Advertisement
ತಾಲೂಕು ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದ ವೇಳೆ ಅವರು ಮಾತನಾಡಿದರು. ಸೇವಾ ಸಿಂಧು ನೋಂದಣಿ ಪ್ರಕಾರ ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವವರು, ಕ್ವಾರಂಟೈನ್ ಅವಧಿ ಮುಗಿಸಿದವರು, ಗೃಹ ಕ್ವಾರಂಟೈನ್ ಆದವರ ನಿಖರ ಮಾಹಿತಿಯನ್ನು ಪ್ರತಿ ತಹಶೀಲ್ದಾರರು ಹೊಂದಬೇಕು. ಯಾವುದೇ ಕಾರಣಕ್ಕೂ ಹೊರ ರಾಜ್ಯದಿಂದ ಬಂದವರು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್‌ನಿಂದ ಹೊರಗುಳಿಯಬಾರದು. ಆರೋಗ್ಯ ಇಲಾಖೆಯ ಎಸ್‌ಓಪಿ ಪ್ರಕಾರ ಕ್ರಮವಹಿಸಬೇಕು ಹಾಗೂ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಿಂದ ಬರುವವರ ಮೇಲೂ ನಿಗಾವಹಿಸಬೇಕು. ಅಗತ್ಯ ಬಿದ್ದರೆ ತಪಾಸಣೆಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವವರಿಗೆ ಉತ್ತಮ ಊಟ, ಉಪಹಾರ ನೀಡಬೇಕು. ಯಾವುದೇ ಕೊರತೆಯಾಗಬಾರದು. ಸ್ವತ್ಛತೆಗೆ ಆದ್ಯತೆ ನೀಡಬೇಕು. ಅಗತ್ಯವಿದ್ದರೆ ಕ್ವಾರಂಐನ್ ಕೇಂದ್ರಗಳಿಗೆ ಪ್ರತ್ಯೇಕ ಸ್ವಚ್ಛತಾ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿ ಕ್ವಾರಂಟೈನ್ ಸೆಂಟರ್‌ನಿಂದ ಸೋಂಕು ಹರಡಬಾರದು. ಈ ಕುರಿತಂತೆ ನಿರಂತರ ತಪಾಸಣೆ ನಡೆಸಿ ಒಂದೊಮ್ಮೆ ಈ ಕೇಂದ್ರಗಳಿಂದ ಸೋಂಕು ಹರಡಿದರೆ ತಾಲೂಕು ವೈದ್ಯಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
Related Articles
Advertisement
ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ| ದಿಲೀಷ್ ಶಶಿ, ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ವಿನೋದಕುಮಾರ ಹೆಗ್ಗಳಗಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಆರ್‌ಸಿಎಚ್ ಅಧಿಕಾರಿ ಡಾ| ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಕೆ. ಹಾವನೂರ, ತಹಶೀಲ್ದಾರ್‌ಗಳಾದ ಶಂಕರ್, ಬಸವನಗೌಡ ಕೊಟೂರ ಹಾಗೂ ಡಾ| ಪ್ರಭಾಕರ ಕುಂದೂರ ಇತರರು ಇದ್ದರು.