Advertisement
ಮಾದರಿ ಗ್ರಾಮಯಾವ ಗ್ರಾಮದಲ್ಲಿ ಅತೀ ಹೆಚ್ಚು ಮತ ಬೀಳುತ್ತದೆಯೋ ಆ ಗ್ರಾಮಕ್ಕೆ ಅತೀ ಹೆಚ್ಚು ಅನುದಾನ ನೀಡುತ್ತೇನೆ ಎಂದು ಚುನಾವಣೆಗೆ ಮುನ್ನ ಮಾತು ಕೊಟ್ಟಂತೆ ಅತೀ ಹೆಚ್ಚು ಮತ ಬಿದ್ದ ಪಡುತೋನ್ಸೆ ಗ್ರಾಮಕ್ಕೆ ಈಗಾಗಲೇ 30 ಕೋ. ರೂ. ಅನುದಾನವನ್ನು ನೀಡಲಾಗಿದೆ. ಈಗ ಗ್ರಾಮ ವಿಕಾಸ ಯೋಜನೆಯಡಿಯಲ್ಲೂ ಪಡುತೋನ್ಸೆಯನ್ನು ಸೇರಿಸಲಾಗಿದ್ದು, ಮುಂದೆ ಜನರು ಶಕ್ತಿ ನೀಡಿದರೆ ಇನ್ನೂ 30 ಕೋ. ರೂ. ಅನುದಾನ ಒದಗಿಸುವ ವ್ಯವಸ್ಥೆ ಮಾಡಿ ಪಡುತೋನ್ಸೆಯನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಗ್ರಾಮದಲ್ಲಿ ಅಭಿವೃದ್ಧಿಯ ಪರಿಚಯ ಆಗಿರುವುದು ಪ್ರಮೋದ್ ಮಧ್ವರಾಜರ ಕಾಲದಲ್ಲಿ. ಈ ಹಿಂದೆ ಗ್ರಾಮವೊಂದಕ್ಕೆ 3 ಲಕ್ಷ ರೂ. ಅನುದಾನ ಬಂದರೆ ದೊಡ್ಡ ವಿಷಯವಾಗುತ್ತಿತ್ತು. ಈಗ ಪಡುತೋನ್ಸೆ ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ 30 ಕೋ. ರೂ. ಅನುದಾನ ಬಂದಿದೆ ಎಂದರು. ಸಚಿವ ಪ್ರಮೋದ್ ಅವರು ತನ್ನ ಕ್ಷೇತ್ರಕ್ಕೆ ಇದುವರೆಗೆ 2,000 ಕೋ. ರೂ. ಅನುದಾನ ತರುವ ಮೂಲಕ ರಾಜ್ಯದ ಇತರ ಶಾಸಕರಿಗೆ, ಮಂತ್ರಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಫೌಸಿಯಾ ಸಾದಿಕ್ ವಹಿಸಿದ್ದರು. ಸುಲೋಚನಾ ಸತೀಶ್, ರಹಮತುಲ್ಲಾ ತೋನ್ಸೆ, ವೆರೋನಿಕಾ ಕರ್ನೇಲಿಯೊ, ರಘುರಾಮ ಶೆಟ್ಟಿ, ನಿತ್ಯಾನಂದ ಕೆಮ್ಮಣ್ಣು, ದಿನೇಶ್ ಅಮೀನ್, ಜಯ ನಾಯಕ್, ಗುರು ರಾಜ್ ರಾವ್, ಶ್ರೀಧರ್, ಇದ್ರಿಸ್, ಜನ್ ವೀವ್, ಸಾಯಿರಾಬಾನು, ಪದ್ಮಾಕ್ಷಿ, ರಾಘವೇಂದ್ರ ಕರ್ಜೆ ಉಪಸ್ಥಿತರಿದ್ದರು. ಜಗದೀಶ್ ನಿರೂಪಿಸಿ, ಲಿಂಗರಾಜು ವಂದಿಸಿದರು.