Advertisement
ವಿರಾಟ್ ಕೊಹ್ಲಿ ಹೇಳುತ್ತಾರೆ, “ಇಂಗ್ಲೆಂಡ್ ವಿರುದ್ಧದ ಪುಣೆ ಪಂದ್ಯದ ಬ್ಯಾಟಿಂಗ್ ವೇಳೆ ಯಾವುದೇ ಹಂತದಲ್ಲಿ ಜಾಧವ್ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಮುಖ್ಯವಾಗಿ, ಆತನಿಗೆ ಏನು ಮಾಡಬೇಕು ಎಂಬ ಅರಿವಿತ್ತು…. ಜಾಧವ್ 120 ರನ್‌ಗಳ ಗರಿಷ್ಠ ವೈಯಕ್ತಿಕ ಸಾಧನೆ ಮೂಲಕ ತಮ್ಮ ಏಕದಿನ ಜೀವನದ ಎರಡನೇ ಶತಕ ಬಾರಿಸಿದರು. ಅದರಲ್ಲೂ ಸಿಂಗಲ್ಸ್ ಹೊಡೆಯುತ್ತ ಕುಳಿತರೆ ಆಗದು ಎಂಬ ಸ್ಥಿತಿಯಲ್ಲಿ ಅವರು 76 ಚೆಂಡುಗಳಲ್ಲಿ 12 ಬೌಂಡರಿ, ನಾಲ್ಕು ಸಿಕ್ಸರ್ ಸಮೇತ ರನ್ ಜೋಡಿಸಿದರು. ಕೊಹ್ಲಿ ಔಟಾದಾಗ 14 ಓವರ್‌ನಲ್ಲಿ 88 ರನ್ ಬೇಕು ಎಂಬ ಸ್ಥಿತಿಯಲ್ಲೂ ಹತಾಶರಾಗಲಿಲ್ಲ. ಇದರ ಜೊತೆಗೆ ಬ್ಯಾಟ್ಸ್‌ಮನ್‌ಗಳ ಸ್ವರ್ಗದ ಪಿಚ್‌ನಲ್ಲಿ ತಮ್ಮ ಆಫ್ಸ್ಪಿನ್ನರ್‌ಗಳ 4 ಓವರ್‌ಗಳಲ್ಲಿ ಬರೀ 23 ರನ್ ಬಿಟ್ಟುಕೊಟ್ಟಿದ್ದು ಕೂಡ ಗಮನಾರ್ಹವೇ. ಅತ್ತ ಟಾಪ್ ಒನ್ ಬೌಲರ್ ಅಶ್ವಿನ್ ತಮ್ಮ 8 ಓವರ್‌ಗಳಲ್ಲಿ 63 ರನ್ ಹೊಡೆಸಿಕೊಂಡಿದ್ದರು! ಜಾಧವ್ 1985 ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದವರು. ಅವರನ್ನು ನೈಸರ್ಗಿಕ ಟಿ20 ಆಟಗಾರ ಎಂದೇ ಬಣ್ಣಿಸಲಾಗುತ್ತದೆ. ಪಾಕೆಟ್ ಸೈಜ್ ಡೈನಮೇಟ್ ಎಂಬ ವಿಶೇಷಣ ಅವರ ದೇಹ ರಚನೆಯನ್ನು ಸಮರ್ಥವಾಗಿ ವಿವರಿಸುತ್ತದೆ! ಕೇದಾರ್ 2012ರ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ವಿರುದ್ಧ 327 ರನ್ ಹೊಡೆದಿದ್ದಾರೆ. ಟಿ20 ಸ್ಪೆಶಲಿಸ್ಟ್ ಐಪಿಎಲ್‌ನ ಮೊದಲ ಋತುವಿನಲ್ಲಿಯೇ ಬೆಂಗಳೂರಿನ ರಾಯಲ್ ಚಾಲೆಂಜರ್ ಎದುರು 29 ಎಸೆತಗಳಲ್ಲಿ 50 ರನ್ ಚಚ್ಚಿ ಗಮನ ಸೆಳೆದಿದ್ದರು. 2013-14ನೇ ರಣಜಿ ವರ್ಷದಲ್ಲಿ ಆರು ಶತಕ ಸಹಿತ 1223 ರನ್ ಕೂಡಿಹಾಕಿದ್ದು ಅವರ ರಾಷ್ಟ್ರೀಯ ಆಟಗಾರರು ಪರಿಗಣಿಸುವಂತಾಯಿತು.
