Advertisement
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಂಪೇ ಗೌಡರು ದೂರದೃಷ್ಟಿಯುಳ್ಳ ಆಡಳಿತಗಾರ ರಾಗಿದ್ದರು. ಅವರು ಕಟ್ಟಿದ ಬೆಂಗಳೂರು ಇಂದು ಜಗದ್ವಿಖ್ಯಾತ ನಗರವಾಗಿ ಬೆಳೆದಿದೆ. ಕನ್ನಡಿಗರ ಹೆಮ್ಮೆಯ ನಾಯಕ ಕೆಂಪೇಗೌಡರು ಎಂದು ಬಣ್ಣಿಸಿದರು.
Related Articles
Advertisement
ವಿಶ್ವದ ಗಮನ ಸೆಳೆದ ಬೆಂಗಳೂರು: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಕರ್ನಾಟಕದಲ್ಲಿ ಅನೇಕ ರಾಜಮಹಾ ರಾಜರು ಆಳಿಹೋಗಿದ್ದಾರೆ, ಆದರೆ ಅವರ ಪೈಕಿ ಮುಂದಿನ ದಿನಗಳಲ್ಲಿ ಯಾವರೀತಿ ಯೋಜನೆ ಹಾಕಿಕೊಳ್ಳಬೇಕು ಎಂಬುದನ್ನು 15 ನೇ ಶತಮಾನದಲ್ಲೇ ಕೆಂಪೇಗೌಡರು ಕಂಡುಕೊಂಡಿದ್ದರು. ಇದರ ಫಲವೇ ಬೆಂಗಳೂರು ನಗರ ಕರ್ನಾಟಕ ರಾಜಧಾನಿಯಾಗಿ ಜಗತ್ತಿನ ಗಮನಸೆಳೆಯುತ್ತಿದೆ ಎಂದರು.
ದೂರದೃಷ್ಟಿ ಹೊಂದಿದ್ದ ನಾಡಪ್ರಭು ಕೆಂಪೇಗೌಡ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಕೆಂಪೇಗೌಡರು ಪಾಳೇ ಗಾರರಾಗಿದ್ದು, ಅನೇಕ ಕೆರೆಕಟ್ಟೆ ಕಟ್ಟುವ ಮೂಲಕ ಮುಂಬರುವ ದಿನಗಳಲ್ಲಿ ಏನಾ ದರೂ ಬದಲಾವಣೆ ಯಾಗಬಹುದು ಎಂಬ ದೂರ ದೃಷ್ಟಿಕೋನ ಹೊಂದಿದ್ದರು. ಅದಕ್ಕೆ ಮುನ್ನುಡಿ ಯಾಗಿಯೇ ಅವರು ನಿರ್ಮಿಸಿದ ಬೆಂಗಳೂರು ನಗರ ವಿಶಾಲವಾಗಿ ಬೆಳೆದು, ಇಡೀ ಪ್ರಪಂಚದ ಗಮನಸೆಳೆ ಯುತ್ತಿದೆ, ನಗರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಪ್ರಸ್ತುತದಲ್ಲಿ ಸೂಕ್ತ ಎಂದರು.
ಸನ್ಮಾನ: ಅಂತಾರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಪಂದ್ಯದಲ್ಲಿ ಚಿನ್ನದಪದಕ ಪಡೆದ ಪಣ್ಯದಹುಂಡಿ ಗ್ರಾಮದ ಆರ್.ವಂಶಿ, ಪ್ರಸಕ್ತಸಾಲಿನ ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಎಸ್ಪಿ ಅನಿತಾ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಗೌಡ, ಜಿಪಂ ಸದಸ್ಯ ಸಿ.ಎನ್.ಬಾಲರಾಜು, ತಾಪಂ ಉಪಾಧ್ಯಕ್ಷ ಬಸವಣ್ಣ, ಸದಸ್ಯ ಮಹದೇವಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆ ಉಪನಿರ್ದೇಶಕ ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಿಬ್ಬಂದಿ, ನಾನಾಗ್ರಾಮಗಳ ಒಕ್ಕಲಿಗ ಸಂಘದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ಮೆರವಣಿಗೆ: ಇದಕ್ಕೂ ಮೊದಲು ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು ನಗರದ ಚಾಮರಾಜೇಶ್ವರದೇವಸ್ಥಾನದ ಆವರಣದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಒಕ್ಕಲಿಗ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಡೊಳ್ಳುಕುಣಿತ, ಬ್ಯಾಂಡ್‌ಸೆಟ್ ಕಲಾತಂಡ ಗಳೊಂದಿಗೆ ಮೆರವಣಿಗೆ ಜೋಡಿರಸ್ತೆ ಮುಖಾಂತರ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಮಾವೇಶಗೊಂಡಿತು.
ಕಾರ್ಯಕ್ರಮಕ್ಕೂ ಮುನ್ನ ಜಾನಪದ ಗಾಯಕರಾದ ಅರುಣ್‌ಕುಮಾರ್ ಹಾಗೂ ಸಿ.ಎಂ.ನರಸಿಂಹಮೂರ್ತಿ ಭಾವಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು.