ಪುಣೆ: ಭಾರತೀಯ ಕ್ರಿಕೆಟಿಗ ಕೇದಾರ್ ಜಾಧವ್ ಅವರು ತಂದೆ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ. ಕೇದಾರ್ ತಂದೆ ಮಹದೇವ್ ಜಾಧವ್ ಅವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ 11.30ರ ಸುಮಾರಿನಿಂದ ಪುಣೆಯ ಕೊತ್ರೋಡ್ ನಿಂದ ಮಹದೇವ್ ಜಾಧವ್ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಗಂಟೆಗಳ ಕಾಲ ಹುಡುಕಾಟ ನಡೆಸಿದ ಕೊತ್ರೋಡ್ ಪೊಲೀಸರು ಮಹದೇವ್ ಅವರನ್ನು ಪತ್ತೆ ಮಾಡಿದ್ದರು.
ಇದನ್ನೂ ಓದಿ:“ಜೈ ಶ್ರೀರಾಮ್” ಹೇಳಲು ನಿರಾಕರಣೆ: ಇಮಾಮ್ ಗೆ ಹಲ್ಲೆಗೈದು ಗಡ್ಡ ಕತ್ತರಿಸಿದ ಅಪರಿಚಿತರು
ವರದಿಯ ಪ್ರಕಾರ ಬೆಳಗ್ಗೆ ಸೆಕ್ಯುರಿಟಿ ಗಾರ್ಡ್ ಗೆ ತಪ್ಪು ಮಾಹಿತಿ ನೀಡಿ ಮಹದೇವ್ ಅವರು ಹೊರಹೋಗಿದ್ದಾರೆ. ಅಲ್ಲದೆ ಅವರ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಮಾಡಲಾಗಿತ್ತು. ಅವರು ಕಾಣದಿರುವ ಕಾರಣ ಕೇದಾರ್ ಜಾಧವ್ ಕುಟುಂಭಿಕರು ಅಲಂಕಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ಫೋಟೇಜ್ ಗಳನ್ನು ಆಧರಿಸಿ ತನಿಖೆ ನಡೆಸಿದಾಗ ಮಹದೇವ್ ಅವರು ಕರ್ವೆ ನಗರ್ ನಲ್ಲಿ ಪತ್ತೆಯಾಗಿದ್ದಾರೆ. ಅಲ್ಲದೆ ಅವರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.