Related Articles
Advertisement
ಬ್ಯಾಟಿಂಗ್‌ನಲ್ಲಿ ತಮ್ಮ ಛಾಪನ್ನು ಮೂಡಿಸು ತ್ತಿರುವುದಂತೂ ಸತ್ಯ. ಈಗಾಗಲೇ ಎರಡು ಶತಕ ಬಾರಿಸಿರುವುದು ಅವರನ್ನು ಆಸಕ್ತಿಯಿಂದ ಗಮನಿಸುವಂತೆ ಮಾಡಿದೆ. ಅವರ ಕೈಯಲ್ಲಿ ಹೆಚ್ಚು ವರ್ಷಗಳಿಲ್ಲ. ಆದರೆ ವರ್ಷವೊಂದಕ್ಕೆ ನಡೆಯುವ ಏಕದಿನ, ಟಿ20 ಪಂದ್ಯಗಳ ಸಂಖ್ಯೆ ಗಮನಿಸಿದರೆ ಅವರು ಕೂಡ ಸಾಕಷ್ಟು ಪಂದ್ಯ ಆಡಬಲ್ಲರು. ತಂಡದ ವಿಜಯಗಳಲ್ಲಿ ಅವರ ಕೊಡುಗೆ ನಿರಂತರವಾಗಲಿ.
ಕೊನೆಮಾತುಕೇದಾರ್ ಜಾಧವ್‌ರಲ್ಲಿ ವಿರಾಟ್ ಕೊಹ್ಲಿಯವರ ಪ್ರತಿಫಲನವನ್ನು ಕಾಣಬಹುದು ಎಂಬ ವ್ಯಾಖ್ಯೆಗೆ ಗಹನವಾದ ದಾಖಲೆಯೇ ಸಿಕ್ಕಿದೆ. ವಿರಾಟ್‌ರ ಜರ್ಸಿ ನಂಬರ್ 18. ಅದನ್ನು ಕನ್ನಡಿಯಲ್ಲೋ, ತಿಳಿನೀರಿನ ಪ್ರತಿಬಿಂಬದಲ್ಲೋ ನೋಡಿದರೆ 81ರಂತೆ ಕಾಣುತ್ತದೆ. ನಿಜ, ಕೇದಾರ್ ಜಾಧವ್ ಧರಿಸುವ ಜರ್ಸಿಯ ಸಂಖ್ಯೆ 81!! ಆಟಗಾರರ ಟೀಕೆ ಮಾಡುವ ಮುನ್ನ….
