Advertisement

ಸಂಚಾರ ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳಿ

06:08 PM Dec 18, 2021 | Shwetha M |

ತಾಳಿಕೋಟೆ: ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಪಟ್ಟಣದ ಪೊಲೀಸ್‌ ಠಾಣೆ ಪಿಎಸೈ ವಿನೋದ ದೊಡಮನಿ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ವಾಹನ ಸವಾರರಿಗೆ ಹೆಲ್ಮೆಟ್‌ ಧರಿಸುವುದು ಒಳಗೊಂಡಂತೆ ಅಪಘಾತ ಸಮಯದಲ್ಲಿ ಪ್ರಾಣ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

Advertisement

ಪಟ್ಟಣದ ವಿಜಯಪುರ ವೃತ್ತದಲ್ಲಿ ಹೆಲ್ಮೆಟ್‌ ಇಲ್ಲದೇ ಸಂಚರಿಸುತ್ತಿದ್ದ ಬೈಕ್‌ ಸವಾರರನ್ನು ತಡೆದ ಪೊಲೀಸರು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಅಪಘಾತ ಸಂದರ್ಭದಲ್ಲಿ ನಿಮ್ಮ ಜೀವವನ್ನು ರಕ್ಷಿಸುವಂತಹ ಕವಚವಾಗಿದೆ. ನಾಲ್ಕು ಚಕ್ರದ ವಾಹನಗಳನ್ನು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್‌ ಬೆಲ್ಟ್ ಹಾಕಿಕೊಳ್ಳಬೇಕು. ಯಾವುದೇ ವಾಹನ ಚಲಾಯಿಸುತ್ತಿರಲಿ ಆ ಸಮಯದಲ್ಲಿ ಮದ್ಯಸೇವನೆ ಮಾಡಿರಬಾರದು. ಮದ್ಯಸೇವನೆಯಿಂದ ಅನೇಕ ಅಪಘಾತಗಳು ನಡೆದು ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ರೀತಿ ಸಂಚಾರ ಅಪರಾಧವಾಗಿದ್ದು ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ಕೂಡಾ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೇ ರಸ್ತೆ ನಿಯಮ ಪಾಲನೆ ಕುರಿತು ಮತ್ತು ಉಲ್ಲಂಘನೆಯಾದಲ್ಲಿ ಪೊಲೀಸ್‌ ಇಲಾಖೆಯಿಂದ ದಂಡ ವಿ ಧಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ಸಿಬ್ಬಂದಿಗಳೆಲ್ಲರೂ ಹೆಲ್ಮೆಟ್‌ ಧರಿಸಿ ಜೀವ ರಕ್ಷಿಸಿಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಭಿತ್ತಿ ಚಿತ್ರಗಳ ಮೂಲಕ ಸಂಚರಿಸಿದರು. ಜಾಗೃತಿ ಕಾರ್ಯಕ್ರಮದಲ್ಲಿ ಎಎಸೈ ಅಶೋಕ ನಾಯ್ಕೊಡಿ, ಎಸ್‌.ಎಂ. ಪಡಶೆಟ್ಟಿ, ಗಿರೀಶ ಚಲವಾದಿ, ಯಲ್ಲಪ್ಪ ಹದಗಲ್ಲ, ಸಂಜೀವ ದೊಡಮನಿ, ವೀರಣ್ಣ ಅಜ್ಜನವರ, ಹುಸೇನ್‌ ಕುಂಟೋಜಿ, ರಮೇಶ ರೇವೂರ, ಎಂ.ಕೆ. ಡೋಣೂರ ಸೇರಿದಂತೆ ಇತರರು ಭಾಗವಹಿಸಿದ್ದರು.

ಹೆಲ್ಮೆಟ್‌ ಧರಿಸದೇ, ಲೈಸನ್ಸ್‌ ಇಲ್ಲದೆ ಅಥವಾ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವುದು ಅಪರಾಧ. ಹೆಲ್ಮೆಟ್‌ ಧರಿಸುವುದರಿಂದ, ದೊಡ್ಡ ವಾಹನಗಳಲ್ಲಿ ಬೆಲ್ಟ್ ಧರಿಸದೇ ಸಂಚರಿಸುವುದರಿಂದ ಜೀವಕ್ಕೆ ಕುತ್ತು ಬರುವದು ಖಚಿತ. ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ರಸ್ತೆ ನಿಯಮ ಪಾಲಿಸಿಕೊಂಡು ಸಂಚರಿಸಬೇಕು. -ವಿನೋದ ದೊಡಮನಿ ಪಿಎಸೈ, ತಾಳಿಕೋಟೆ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next