Advertisement

ಶಾಸಕರನ್ನೆಲ್ಲಾ ವಿಶ್ವಾಸದಲ್ಲಿಟ್ಟುಕೊಳ್ಳಿ

10:57 PM Dec 18, 2019 | Lakshmi GovindaRaj |

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಅಗತ್ಯವಾದಷ್ಟು ಸ್ಥಾನ ಸಿಗದಿದ್ದರೆ ಜೆಡಿಎಸ್‌ ಇಬ್ಭಾಗವಾಗು ತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ ಎಂದು ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ಬಂದಿರುವುದರಿಂದ ಜೆಡಿಎಸ್‌ ಇಬ್ಭಾಗವಾಗುವ ತೀವ್ರತೆ ಕಡಿಮೆ ಯಾಗಿದೆ.

Advertisement

ಹಾಗೆಂದು ಅಸಮಾ ಧಾನ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದರ್ಥವಲ್ಲ, ಅಸಮಾಧಾನ, ಬೇಸರ ಹಾಗೆಯೇ ಇದೆ ಎಂದರು. ಈಗಲೂ ಕಾಲ ಮಿಂಚಿಲ್ಲ. ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡರು, ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಅವರು ಎಲ್ಲರನ್ನು ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜತೆಗೆ ಅವರ ಸಮಸ್ಯೆ ಅರಿಯಬೇಕು. ಮತ್ತೆ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಕೆಲವರು ತನ್ನ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಇಲ್ಲಸಲ್ಲದ್ದನ್ನೆಲ್ಲಾ ಹೇಳಿದ್ದಾರೆ.

ಹೀಗಾಗಿ ಮುಜುಗರವಾಗು ವುದು ಬೇಡ ಎಂದು ತಾನು ದೇವೇಗೌಡರ ನಿವಾಸಕ್ಕೆ ಹೆಚ್ಚಾಗಿ ಹೋಗುವುದಿಲ್ಲ. ತಾನು ಎಲ್ಲ ಪಕ್ಷಗಳ ಪ್ರಮುಖರೊಂದಿಗೂ ವಿಶ್ವಾಸದೊಂದಿಗಿದ್ದೇನೆ. ಕ್ಷೇತ್ರದ ಜನರ ಕೆಲಸ ಕಾರ್ಯಗಳಿ ಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಬಳಿಗೆ ಹೋಗುತ್ತೇನೆ. ಅದರಲ್ಲಿ ತಪ್ಪೇನು. ಹಾಗೆಂದು ತಾನು ಪಕ್ಷ ಬಿಡುವ ತೀರ್ಮಾನವನ್ನೇನೂ ಮಾಡಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next