬಾಲಕಿಯೊಬ್ಬಳು ಕೊನೆಯುಸಿರೆಳೆದಿದ್ದಳು. ಇದೀಗ ಮೂರನೇ ಘಟನೆ ನಡೆದಿದೆ.
ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ನೆಗ್ಲೇರಿಯಾ ಫೌಲೆರಿಯಿಂದ ಜನ್ಮತಳೆಯುತ್ತವೆ. ಇದು ಸರೋವರ, ನದಿಗಳಂತಹ ಬೆಚ್ಚಗಿನ ಸಿಹಿನೀರಿನ ಮೂಲಗಳಲ್ಲಿ ಕಂಡು ಬರುವ ಸೂಕ್ಷ್ಮ ಜೀವಿಯಾಗಿದೆ.
ಈ ಸೂಕ್ಷ್ಮ ಅಮೀಬಾ ನೀರಿನಲ್ಲಿ ನಾವು ಈಜಾಡಿದಾಗ, ಅಥವಾ ಆಟವಾಡುವ ಸಂದರ್ಭದಲ್ಲಿ ಮೂಗಿನ ಒಳಗಿನಿಂದ ದೇಹವನ್ನು ಪ್ರವೇಶಿಸುತ್ತದೆ. ಈ ಮೂಲಕ ಮೆದುಳಿಗೆ ಹೋಗಿ ಅಲ್ಲಿ ಮೆದುಳನ್ನು ತಿನ್ನಲು ಪ್ರಾರಂಭಿಸುತ್ತದೆ. ಇದು ಮಾರಣಾಂತಿಕವಾಗಿ ಸಾವು ಸಂಭವಿಸುತ್ತದೆ ಎಂದು ವರದಿ ವಿವರಿಸಿದೆ.