Advertisement

ಕಣ್ಮರೆಯಾಗುತ್ತಿರುವ ಕೆಂಜೋಳದ ತಳಿ

08:01 PM Mar 01, 2022 | Team Udayavani |

ದೋಟಿಹಾಳ: ಹಿಂದೋಮ್ಮೆ ಕೊಪ್ಪಳ ಜಿಲ್ಲೆಯ ಸೀಮೆಯಲ್ಲಿ ಬೆಳೆಯುತ್ತಿದ್ದ ಕೆಂಜೋಳವು ಇಂದು ಅಪರೂಪವಾಗಿದೆ. ಈ ಭಾಗದಲ್ಲಿ ಕೆಂಜೋಳದ ರೊಟ್ಟಿ ತಿಂದ ಜಟ್ಟಿಗರನ್ನು ಕಾಣಸಿಗುತ್ತಿದ್ದರು. ಗಟ್ಟಿ ಜಟ್ಟಿಗರ ಸಂಖ್ಯೆಯು ವಿರಳವಾಗಿದೆ. ರೈತರಿಗೆ ಹೀಗ ಕೆಂಜೋಳದ ಬೀಜಗಳು ಸಿಗುತ್ತಿಲ್ಲ. ಹೀಗೆ ಅಳಿದು ಹೋಗುವ ಹಂಚಿನಲ್ಲಿರುವ ಈ ಜೋಳವನ್ನು ದೋಟಿಹಾಳ ಸಮೀಪದ ಬಿಜಕಲ್ ಗ್ರಾಮದ ರೈತ ಸಿದ್ದಪ್ಪ ಕುರಿ ಅವರು ತಮ್ಮ ನಾಲ್ಕು ಎಕರರೆ ಜಮೀನಿನಲ್ಲಿ ಹುಡಿ ಸಾಲುಗಳ ಮಧ್ಯ ಬೆಳೆದು ಕೆಂಜೋಳದ ಉಳಿವಿಗೆ ಶ್ರಮಿಸುತ್ತಿದ್ದಾನೆ. ಸತತ ಇಪ್ಪತ್ತು ವರ್ಷಗಳಿಂದ ಕೆಂಜೋಳವನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಾ ಬಂದಿರುವುದು ಇತರ ರೈತರಿಗೆ ಮಾದರಿಯಂತಾಗಿದ್ದಾನೆ.

Advertisement

ಸಾಂಪ್ರದಾಯಕವಾಗಿ ಒಣಬೇಸಾಯದಲ್ಲಿ ಬೆಳೆಯುವ ಬಿಳಿಜೋಳಗಳ ಸಾಲುಗಳ ಕೊನೆಯ(ಹುಡಿ) ಸಾಲುಗಳಲ್ಲಿ, ಮದ್ಯಸಾಲುಗಳಲ್ಲಿ ಕೆಂಜೋಳವನ್ನು ಬಿತ್ತಿ ಮಿಶ್ರಬೆಳೆಯಾಗಿ ಬೆಳೆಯುತ್ತಾರೆ. ತನ್ನ ಕುಟುಂಬಕ್ಕಾಗುವಷ್ಟು ಕೆಂಜೋಳವನ್ನು ಮಾತ್ರ ಬೆಳೆಯುತ್ತಾರೆ. ಹಬ್ಬಹರಿದಿನಗಳ ಸಮಯದಲ್ಲಿ ಕೆಂಜೋಳದ ಪಾಯಸ, ಹುಗ್ಗಿ, ಚಪಾತಿ, ಕುಚಗಡುಬು ಇತ್ಯಾದಿ ಆಹಾರ ತಿನಿಸುಗಳನ್ನು ಮಾಡಿ ತಿನ್ನಲು ಸಾಕಾಗುವಷ್ಟು ಕೆಂಜೋಳವನ್ನು ಮಾತ್ರ ಬೆಳೆಯುತ್ತಾರೆ. ಈ ಜೋಳವನ್ನು ಯಾರು ಮಾರುಕಟ್ಟೆಯಲ್ಲಿ ಮಾರುವುದಿಲ್ಲ. ಹೀಗೆ ಬೆಳೆದ ಕೆಂಜೋಳದಲ್ಲಿ ಕೆಲವೊಂದಿಷ್ಟನ್ನು ಬೀಜವಾಗಿ ತೆಗೆದಿರಿಸುತ್ತಾರೆ.

ಬಣ್ಣದ ಚೀಲದ ಹಾವಳಿ: ಯಾವಾಗ ಸುಧಾರಿಸಿದ ಬೀಜದ ತಳಿಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಣ್ಣದ ಚೀಲದಲ್ಲಿ ವಿವಿದ ಕಂಪನಿಗಳ ಬೀಜಗಳು ಮಾರುಕಟ್ಟೆಗಳಲ್ಲಿ ಹಾಜರಾದವು ನೋಡಿ.. ಅಲ್ಲಿಂದ ರೈತರು ಬೀಜ ಸಂಗ್ರಹಿಸುವ ಗೊಜಿಗೆ ಹೋದಾರು ಹೇಳಿ. ಅದರ ಜತೆಗೆ ಬಿತ್ತನೆ ಸಮಯದಲ್ಲಿ ಬೀಜ ವಿನಿಮಯ ಪದ್ದತಿಯೂ ನಿಂತಿತು.

