Advertisement

ಮತದಾನ ಪ್ರತಿಯೊಬ್ಬರ ಆತ್ಮಗೌರವದ ಸಂಕೇತ

05:11 PM Apr 14, 2019 | Team Udayavani |

ಕೆಂಭಾವಿ: ಮತದಾನ ಮಾಡುವುದು ಪ್ರತಿಯೊಬ್ಬರ ಆತ್ಮ ಗೌರವದ ಸಂಕೇತವಾಗಿದೆ. 18 ವರ್ಷ ಮೇಲ್ಪಟ್ಟ ಭಾರತದ ಪ್ರತಿಯೊಬ್ಬ ಪ್ರಜೆಯೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಮತ ಚಲಾಯಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಭು ದೊರಿ ಹೇಳಿದರು.

Advertisement

ಪಟ್ಟಣದ ಕೆಂಗೇರಿ ಬಡಾವಣೆಯಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಸ್ವೀಪ್‌ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಯಾರೊಬ್ಬರೂ ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಹಲವು ರೀತಿಯ ಜಾಗೃತಿ
ಮೂಡಿಸುತ್ತಿದೆ. ಮತದಾನ ಸಮಯದಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಎಲ್ಲರೂ ಮತದಾನ ಮಾಡಬೇಕು ಎಂದು ಕೋರಿದರು. ಮತದಾನ ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ
ಸಂಜೀವರಾವ ಕುಲಕರ್ಣಿ, ಜನಸಾಮಾನ್ಯರಲ್ಲಿ ಮತದಾನದ ಅರಿವು ಮೂಡಿಸಲು ಚುನಾವಣಾ ಆಯೋಗ ಮಹತ್ತರ ಕಾರ್ಯ ಮಾಡುತ್ತಿದೆ. ಮತದಾನದ ಕುರಿತು ಜನರಲ್ಲಿ ಮತ್ತಷ್ಟು ಜಾಗೃತಿ
ತರಲು ರಾಜ್ಯಮಟ್ಟದಲ್ಲಿ ಪತ್ರಕರ್ತರ ಸಂಘದಿಂದ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಉಪ ತಹಶೀಲ್ದಾರ ರಾಜೇಸಾಬ್‌ ಕಂದಗಲ್‌ ಮತಯಂತ್ರದ ಬಳಕೆ ಮತ್ತು ದೂರದ ಮತದಾನ ಕೇಂದ್ರಕ್ಕೆ ಜನರು ತೆರಳಲು ವಾಹನಗಳ ವ್ಯವಸ್ಥೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಾಚಾರ್ಯ ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪವನ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರ್‌ ಅಧಿಕಾರಿಗಳಾದ ಎಸ್‌. ವೈ. ಭಜಂತ್ರಿ,
ರಾಜು ಪತಂಗೆ, ಗ್ರಾಮ ಲೇಖಪಾಲಕ ಕಲ್ಲಪ್ಪ, ಅಂಗನವಾಡಿ ಮೇಲ್ವಿಚಾರಕಿ ಸುನೀತಾ ಪಾಟೀಲ, ನಾಗರಾಜ ವಿಭೂತಿ, ಪತ್ರಕರ್ತರಾದ ಹಳ್ಳೇರಾವ ಕುಲಕರ್ಣಿ, ವೀರಣ್ಣ ಕಲಕೇರಿ, ರೇವಣಸಿದಯ್ಯ ಮಠ, ದುರ್ಗಾಪ್ರಸಾದ, ಇಲಿಯಾಸ್‌ ಪಟೇಲ್‌
ಸೇರಿದಂತೆ ವಲಯದ ಎಲ್ಲ ಬಿಇಒ, ಪಿಡಿಒ ಮತ್ತು ಚುನಾವಣಾ ಸಿಬ್ಬಂದಿ ಇದ್ದರು. ಗುರುರಾಜ ಕುಲಕರ್ಣಿ ಸ್ವಾಗತಿಸಿದರು. ರವಿರಾಜ
ನಿರೂಪಿಸಿದರು. ವೀರಣ್ಣ ಕಲಕೇರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next