Advertisement
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಕಾರ್ಯದರ್ಶಿ ಚಿದಾನಂದ ಗೌಡ ಕೊಯಕ್ಕುರಿ, ಪ್ರಮುಖರಾದ ಸುರೇಶ್ ದೇಂತಾರು, ಹರೀಶ್ ರೈ ಹಳ್ಳಿ, ಶಾಂತಾರಾಮ ಶೆಟ್ಟಿ ಕೇಪು, ಜಯಚಂದ್ರ ರೈ ಕುಂಟೋಡಿ, ರಾಜಕುಮಾರ್ ಶೆಟ್ಟಿ ನಂದುಗುರಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಪಾದಯಾತ್ರೆಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನಿರಿಸಿದ ರಥವನ್ನು ಎಳೆದೊಯ್ಯುವ ಬೃಹತ್ ಗಾತ್ರದ ದಷ್ಟಪುಷ್ಟವಾದ ಎತ್ತುಗಳು ಸ್ಥಳೀಯ ಜನರಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮೂಲಕ ಸಾಗಿ ಬಂದ ಇಸ್ಕಾನ್ ಸನ್ಯಾಸಿಗಳಿದ್ದ ಪಾದಯಾತ್ರೆಯ ತಂಡ ರಾತ್ರಿ ವೇಳೆ ದೇವಳದ ವಠಾರದಲ್ಲಿ ವಿಶ್ರಾಂತಿ ಪಡೆಯಿತು. ರಾತ್ರಿ ಜರಗಿದ ಭಜನೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 1984ರಲ್ಲಿ ಪ್ರಾಂಭವಾದ ಪಾದಯಾತ್ರೆಯು ಭಾರತವನ್ನು ಐದು ಸಲ ಪ್ರದಕ್ಷಿಣೆಗೈದಿದೆ. ಇದೀಗ 6ನೇ ಬಾರಿ ಕರ್ನಾಟಕವನ್ನು ಪ್ರವೇಶಿಸಿದೆ. ಪಾದಯಾತ್ರೆಯ ವೇಳೆ ಧರ್ಮ ಜಾಗೃತಿ, ಶ್ರೀಕೃಷ್ಣನ ಸಂದೇಶ ಸಾರುವುದರೊಂದಿಗೆ ಶ್ರೀಮದ್ಭಗವದ್ಗೀತೆಯ ಪ್ರಚಾರ ಕಾರ್ಯವನ್ನೂ ನಡೆಸಲಾಗುತ್ತಿದೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಇಸ್ಕಾನ್ ಸನ್ಯಾಸಿ ಪ್ರಭುಶಂಕರ ದಾಸ ಅವರು ತಿಳಿಸಿದರು. ಬುಧವಾರ ಬೆಳಗ್ಗೆ ಪಾದಯಾತ್ರೆಯ ತಂಡ ಸುಬ್ರಹ್ಮಣ್ಯದತ್ತ ಸಾಗಿತು.