ಕೆಂಜೋಳದ ವಿಶೇಷವೇನು? :

ಹೈಬ್ರೀಡ್ ಬೀಜದ ತಳಿಯ ಈ ಕಾಲದಲ್ಲಿ, ಸುಮಾರು ನಾಲ್ಕೆöÊದು ತಿಂಗಳುಗಳ ಕಾಲ ಬೆಳೆದು ಗಟ್ಟಿ ಆಹಾರ ಕೊಡುತ್ತಿದ್ದ. ದೇಶೀಯ ಜೋಳದ ತಳಿಗಳಾದ ಭಗವತಿ, ಭೋಗಾಪುರ, ಗಿಡ್ಡ ಜೋಳ, ಯಕ್ಕರನಾಳ… ಇತ್ಯಾದಿ ಬೀಜಗಳು ಈಗಾಗಲೇ ಅಳಿದು ಹೋಗಿವೆ. ಹಿಂಗಾರು ಜೋಳದ ಜೊತೆ-ಜೊತೆಯಾಗಿ ಬೆಳೆಯುತ್ತಿದ್ದ ಈ ಕೆಂಪು ಜೋಳ ಕೂಡಾ ಇವುಗಳ ಸಾಲಿಗೆ ಸೇರುವ ಸ್ಥಿತಿ ತಲುಪಿದೆ. ಉತ್ತಮ ಪೋಷಕಾಂಶಗಳಿರುವ ಕೆಂಪು ಜೋಳವನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಆಯುರ್ವೇದಿಕ್ ಔಷಧಿಯಾಗಿ ಸಹ ಬಳಸುತ್ತಾರೆ. ವಿಸೇಷವಾಗಿ ಜೋಳದ ದಂಟಿಗಾಗಲೀ, ತೆನೆಗಳಿಗಾಗಲಿ, ಯಾವುದೇ ರೋಗ-ರುಜಿನ ಬರುವುದೇ ಇಲ್ಲ. ಅಂತಹ ವೈಶಿಷ್ಟö್ಯ ಈ ಕೆಂಪು ಜೋಳಕ್ಕಿದೆ.

Advertisement

ಮಾರುಕಟ್ಟೆಯಲ್ಲಿ ಈ ಜೋಳದ ಬೀಜಗಳು ಸಿಗುವುದಿಲ್ಲ, ಮತ್ತು ಕೆಂಜೋಳದ  ಬೇಳೆ ತೆಗೆಯಲು ಹೆಚ್ಚು ಅವಧಿ ಬೇಕು… ಇತ್ಯಾದಿ ಕಾರಣಗಳಿಂದ ಅಪರೂಪದ ಈ ಜೋಳದ ತಳಿ ಮಾಯವಾಗುತ್ತಲಿದೆ. ಕೆಂಜೋಳದ ತಳಿಯ ರಕ್ಷಣೆಯಲ್ಲಿ ತೊಡಗಿರುವ ಸಿದ್ದಪ್ಪ ಕುರಿ ಸಾಧನೆ ಅನನ್ಯವಾಗಿದೆ.

ದೇಸಿ ತಳಿಯ ಬೀಜಗಳನ್ನು ರಕ್ಷಿಸಬೇಕು. ಅವುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಆಸಕ್ತಿ ಮೈಗೂಡಿಸಿಕೊಂಡಿರುವು ರೈತರು ಹಲವು. ಬೀಜ ಸಂಗ್ರಹ ಮಾತ್ರವಲ್ಲದೇ.. ಅವುಗಳನ್ನಿ ಇಂದಿಗೂ ಆಹಾರವಾಗಿ ಬಳಸುತ್ತಿದ್ದಾರೆ. ಬಿಜಕಲ್ ಗ್ರಾಮದ ಸಿದ್ದಪ್ಪ ಕುರಿ ಅವರು ಈ ಬೀಜವನ್ನು ಸಂರಕ್ಷಣೆ ಮಾಡುವದ ಜೊತೆ ದೇಸಿಯ ತಳಿಗಳ ಬೀಜವನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ಆಹಾರದಲ್ಲಿ ಬಿಪಿ, ಸುಗರ್ ತಡೆಗಟ್ಟುವ ಪೌಷ್ಟಿಕಾಂಶ ಇದರಲ್ಲಿ ಇದೆ.  – ಕಳಕಪ್ಪ ಗೌಡ್ರ  ಮಾಟೂರ ಗ್ರಾಮದ ರೈತ.

 

-ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next