Advertisement
ಪ್ರಕೃತಿಯ ವಿಸ್ಮಯ ಈ ದೇಗುಲಪ್ರಕೃತಿಯಿಂದಲೇ ನಿರ್ಮಿತವಾಗಿರುವ ವಿಶಿಷ್ಟ, ವಿಶೇಷವಾಗಿದೆ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನ. ಗುಹೆಯೇ ಶಿವನಿಗೆ ಆಲಯವಾಗಿದೆ. ಇಲ್ಲಿ ಗುಡಿಯೊಳಗೆ ಸುಮಾರು 20 30 ಅಡಿಗಳಷ್ಟು ವಿಶಾಲವಾದ ಜಾಗದಲ್ಲಿ ಹರಡಿರುವ ನೀರು, ಅಲ್ಲಿರುವ ಹಲವು ಬಗೆಯ ಮೀನುಗಳು, ನೀರಿನಲ್ಲಿಯೇ ನಿಂತು ದೇವರಿಗೆ ಕೈ ಮುಗಿಯುವ ಕ್ಷಣ, ಕಾಲಿಗೆ ಮುತ್ತಿಕ್ಕುವ ಮೀನುಗಳು ಎಲ್ಲವೂ ಒಂದು ರೀತಿಯ ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ. ಕತ್ತಲಲ್ಲಿ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿಲ್ಲ.