Advertisement
ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಶುದ್ಧೀಕರಿಸಿದ ನೀರು ಸರಬರಾಜು, ಯುಟಿಲಿಟಿ ಡಕ್ಟ್ ನಿರ್ಮಾಣ, ವಿದ್ಯುತ್ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಎರಡು ಕಂಪನಿಗಳಿಗೆ ನೀಡಬೇಕಾಗಿದ್ದ ಕೋಟ್ಯಂತರ ರೂ. ಗಳನ್ನು ಬಿಡಿಎ ಬಾಕಿ ಉಳಿಸಿಕೊಂಡಿದ್ದು ಬಾಕಿ ಪಾವತಿ ಮಾಡುವ ವರೆಗೂ ಕೆಲಸ ಮಾಡಲು ಕಂಪನಿಗಳು ಹಿಂದೇಟು ಹಾಕಿವೆ.
Related Articles
Advertisement
ಆ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮುಕ್ತ ವೇದಿಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)ದ ಮೆಟ್ಟಿಲೇರಿತ್ತು. ಇದೀಗ ಮೂರನೇ ಪಾರ್ಟಿ ಸಂಸ್ಥೆಗೆ ಕಾಮಗಾರಿ ಬದಲಾವಣೆ ಪ್ರಸ್ತಾವನೆ ಬಗ್ಗೆ ವರದಿ ಸಲ್ಲಿಸುವಂತೆ ಬಿಡಿಎ ಸೂಚನೆ ನೀಡಿದೆ. ಆ ಸಂಸ್ಥೆ ನೀಡುವ ವರದಿ ಬರುವವೆರಗೂ ಕಾಯಬೇಕಾಗುತ್ತದೆ, ಹೀಗಾಗಿ ನಮ್ಮಬಡಾವಣೆಯ ಸಮಸ್ಯೆ ಶೀಘ್ರದಲ್ಲೆ ಬಗೆಹರಿಯುವಂತೆ ಕಾಣುತ್ತಿಲ್ಲ ಎಂದು ಹೇಳುತ್ತಾರೆ.
1542.19 ಕೋಟಿ ರೂ. ಅಗತ್ಯ :
ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಈವರೆಗೂ ಬಿಡಿಎ ಸುಮಾರು 737.10 ಕೋಟಿ ರೂ. ವೆಚ್ಚ ಮಾಡಿದೆ. ಕಾಮಗಾರಿಯನ್ನು ಸಂಪೂರ್ಣಗೊಳಿಸಲು 1542.19 ಕೋಟಿ ರೂ.ಅವಶ್ಯವಿದೆ. ಈಗಾಗಲೇ ಬಡಾವಣೆಯ ಸಿವಿಲ್ ಕಾಮಗಾರಿಗೆ 714.12 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇನ್ನೂ ಈ ಕಾರ್ಯಕ್ಕೆ 767.35 ಕೋಟಿ ರೂ. ಅಗತ್ಯವಿದೆ. ಸದರಿ ಯೋಜನೆ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಗೊಳಿಸುವುದಾಗಿ ಬಿಡಿಎ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಆಗ್ಗಾಗ್ಗೆ ಎದುರಾಗುತ್ತಿರುವ ಸಮಸ್ಯೆಗಳಿಂದಾಗಿ ಮೂಲಸೌಕರ್ಯ ಕಾಮಗಾರಿ ಇನ್ನೂ ಮುಗಿದಿಲ್ಲ.
2016ರಿಂದ ಆರಂಭವಾಗಿರುವ ಬಡಾವಣೆ ನಿರ್ಮಾಣ ಯೋಜನೆ ಕಾಮಗಾರಿ ಕಾರ್ಯ 2022ರ ಬಂದರೂ ಇನ್ನೂ ಪೂರ್ಣಗೊಂಡಿಲ್ಲ. ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ಈ ವರ್ಷದಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ, ಈಗ ಕಂಪೇಗೌಡ ಬಡಾವಣೆಯಲ್ಲಿ ಕೆಲಸ ನಿಲ್ಲದಂತೆ ಬಿಡಿಎ ನೋಡಿಕೊಳ್ಳಬೇಕು.-ಎ.ಎಸ್.ಸೂರ್ಯಕಿರಣ್, ಜಂಟಿ ಕಾರ್ಯದರ್ಶಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕ
–ದೇವೇಶ ಸೂರಗುಪ್ಪ