Advertisement

ಆಧ್ಯಾತ್ಮಿಕತೆಯೊಂದಿಗೆ ಜೀವನ ರೂಢಿಸಿಕೊಳ್ಳಿ: ಸುತ್ತೂರು ಶ್ರೀ

02:49 PM Jun 11, 2018 | Team Udayavani |

ಕಡೂರು: ಜೀವನದಲ್ಲಿ ರಾಗ ದ್ವೇಷಗಳನ್ನು ದೂರ ಮಾಡಿ ಪ್ರೀತಿ ಪ್ರೇಮದಿಂದ ಆಧ್ಯಾತ್ಮಿಕತೆಯೊಂದಿಗೆ ಜೀವನ ರೂಢಿಸಿಕೊಳ್ಳಿ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Advertisement

ಚಿಕ್ಕಮಗಳೂರಿನಲ್ಲಿ ನಡೆಯುವ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಆಯೋಜಿಸಿರುವ ಕಾರ್ಯಕ್ರಮಕ್ಕೆ ಆಗಮಿಸುವ ಮಾರ್ಗದಲ್ಲಿ ಸಖರಾಯಪಟ್ಟಣದ ಜಿ.ಪಂ. ಸದಸ್ಯೆ ಶಕುಂತಲಾ ಮಲ್ಲಪ್ಪನವರ ಮನೆಯಲ್ಲಿ ಏರ್ಪಡಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಒಳಗೊಂಡು ಬರಿ ರಾಗ ದ್ವೇಷಗಳು ಹೆಚ್ಚಾಗಿದ್ದು ಅವುಗಳ ನಿಯಂತ್ರಣವನ್ನು ಆಧ್ಯಾತ್ಮಿಕತೆಯಲ್ಲಿ ಮಾತ್ರ ಸಾಧಿಸಬಹುದು. ಹಾಗಾಗಿ ಜೀವನದಲ್ಲಿ ಆಧ್ಯಾತ್ಮಿಕತೆ ರೂಢಿಸಿಕೊಂಡು ಉತ್ತಮ ಜೀವನ
ನಡೆಸುವುದರೊಂದಿಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದರು.

ಇಂದಿನ ರಾಜಕಾರಣವೂ ರಾಗ ದ್ವೇಷದಿಂದ ಕಲುಷಿತಗೊಂಡಿದ್ದು, ನಾನು ನಾನು ಎಂದು ಸಾಧಿ ಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಇವೆಲ್ಲವನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದರು.

ಸಖರಾಯಪಟ್ಟಣವು ಅರೆಮಲೆನಾಡಾಗಿದ್ದು ಕೃಷಿಯನ್ನು ಅವಲಂಬಿಸಿ ಅನೇಕ ಕುಟುಂಬಗಳು ಜೀವನ ನಡೆಸುತ್ತಿವೆ. ಸಕಲ ಜೀವ ರಾಶಿಗಳು ಪ್ರಕೃತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಜೀವನ ಸಾಗಿಸುತ್ತವೆ. ಆದರೆ
ಮನುಷ್ಯ ಮಾತ್ರ ಪ್ರಕೃತಿಯನ್ನು ತನ್ನ ಸ್ವಾರ್ಥಕ್ಕೆ ನಾಶ ಮಾಡುತ್ತಿದ್ದು ಇದರಿಂದ ಸತತ ಮೂರು ವರ್ಷಗಳ ಕಾಲ ಬರಗಾಲವನ್ನು ಅನುಭವಿಸಿ ಕಂಗಾಲಾಗಿದ್ದೇವೆ. ಆದರೆ ಈ ವರ್ಷ ಪ್ರಥಮದಲ್ಲಿಯೇ ಉತ್ತಮ ಮಳೆಯಾಗಿದ್ದು ರೈತರಲ್ಲಿ ಹರ್ಷ ಮೂಡಿಸಿದೆ. ಇಲ್ಲಿನ ಜೀವನಾಡಿಯಾದ ಅಯ್ಯನಕೆರೆಯು ಈ ವರ್ಷ ತುಂಬಿ ಬರಗಾಲ ಹರಿಯುವುದೆಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಸುತ್ತೂರು ಮಠವು ರಾಜ್ಯದಲ್ಲಿಯೇ ಅಲ್ಲದೆ ಹೊರದೇಶಗಳಲ್ಲಿಯೂ ಶಿಕ್ಷಣ ನೀಡುವಲ್ಲಿ ಮನೆಮಾತಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿರುವ ಈ ಮಠವು ಅನ್ನದಾಸೋಹದಲ್ಲಿಯೂ ಹಿಂದೆ ಬಿದ್ದಿಲ್ಲ. ಸ್ವಾಮೀಜಿ ಇವೆಲ್ಲವಕ್ಕೂ ಕಾರಣರಾಗಿ ಎಲ್ಲರನ್ನು ಒಳ್ಳೆಯ ದಾರಿಗೆ ತರುವತ್ತ ದಾಪುಗಾಲಿಡುತ್ತಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷ ಮಹಡಿಮನೆ ಸತೀಶ್‌ ಮಾತನಾಡಿ, ಸ್ವಾಮೀಜಿಗಳು ಸಖರಾಯಪಟ್ಟನಕ್ಕೆ ಆಗಮಿಸಿರುವುದು ನಮ್ಮ ಸೌಭಾಗ್ಯ. ಉತ್ತಮ ಮಳೆಯಾಗುತ್ತಿರುವ ಈ ಸಂದರ್ಭದಲ್ಲಿ ಸ್ವಾಮೀಜಿಗಳ ಆಗಮನ ಮತ್ತಷ್ಟು ಸಂತಸ ತಂದಿದೆ ಎಂದರು.
 
ಜಿ.ಪಂ.ಸದಸ್ಯ ಶಕುಂತಲಾ ಮಲ್ಲಪ್ಪ, ಎಪಿಎಂಸಿ ಸದಸ್ಯ ಲೋಕೇಶ್‌, ಗ್ರಾ.ಪಂ.ಅಧ್ಯಕ್ಷ ಯೋಗೀಂದ್ರ, ತಾ.ಪಂ.ಸದಸ್ಯ
ರುದ್ರಮೂರ್ತಿ, ಮುಖಂಡರಾದ ಕಲ್ಮರುಡಪ್ಪ, ಮಲ್ಲಪ್ಪ, ರತ್ನಾಕರ್‌, ಅಜ್ಜಯ್ಯ, ಮಹಡಿಮನೆ ಪ್ರಸನ್ನ ಮತ್ತು
ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next