ನಮಗೆ ಕ್ರಿಕೆಟ್ ಎಂದರೆ ಧಾರಾವಾಹಿ, ಸಿನೆಮಾ ತರಹದ ಮನರಂಜನೆಯೇ. ಅಲ್ಲಿ ಆಟಗಾರ ರನ್ ಹೊಡೆಯಬೇಕು, ವಿಕೆಟ್ ಕೀಳಬೇಕು. ಅದ್ಭುತ ಕ್ಷೇತ್ರರಕ್ಷಣೆ ಪ್ರದರ್ಶಿಸಿದರೆ ಬೋನಸ್. ಇದೇ ವೇಳೆ ಪಂದ್ಯದಲ್ಲಿ ಆಡುವ ಆಟಗಾರ ತನ್ನ ದೈಹಿಕ ಸಮಸ್ಯೆ, ಕೌಟುಂಬಿಕ ನೋವುಗಳನ್ನು ಮರೆತು ಅಪ್ಪಟ ಸೈನಿಕನಂತೆ ಮೈದಾನದಲ್ಲಿ ಸೆಣಸಬೇಕು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದದ್ದೇ 29 ವರ್ಷಗಳ ವಿಳಂಬ ವಯಸ್ಸಿನಲ್ಲಿ. ಬಾಂಗ್ಲಾ ದೇಶದ ಢಾಕಾಗೆ ತೆರಳಬೇಕು ಎಂದು ಕಿಟ್ ಸಿದ್ದಪಡಿಸುತ್ತಿದ್ದ ಕೇದಾರ್ ಜಾಧವ್ ಕಿವಿಗಪ್ಪಳಿಸಿದ್ದು ತಂದೆಯ ರಸ್ತೆ ಅಪಘಾತದ ಸುದ್ದಿ. ಈ ಘೋರ ಅಪಘಾತದಲ್ಲಿ ಜಾಧವ್ ತಂದೆ ಮಹಾದೇವ್ ಜಾಧವ್ ಧರಿಸಿದ್ದ ಕನ್ನಡಕದ ಚೂರುಗಳು ಅವರದೇ ಕಣ್ಣುಗಳನ್ನು ಹೊಕ್ಕು ತೀವ್ರ ಘಾಸಿಗೊಳಿಸಿತ್ತು. ಅದರಲ್ಲೂ ಬಲ ಕಣ್ಣು ವಿಪರೀತ ಹಾನಿಗೊಳಗಾಗಿತ್ತು. ಕೇದಾರ್ ಕ್ರಿಕೆಟ್ ಬದುಕನ್ನು ರೂಪಿಸಲು ಮಧ್ಯಮ ವರ್ಗದ ತಂದೆ ಸಾಕಷ್ಟು ಶ್ರಮಿಸಿದ್ದರು. ಮೂವರು ಹೆಣ್ಣು ಮಕ್ಕಳ ಮದುವೆಯನ್ನೂ ನಡೆಸಿಕೊಟ್ಟಿದ್ದರು. ಕೇದಾರ್‌ರಿಗೆ ದೈನಂದಿನ ಜೀವನದ ಗೋಳುಗಳು ತಾಕದಂತೆ ನೋಡಿಕೊಂಡಿದ್ದರು. ಅವರು ಒಂದು ಮಟ್ಟಿಗೆ ಸುಧಾರಿಸಿದರು ಎಂದ ಮೇಲೆ ಕೇದಾರ್ ಬಾಂಗ್ಲಾಕ್ಕೆ ಹಾರಿದರು. ಆದರೆ ಅವರಿಗೆ ಆಡುವ ಅವಕಾಶವೇ ಸಿಗಲಿಲ್ಲ. ಈ ತರಹದ ಸಂಕಷ್ಟಗಳನ್ನು ನಾವು ನೋಡುವುದಿಲ್ಲ. ರನ್ ಲೆಕ್ಕಹಾಕುತ್ತೇವೆ. ಬೇಗ ಔಟ್ ಆದರೆ, ಬೌಲಿಂಗ್‌ನಲ್ಲಿ ರನ್ ಕೊಟ್ಟರೆ ಮಿಸ್ಟರ್ ಫರ್‌ಫೆಕ್ಟ್ ಮಾತ್ರ ನಮ್ಮ ಟೀಕೆಗೆ ಅತೀತ ಎಂಬಂತೆ ದೂಷಿಸುತ್ತೇವೆ. ಕೇದಾರ್ ಬೌಲಿಂಗ್‌ಗೆ ಸ್ಟೈರಿಸ್ ಔಟ್! 