Advertisement

ಹೆರೂರ ಕಾರ್ಯ ನಮಗೆಲ್ಲ ಮಾದರಿ

04:20 PM Feb 10, 2020 | Naveen |

ಕೆಂಭಾವಿ: ಸಮಾಜದ ಅಭಿವೃದ್ಧಿಗೆ ಹಗಲಿರುಳು ಸತತ ಪ್ರಯತ್ನ ಮಾಡುತ್ತಿರುವ ನಾನು ಕೋಲಿ ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೊಳಿಸಲು ಸತತ ಪ್ರಯತ್ನ ಮಾಡುತ್ತಿರುವುದಾಗಿ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಹೇಳಿದರು.

Advertisement

ಯಕ್ತಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋಲಿ ಕಬ್ಬಲಿಗ ಸಮಾಜದ ಪ್ರತಿಯೊಬ್ಬರೂ ಗಂಗೆಯ ಮಕ್ಕಳಾಗಿದ್ದು, ಬೇರೊಬ್ಬರಿಗೆ ಕೇಡನ್ನು ಬಯಸದೆ ಎಲ್ಲ ಸಮಾಜದ ಜೊತೆ ಉತ್ತಮ ಬಾಂಧವ್ಯ ಹೊಂದಿದ ಸಮಾಜ ನಮ್ಮದಾಗಿದ್ದು, ದಿ. ವಿಠ್ಠಲ ಹೆರೂರ ಅವರ ಸಮಾಜಮುಖೀ ಕಾರ್ಯ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದರು.

ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಎಲ್ಲ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮಾಜದ ಮುಖಂಡರ ಜೊತೆ ಗೂಡಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬರುವ ಮಾರ್ಚ್‌ ತಿಂಗಳಿನಲ್ಲಿ ಕೋಲಿ ಕಬ್ಬಲಿಗ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಅನುದಾನ ಒದಗಿಸಲಿದ್ದು, ಸಮಾಜದ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಿಗಮದಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ, ಅಂಬಿಗರ ಚೌಡಯ್ಯವನರ ವಚನಗಳು ನಮಗೆ ದಾರಿದೀಪವಾಗಿದ್ದು, ಕೋಲಿ
ಕಬ್ಬಲಿಗ ಸಮಾಜವನ್ನು ಎಸ್‌.ಟಿ. ಪಂಗಡಕ್ಕೆ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಕಾರ್ಯಕ್ರಮಕ್ಕೂ ಮೊದಲು ಸಮಾಜದ ಗುರುಗಳನ್ನು ಮತ್ತು ಬಾಬುರಾವ್‌ ಚಿಂಚನಸೂರ ಅವರನ್ನು ಮೆರವಣಿಗೆ ಮಾಡಲಾಯಿತು.

Advertisement

ಶಿವಕುಮಾರ ನಾಟೀಕರ ಪ್ರಾಸ್ತಾವಿಕ ಮಾತನಾಡಿದರು. ನರಸಿಪುರ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ, ಸಿಂದಗಿ ಶ್ರೀ ಶಾಂತ ಗಂಗಾಧರ ಮಹಾಸ್ವಾಮೀಜಿ, ಪುಣ್ಯಕೋಟಿ ಆಶ್ರಮದ ಶ್ರೀ ವರಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೋಲಿ ಕಬ್ಬಲಿಗ ಸಮಾಜದ ರಾಜ್ಯಾಧ್ಯಕ್ಷ ಡಾ| ಮೌಲಾಲಿ ಬಳ್ಳಾರಿ, ಶ್ರೀನಿವಾಸರೆಡ್ಡಿ ಯಾಳಗಿ, ಬಸವರಾಜ ಸಪ್ಪನಗೋಳ, ಭಂಡಾರೆಪ್ಪ ನಾಟೀಕರ, ಭೀಮಣ್ಣ ಶಖಾಪುರ, ಡಾ| ಮಲ್ಲಿಕಾರ್ಜುನ ಮುಕ್ಕಾ, ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ, ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ, ಅಯ್ಯಣ್ಣ, ಸಣ್ಣನಿಂಗಣ್ಣ ನಾಯಕೋಡಿ, ಅಂಬರೀಶ ಕಾಮನಕೇರಿ, ಪ್ರಭುಲಿಂಗ ಜಮಾದಾರ, ನೀಲಕಂಠ ಜಮಾದಾರ, ಕನಕಪ್ಪ ವಂದಗನೂರ, ಶ್ರೀಶೈಲಗೌಡ, ಸಿದ್ದಲಿಂಗ ತಳ್ಳಳ್ಳಿ ಸೇರಿದಂತೆ ಸಮಾಜದ ಹಲವರು ಇದ್ದರು. ಚಂದ್ರಶೇಖರಯ್ಯಸ್ವಾಮಿ ನಿರೂಪಿಸಿದರು. ಭೀಮಣ್ಣ ತಿಂಥಣಿ ಸ್ವಾಗತಿಸಿದರು. ಕಾಶಿನಾಥ ನಾಯಕೋಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next