ನವದೆಹಲಿ: ಚಳಿಗಾಲದ ಅವಧಿಯಲ್ಲಿಮುಚ್ಚಿದ ಸುಮಾರು ಆರು ತಿಂಗಳ ನಂತರ ಏಪ್ರಿಲ್ 25 ರಂದು ಹಿಮಾಲಯದ ಮೇಲ್ಭಾಗದಲ್ಲಿರುವ ಕೇದಾರನಾಥ ದೇಗುಲದ ಬಾಗಿಲು ತೆರೆಯಲಾಗುತ್ತದೆ.
ಏಪ್ರಿಲ್ 25 ರಂದು ಬೆಳಗ್ಗೆ 6.20 ಕ್ಕೆ ಹಿಮಾಲಯ ದೇವಾಲಯದ ದ್ವಾರಗಳನ್ನು ಭಕ್ತರಿಗೆ ತೆರೆಯಲಾಗುವುದು ಎಂದು ಬದರಿನಾಥ್-ಕೇದಾರನಾಥ ಮಂದಿರ ಸಮಿತಿ ಮೂಲಗಳು ತಿಳಿಸಿವೆ.
ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಶನಿವಾರ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ದೇವಾಲಯದ ಬಾಗಿಲು ತೆರೆಯುವ ಸಮಯ ಮತ್ತು ದಿನಾಂಕವನ್ನು ಪ್ರಕಟಿಸಲಾಯಿತು. ಸಮಾರಂಭದಲ್ಲಿ ಬಿಕೆಟಿಸಿ ಅಧಿಕಾರಿಗಳು, ತೀರ್ಥಪುರೋಹಿತರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಚಳಿಗಾಲದಲ್ಲಿ ಪೂಜಿಸುವ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಕೇದಾರನಾಥವನ್ನು ಮುಚ್ಚಿದ ನಂತರ ಪ್ರತಿ ವರ್ಷ ಶಿವನ ವಿಗ್ರಹವನ್ನು ಕೆಳಗೆ ತರಲಾಗುತ್ತದೆ. ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಈಗಾಗಲೇ ಏಪ್ರಿಲ್ 27 ಮತ್ತು ಏಪ್ರಿಲ್ 22 ರಂದು ತೆರೆಯಲು ನಿರ್ಧರಿಸಲಾಗಿದೆ.
ಕೇದಾರನಾಥ ಸೇರಿದಂತೆ ಚಾರ್ ಧಾಮ್ ದೇವಾಲಯಗಳನ್ನು ಪ್ರತಿ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ವಿಪರೀತ ಚಳಿ ಮತ್ತು ಹಿಮಪಾತದ ಕಾರಣದಿಂದಾಗಿ ಮುಚ್ಚಲಾಗುತ್ತದೆ.