2016ರ ಅಕ್ಟೋಬರ್ 23. ಆ ದಿನ ಭಾರತ ನ್ಯೂಜಿಲೆಂಡ್ ಏಕದಿನ ಸರಣಿಯ ಮೂರನೇ ಪಂದ್ಯ. ಪಂದ್ಯದ 11ನೇ ಓವರ್‌ನಲ್ಲಿ ಧೋನಿ ಬೌಲಿಂಗ್‌ಗೆ ಇಳಿಸಿದ್ದು ಕೇದಾರ್‌ರನ್ನು. ಆ ಕ್ಷಣಕ್ಕೆ ಕಾಮೆಂಟರೇಟರ್ ಬಾಕ್ಸ್‌ನಲ್ಲಿದ್ದ ನ್ಯೂಜಿಲೆಂಡ್‌ನ ಸ್ಕಾಟ್ ಸ್ಟೈರಿಸ್ ಘೋಷಿಸಿದರು, ಈತ ಒಂದು ವಿಕೆಟ್ ಪಡೆದರೂ ನಾನು ಬಾಕ್ಸ್‌ನಿಂದ ಹೊರಬಂದು ಸಿಗುವ ಮೊದಲ ವಿಮಾನದಲ್ಲಿ ಸ್ವದೇಶಕ್ಕೆ ಮರಳುವೆ! ಸ್ಟೈರಿಸ್ ಹಾಗೆ ಹೇಳಲೂ ಕಾರಣವಿತ್ತು. ಜಾಧವ್ ದೇಶೀಯ ಕ್ರಿಕೆಟ್‌ನಲ್ಲಿ ಕೀಪರ್, ಬ್ಯಾಟ್ಸ್ ಮನ್. ಕೇವಲ ಒಂದು ಪ್ರಥಮ ದರ್ಜೆ ವಿಕೆಟ್ ಪಡೆದಿದ್ದ ಹಿನ್ನೆಲೆಯ ಜೊತೆಗೆ ಕಿವಿ ಆರಂಭಿಕರು ಅತ್ಯುತ್ತಮವಾಗಿ ಆಡುತ್ತಿದ್ದುದು ಕೂಡ ಸ್ಟೈರಿಸ್ ಆತ್ಮವಿಶ್ವಾಸಕ್ಕೆ ಕಾರಣವಾಗಿತ್ತು. ಅವರ ಮೊದಲ ಓವರ್‌ನಲ್ಲಿ ಕಿವೀಸ್ ಆರಾಮವಾಗಿ ಆಡಿದ್ದು ಮೇಲಿನ ಹೇಳಿಕೆಗೆ ಕಾರಣವಾಗಿತ್ತು.
ಪಾಪ ಸ್ಟೈರಿಸ್, ಜಾಧವ್‌ರ ಎರಡನೇ ಓವರ್‌ನಲ್ಲಿ ವಿಲಿಯಮ್ಸನ್ ಎಲ್‌ಬಿಡಬ್ಲ್ಯು! ಸಹ ವೀಕ್ಷಕ ವಿವರಣೆಕಾರರಾದ ರವಿ ಶಾಸಿŒ ಹಾಗೂ ಸುನಿಲ್ ಗವಾಸ್ಕರ್ ಸ್ಟೈರಿಸ್‌ರಿಗೆ ತಮ್ಮ ಮಾತು ಉಳಿಸಿಕೊಳ್ಳಲು ಒತ್ತಾಯಿಸಲು ಅತ್ತ ನೋಡಿದ್ದರೆ ಸ್ಕಾಟ್ ಎಲ್ಲಿದ್ದರು? ಅವರಾಗಲೇ ಬಾಕ್ಸ್‌ನಿಂದ ಹೊರಹೋಗಿದ್ದರು. ವಿಮಾನವನ್ನು ಮಾತ್ರ ಹತ್ತಲಿಲ್ಲ! ಕೊಹ್ಲಿ ಮೀರಿದ ಕೇದಾರ್! ರನ್ ಚೇಸ್ ಮಾಡುವಾಗ ವಿರಾಟ್ ಕೊಹ್ಲಿಯವರನ್ನು ಮೀರಿ ನಡೆಯುವ ಇನೊಬ್ಬ ