Advertisement

ಕೇರಳ ಅಖಾಡ: ಕೋನ್ನಿ ಕ್ಷೇತ್ರ-ಐಕ್ಯರಂಗ, ಎಡರಂಗ ಕೋಟೆಯೊಳಗೆ ಕಮಲ ಅರಳುತ್ತಾ?

12:08 PM Mar 31, 2021 | Team Udayavani |

ಕಾಸರಗೋಡು: ಪತ್ತನಂತಿಟ್ಟ ಜಿಲ್ಲೆಯ ಕೋನ್ನಿ ವಿಧಾನಸಭಾ ಕ್ಷೇತ್ರ ಹೆಚ್ಚು ಗಮನ ಸೆಳೆದಿದೆ. ಶಬರಿಮಲೆ ಆಚಾರ ಅನುಷ್ಠಾನ ಸಂರಕ್ಷಣೆಗೆ ಹೋರಾಡಿ ಕಾರಾಗೃಹ ಸೇರಿದ ಕೆ.ಸುರೇಂದ್ರನ್‌ ಸ್ಪರ್ಧಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

Advertisement

ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷರಾಗಿರುವ ಕೆ.ಸುರೇಂದ್ರನ್‌ ಬಿಜೆಪಿಯಿಂದ ಕಣದಲ್ಲಿದ್ದಾರೆ. ಐಕ್ಯರಂಗ ಅಭ್ಯರ್ಥಿಯಾಗಿ ರೋಬಿನ್‌ ಪೀಟರ್‌, ಎಡರಂಗ ಅಭ್ಯರ್ಥಿಯಾಗಿ ಕೆ.ಯು.ಜನೀಶ್‌ ಕುಮಾರ್‌ ಸ್ಪರ್ಧಿಸುತ್ತಿದ್ದಾರೆ.  ಸಿಪಿಐ(ಎಂ)ನ ಯು.ಜನೀಶ್‌ ಕುಮಾರ್‌ ಪ್ರಸ್ತುತ  ಕೋನ್ನಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಹಲವು ಬಾರಿ ಎಡ-ಬಲ ರಂಗಗಳ ಅಭ್ಯರ್ಥಿಗಳಿಗೆ ಗೆಲುವು ಒಲಿದಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ 1996ರಿಂದ ಕಾಂಗ್ರೆಸ್‌ನ ಅಡೂರು ಪ್ರಕಾಶ್‌ ಸತತ ಐದು ಬಾರಿ ದಾಖಲೆಯ ಗೆಲುವು ಸಾಧಿಸಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಡೂರು ಪ್ರಕಾಶ್‌ ಸಂಸದರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಎಡರಂಗದ ಕೆ.ಯು.ಜನೀಶ್‌ ಕುಮಾರ್‌ ಗೆಲುವು ಸಾಧಿಸಿದ್ದರು.

ಕೋನ್ನಿ ವಿಧಾನಸಭಾ ಕ್ಷೇತ್ರದಲ್ಲಿ 2016 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಐಕ್ಯರಂಗದ ಅಡೂರು ಪ್ರಕಾಶ್‌ 72800 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಎಡರಂಗದ ಸನಲ್‌ ಕುಮಾರ್‌ 52052 ಮತವನ್ನು, ಬಿಜೆಪಿಯ ಅಶೋಕ್‌ ಕುಮಾರ್‌ 16713 ಮತಗಳನ್ನು ಪಡೆದಿದ್ದರು. ಆದರೆ 2019 ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕೆ.ಸುರೇಂದ್ರನ್‌ 39786 ಮತಗಳನ್ನು ಪಡೆದರು. ಎಡರಂಗದ ಜಿನೇಶ್‌ ಕುಮಾರ್‌ 54099 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

ಐಕ್ಯರಂಗದ ಪಿ.ಮೋಹನ್‌ ರಾಜ್‌ 44146 ಮತಗಳನ್ನು ಪಡೆದಿದ್ದರು. ಕೋನ್ನಿ ಕೋಟೆ ಉಳಿಸಿಕೊಳ್ಳಲು ಎಡರಂಗ, ಮತ್ತೆ ಗೆಲುವು ಸಾಧಿಸಲು ಐಕ್ಯರಂಗ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್‌ ಜಿದ್ದಾಜಿದ್ದಿನ ಹೋರಾಟ ನೀಡುತ್ತಿದ್ದು ಇಬ್ಬರು ಅಭ್ಯರ್ಥಿಗಳಿಗೆ ಸವಾಲಾಗಿದ್ದಾರೆ. ಈ ಕ್ಷೇತ್ರದಲ್ಲಿ ಕೆ.ಸುರೇಂದ್ರನ್‌ ಗೆಲುವು ಸಾಧಿಸಲಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಕೋನ್ನಿಯಲ್ಲಿ ಶಬರಿಮಲೆ ಆಚಾರ ಅನುಷ್ಠಾನ ಸಂರಕ್ಷಣೆಗಾಗಿ ನಡೆದ ಹೋರಾಟವೇ ಪ್ರಮುಖ ಚುನಾವಣಾ ವಿಷಯವಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next