ತಾಲೂಕಿನ ಬಿಡದಿಯ ಚನ್ನಮ್ಮನಹಳ್ಳಿಯ ಕ್ರಷರ್‌ವೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಶೇಖರಿಸಿದ್ದ ಭಾರಿ
ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
ಬುಧವಾರ ತಡರಾತ್ರಿ ತಾಲೂಕಿನ ಚನ್ನಮ್ಮನಹಳ್ಳಿ ವೆಂಕಟೇಶ್ವರ ಕ್ರಷರ್ ಮೇಲೆ ದಾಳಿ ನಡೆಸಿದ ಪೊಲೀಸರುಅಕ್ರಮವಾಗಿ ದಾಸ್ತಾನಾಗಿದ್ದ 31 ಬಾಕ್ಸ್ ಸೇμr ಫ್ಯೂಸ್, 9 ಬಾಕ್ಸ್ ಡೆಟೊನೇಟರ್, 9 ಬಾಕ್ಸ್ ಕೇಫ್ ಸೆನ್ಸಿಟಿವ್ ಸ್ಲರಿ, 9 ಬಾಕ್ಸ್ ಜೆಲೆಟಿನ್ ಕಡ್ಡಿಗಳು, 250 ಬಾಕ್ಸ್ ಫ್ಯೂಸ್ ವೈರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸ್ಫೋಟಕಗಳನ್ನು
ಶೇಖರಿಸಿದ್ದ ಕ್ರಷರ್ ಮಾಲೀಕ ಶ್ರೀರಾಮ್ ನಾಪತ್ತೆಯಾಗಿದ್ದಾರೆ. ಆರೋಪಿ ವಿರುದ್ಧ ಹಾಗೂ ಸ್ಫೋಟಕ ಸರಬರಾಜು
ಮಾಡಿರುವ ಶ್ರೀನಿವಾಸ್ ಎಂಬುವರ ವಿರುದ್ಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜುಲೈ 6ರಂದು
ಕೇರಳದ ವೈನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ಅಲ್ಲಿನ ಪೊಲೀಸರು ಈರುಳ್ಳಿ ತುಂಬಿದ್ದ ವಾಹನವನ್ನು ತಪಾಸಣೆ ಮಾಡಿದಾಗ 100 ಚೀಲ ಅಮೋನಿಯಂ ನೈಟ್ರೇಟ್, 189 ಬಾಕ್ಸ್ ಜಿಲೆಟಿನ್ ಕಡ್ಡಿಗಳು, 20 ಡಿಟೋನೇಟರ್
ಬಾಕ್ಸ್ ಪತ್ತೆಯಾಗಿದ್ದವು.
ಪಡೆದು ವಿಚಾರಣೆ ನಡೆಸಿದಾಗ ಬಿಡದಿ ಬಳಿಯ ಕ್ರಷರ್‌ನಿಂದ ಸ್ಫೋಟಕಗಳನ್ನು ತಂದಿರುವುದಾಗಿಯೂ ಹಾಗೂ
ಬೆಂಗಳೂರಿನ ಶ್ರೀನಿವಾಸ್ ಎಂಬುವರು ಸಾಮಗ್ರಿ ಪೂರೈಸಿರುವುದಾಗಿ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು
ನೀಡಿದ ಮಾಹಿತಿ ಮೇರೆಗೆ ಕೇರಳ ಪೊಲೀಸರು ಸಿಸಿಬಿ ಹಾಗೂ ಬಿಡದಿ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿದಾಗ ವೆಂಕಟೇಶ್ವರ ಕ್ರಷರ್‌ನ ಕಾರ್ಮಿಕರು ವಾಸಿಸುವ ಒಂದು ಕೊಠಡಿಯಲ್ಲಿ ಸ್ಫೋಟಕ ಸಾಮಗ್ರಿಗಳು
ದೊರೆತಿವೆ ಎಂದು ತಿಳಿದು ಬಂದಿದೆ.