Advertisement

AAP ರಾಷ್ಟ್ರೀಯ ಖಜಾಂಚಿ ‘ಗೊಂದಲಗೊಂಡಿದ್ದಾರೆ’ ಎಂದ ಕೇಜ್ರಿವಾಲ್: ಇಡಿ

07:26 PM Apr 01, 2024 | Team Udayavani |

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಹೇಳಿಕೆಯನ್ನು ಎದುರಿಸಿದಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ಖಜಾಂಚಿ “ಗೊಂದಲಗೊಂಡಿದ್ದಾರೆ” ಎಂದು ಹೇಳಿರುವುದಾಗಿ ಜಾರಿ ನಿರ್ದೇಶನಾಲಯ ಸೋಮವಾರ ನ್ಯಾಯಾಲಯದ ಮುಂದೆ ಹೇಳಿದೆ.

Advertisement

ವಿಚಾರಣೆಯ ಸಮಯದಲ್ಲಿ ಕೇಜ್ರಿವಾಲ್ ಅವರು ಆಪ್ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರು “ನನಗೆ ವರದಿ ಮಾಡಿಲ್ಲ” ಆದರೆ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರಿಗೆ ವರದಿ ಮಾಡಿದ್ದಾರೆ. ನನ್ನೊಂದಿಗೆ ಅವರ ಸಂವಹನವು ಸೀಮಿತವಾಗಿತ್ತು ಎಂದು ಹೇಳಿರುವುದಾಗಿ ಇಡಿ ತಿಳಿಸಿದೆ.

ಮದ್ಯ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ರೋಸ್ ಅವೆನ್ಯೂ ಕೋರ್ಟ್ ಮತ್ತೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಏಪ್ರಿಲ್ 15 ರವರೆಗೆ ತಿಹಾರ್ ಜೈಲಿನಲ್ಲಿರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next