Advertisement

ಪ್ರಭಾಕರ್‌ ಭಟ್ರನ್ನು ಬಂಧಿಸಿದ್ರೆ ರಾಜ್ಯಕ್ಕೆ ಬೆಂಕಿ ಬೀಳ್ತದೆ !

02:34 PM Jul 13, 2017 | Team Udayavani |

ಮಂಗಳೂರು: ಗೃಹ ಸಚಿವಾಲಯದ ಸಲಹೆಗಾರ ಕೆಂಪಯ್ಯ ಅವರು ದಕ್ಷಿಣ ಕನ್ನಡಕ್ಕೆ ಬಂದಿರುವುದೇ ಬೆಂಕಿ ಹಚ್ಚಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಿಡಿ ಕಾರಿದ್ದಾರೆ. 

Advertisement

ಗುರುವಾರ ಸರ್ಕ್ಯೂಟ್‌ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೆಂಪಯ್ಯ ಎನ್ನುವ ಮಹಾನುಭಾವ ಮಂಗಳೂರಿನಲ್ಲಿ ಬೆಂಕಿ ಹಚ್ತಾರೆ. ಬೆಂಕಿ ನಂದಿಸಲು ಬಂದಿಲ್ಲ. ಕೆಂಪಯ್ಯ, ಸಚಿವರಾದ ರಮನಾಥ್‌ ರೈ ಮತ್ತು ಯು.ಟಿ.ಖಾದರ್‌ ಅವರು 2 ತಿಂಗಳುಗಳ ಕಾಲ ಮಂಗಳೂರಿಗೆ ಬರಬಾರದು.ನಾವು ಕೂಡ ಬರುವುದಿಲ್ಲ. ಆಗ ಮಾತ್ರ ಹಾಗಾದಾಗ ಸಹಜವಾಗಿ ಶಾಂತಿ ನೆಲೆಸುತ್ತದೆ ಎಂದರು. 

ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಬಂದಿಸಿದರೆ ರಾಜ್ಯ ಹೊತ್ತಿಕೊಂಡು ಉರಿಯುತ್ತದೆ  ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇನೆ ಯಾಕೆಂದರೆ ಆ ಪ್ರಮಾಣದಲ್ಲಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರು. 

ಪೊಲೀಸ್‌ ಅಧಿಕಾರಿಗಳೆ ನಿಷ್ಪಕ್ಷಪಾತವಾಗಿ ಕೆಲ ಮಾಡಿ . ಸಿದ್ದರಾಮಯ್ಯ ಅಧಿಕಾರ ಇನ್ನು ಕೇವಲ 8-9 ತಿಂಗಳು ಮಾತ್ರ ಆ ಬಳಿಕ ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು.

ಕೆಂಪಯ್ಯ, ಸಚಿವರಾದ ರಮನಾಥ್‌ ರೈ ಮತ್ತು ಯು.ಟಿ.ಖಾದರ್‌ ಅವರು 2 ತಿಂಗಳುಗಳ ಕಾಲ ಮಂಗಳೂರಿಗೆ ಬರಬಾರದು.ನಾವು ಕೂಡ ಬರುವುದಿಲ್ಲ.  ಆಗ ಮಾತ್ರ ಹಾಗಾದಾಗ ಸಹಜವಾಗಿ ಶಾಂತಿ ನೆಲೆಸುತ್ತದೆ ಎಂದರು. 

Advertisement

ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಬಂದಿಸಿದರೆ ರಾಜ್ಯಕ್ಕೆ ಬೆಂಕಿ ಬೀಳ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು ಪೊಲೀಸ್‌ ಅಧಿಕಾರಿಗಳೆ ನಿಷ್ಪಕ್ಷಪಾತವಾಗಿ ಕೆಲ ಮಾಡಿ ಎಂದು ಮನವಿ ಮಾಡಿದರು. 

ಸಿದ್ದರಾಮಯ್ಯ ಅಧಿಕಾರ ಇನ್ನು ಕೇವಲ 8-9 ತಿಂಗಳು ಮಾತ್ರ ಆ ಬಳಿಕ ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು. 

ಕಾಯಕರ್ತರ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಬೃಹತ್‌ ಸಾರ್ವಜನಿಕ ಸಮಾವೇಶ ನಡೆಸುತ್ತೇವೆ. 1 ಲಕ್ಷ ಜನ ಸೇರಿಸಿ ಕೇಂದ್ರ ಗೃಹ ಸಚಿವರನ್ನೂ ಆಹ್ವಾನಿಸುತ್ತೇವೆ ಎಂದರು. 

ಬಿ.ಸಿ.ರೋಡ್‌ನ‌ಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಸಜೀಪ ಪಡ್ಪು ನಿವಾಸಕ್ಕೆ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಬಳಿಕ ಮಹಿಳಾ ಮೋರ್ಚಾ ವತಿಯಿಂದ ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾದರು.

ಭಟ್ರನ್ನು ಮುಟ್ಟಿನೋಡಿ !
ಮಹಿಳಾ ಮೋರ್ಚಾ ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ  ರೈಗಳೆ ..ಪ್ರಭಾಕರ್‌ ಭಟ್ರನ್ನು ಬಂಧಿಸುವುದು ಬಿಡಿ ಮುಟ್ಟಿ ನೋಡಿ ಎಂದು ಸಚಿವ ರಮನಾಥ್‌ ರೈ ಅವರಿಗೆ ಸವಾಲು ಹಾಕಿದರು.  

Advertisement

Udayavani is now on Telegram. Click here to join our channel and stay updated with the latest news.

Next