Advertisement

ಮಹಾರಾಷ್ಟ್ರ ಚುನಾವಣೆ ಗಮನದಲ್ಲಿಟ್ಟುಕೊಂಡು ಡಿಸಿಎಂ ಹುದ್ದೆ: ಲಕ್ಷ್ಮಣ್ ಸವದಿ

09:52 AM Sep 09, 2019 | keerthan |

ಮೈಸೂರು: ಮಹಾರಾಷ್ಟ್ರ ಚುನಾವಣೆ ಗಮನದಲ್ಲಿಟ್ಟುಕೊಂಡು ತನಗೆ ಸಚಿವ ಸ್ಥಾನ ಮತ್ತು ಡಿಸಿಎಂ ಹುದ್ದೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ನನಗೆ ಮಹಾರಾಷ್ಟ್ರ ‌ಚುನಾವಣೆ ಜವಾಬ್ದಾರಿ ವಹಿಸಿದ್ದಾರೆ. ಪೂರ್ವ ಮಹಾರಾಷ್ಟ್ರದ ಜವಾಬ್ದಾರಿ ನೀಡಿದ್ದಾರೆ. ಈಗಾಗಲೇ ಆ ಕೆಲಸಗಳನ್ನು ಮಾಡುತ್ತಿದ್ದೇನೆ. ಪೂರ್ವ ಮಹಾರಾಷ್ಟ್ರದ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಿದೆ. ಪಕ್ಷ ವಹಿಸಿದ‌ ಕೆಲಸ ಮಾಡುತ್ತೇನೆ ಎಂದರು.

ನನಗೆ ಯಾವ ಕಾರಣಕ್ಕಾಗಿ ಅಧಿಕಾರ ನೀಡಲಾಗಿದೆ ಎಂಬುದು ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರ. ನನಗೆ ಅಧಿಕಾರ ನೀಡಿದ ಕಾರಣಕ್ಕಾಗಿ ಯಾರಿಗೂ ಅಸಮಾಧಾನ ಆಗಿಲ್ಲ. ನಾವೆಲ್ಲರೂ ಒಟ್ಟಾಗಿ ಇದ್ದೇವೆ‌ ಎಂದರು.

ರಾಜ್ಯಕ್ಕೆ ಬರಲಿವೆ ಬ್ಯಾಟರಿ ಚಾಲಿತ ಬಸ್
ಸಾರಿಗೆ ಇಲಾಖೆಗೆ ಹೊಸ ರೂಪ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ರಾಜ್ಯದಲ್ಲಿ ಬ್ಯಾಟರಿ ಚಾಲಿತ ಬಸ್ ಬಳಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಶೀರ್ಘದಲ್ಲೇ ಅಸ್ಸಾಂ ರಾಜ್ಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಮೈಸೂರಿನಲ್ಲಿ ಸಾರಿಗೆ ಸಚಿವ ಲಕ್ಷಣ ಸವದಿ ಹೇಳಿಕೆ ನೀಡಿದ್ದಾರೆ.

ವಿದೇಶಿ ಮಾದರಿಯಲ್ಲಿ ಬ್ಯಾಟರಿ ಚಾಲಿತ ಸಾರಿಗೆ ಬಸ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ.. ಈ ಸಂಬಂಧ ಬಸ್‌ಗಳನ್ನು ಸರಬರಾಜು ಮಾಡುಲು ವಿದೇಶಿ ಕಂಪನಿಗಳು ಮುಂದೆ ಬಂದಿವೆ.. ಅಸ್ಸಾಂ ರಾಜ್ಯದಲ್ಲಿ ಬ್ಯಾಟರಿ ಚಾಲಿತ ಬಸ್ ಗಳು ಸಂಚಾರ ಆರಂಭಿಸಿವೆ. ಅವುಗಳನ್ನು ರಾಜ್ಯಕ್ಕೂ ತರಿಸಿಕೊಳ್ಳುವ ಸಂಬಂಧ ಸಿಎಂ ಜೊತೆ ಚರ್ಚೆ ಮಾಡಿದ್ದೆನೆ. ಹೊಸ ಬಸ್ ಗಳು,ಅದರ ಚಾರ್ಜಿಂಗ್, ಅದರ ನಿರ್ವಹಣೆ, ಎಲ್ಲವನ್ನೂ ಆ ಕಂಪನಿಗಳೇ ಮಾಡಿಕೊಳ್ಳಲಿವೆ. ಸಾರಿಗೆ ಇಲಾಖೆಯಲ್ಲಿ ಇರುವ ಚಾಲಕರು ನಿರ್ವಹಕರಿಗೆ ತರಬೇತಿ ನೀಡಿ ಅವರನ್ನೆ ಬಳಸಿಕೊಳ್ಳುವುದು. ಶೇ. 40-60ರ ಲಾಭಾಂಶದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಲಕ್ಷಣ ಸವದಿ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next