Advertisement
ಕೇಜ್ರಿವಾಲ್ ಬಿಡುಗಡೆ ಆದಾಗಿನಿಂದ ಬಿಜೆಪಿ ಚಿಂತೆಗೀಡಾಗಿದೆ. ಸ್ವಾತಿ ಅವರನ್ನು ದಾಳವಾಗಿಸಿ, ಕೇಜ್ರಿವಾಲ್ ವಿರುದ್ಧ ಬಿಜೆಪಿ ಪಿತೂರಿ ನಡೆಸಿದೆ. ಬಿಜೆಪಿಯವರೇ ಸ್ವಾತಿಯನ್ನು ಮೇ 13ರಂದು ಸಿಎಂ ಮನೆಗೆ ಕಳಿಸಿದ್ದರು. ಈಗ ವೈರಲ್ ಆದ ವೀಡಿಯೋದಲ್ಲಿ ಬಿಭವ್ ಸ್ವಾತಿ ಅವರ ಮೇಲೆ ಹಲ್ಲೆ ನಡೆಸಿದ ದೃಶ್ಯಗಳಿಲ್ಲ ಎಂದು ಸಚಿವೆ ಆತಿಷಿ ಹೇಳಿದ್ದಾರೆ.
ಸಿಎಂ ನಿವಾಸದಲ್ಲಿ ನಡೆದ ಘಟನೆಯ ದೃಶ್ಯಾವಳಿ ಎನ್ನಲಾದ ವೀಡಿಯೋವೊಂದು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಸ್ವಾತಿ ಅವರು ಕೇಜ್ರಿ ವಾಲ್ ಭೇಟಿಗೆ ಕಾಯುತ್ತಿದ್ದಾಗ, ಭದ್ರತಾ ಸಿಬಂದಿ ಅವರನ್ನು ಅಲ್ಲಿಂದ ನಿರ್ಗಮಿಸು ವಂತೆ ಕೇಳುತ್ತಾರೆ. ಆದರೆ ತಾವು ಹೋಗಲ್ಲ ಎಂದು ಸ್ವಾತಿ ಪಟ್ಟುಹಿಡಿದಾಗ, ಮಾತಿನ ಚಕಮಕಿ ನಡೆಯುತ್ತದೆ. ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾತಿ, “ತಮ್ಮನ್ನು ಉಳಿಸಿಕೊಳ್ಳಲು ಪೊಲಿಟಿಕಲ್ ಹಿಟ್‌ಮ್ಯಾನ್ ಯತ್ನಿಸುತ್ತಿದ್ದಾರೆ’ ಎಂದು ಕೇಜ್ರಿವಾಲ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಅವರೇ ತಮ್ಮ ಜನರಿಂದ ಈ ವೀಡಿಯೋ ಬಿಡುಗಡೆಗೊಳಿಸಿದ್ದಾರೆ. ಇದು ಪೂರ್ಣ ವೀಡಿಯೋವಲ್ಲ.ದೌರ್ಜ ನ್ಯವೆಸಗುವಾಗ ಯಾರು ವೀಡಿಯೋ ಮಾಡುತ್ತಾರೆ. ಮನೆಯ ಹಾಗೂ ರೂಮ್‌ನ ಸಿಸಿಟಿವಿ ದೃಶ್ಯಗಳಿಂದ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ.
Related Articles
ಸ್ವಾತಿ ಅವರ ಮೇಲೆ ಹಲ್ಲೆಯಾದ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆದಿದ್ದು, ಅವರ ಮುಖ ಹಾಗೂ ಖಾಸಗಿ ಭಾಗದಲ್ಲಿ ಗಾಯಗೊಂಡಿರುವುದು ದೃಢಪಟ್ಟಿದೆ. ಶುಕ್ರ ವಾರ ದಿಲ್ಲಿ ಪೊಲೀಸರು ಘಟನೆಯ ಪುರಾವೆಗಾಗಿ ಕೇಜ್ರಿವಾಲ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನೂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
Advertisement