Advertisement

‘ಕೇಮ್‌ ಚೋ ಟ್ರಂಪ್‌’ಅಲ್ಲ; ‘ನಮಸ್ತೆ, ಪ್ರಸಿಡೆಂಟ್‌ ಟ್ರಂಪ್‌’

09:45 AM Feb 17, 2020 | Hari Prasad |

ಗಾಂಧಿನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಫೆ.24-25ರ ಭಾರತ ಪ್ರವಾಸಕ್ಕೆ ಅಹಮದಾಬಾದ್‌ನಲ್ಲಿ ಸಿದ್ಧತೆಗಳು ಜೋರಾಗಿವೆ. ಹೌಡಿ ಮೋದಿ ಕಾರ್ಯಕ್ರಮಕ್ಕೆ ಸರಿಸಮನಾಗಿ ಆಯೋಜಿಸಲಿರುವ ‘ಕೇಮ್‌ ಚೋ ಟ್ರಂಪ್‌’ (ಟ್ರಂಪ್‌ ಹೇಗಿದ್ದೀರಿ?) ಸ್ಥಾನದಲ್ಲಿ “ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರಿಗೆ ನಮಸ್ತೆ’ (ನಮಸ್ತೆ, ಪ್ರಸಿಡೆಂಟ್‌ ಟ್ರಂಪ್‌) ಎಂದು ಬಳಕೆ ಮಾಡಲು ನಿರ್ಧರಿಸಲಾಗಿದೆ.

Advertisement

ನಮಸ್ತೆ ಎನ್ನುವುದು ದೇಶದ ಉದ್ದಗಲಕ್ಕೂ ಭೇಟಿಯ ಸಂದರ್ಭದಲ್ಲಿ ವ್ಯಕ್ತಪಡಿಸುವ ಗೌರವ ಸೂಚಕ ಪದ. ಅದುವೇ ಜಗತ್ತಿನಲ್ಲಿ ಖ್ಯಾತಿ ಪಡೆದಿದೆ. ಹೀಗಾಗಿ ಅದನ್ನೇ ಅನುಸರಿಸಿ, ಕಾರ್ಯ ರೂಪಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಗುಜರಾತ್‌ ಮುಖ್ಯ ಕಾರ್ಯದರ್ಶಿ ಅನಿಲ್‌ ಮುಕಿಮ್‌ ಹೇಳಿದ್ದಾರೆ.

‘ಕೇಮ್‌ ಚೋ ಟ್ರಂಪ್‌’ ಪ್ರಾದೇಶಿಕತೆಯನ್ನು ಸೂಚಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next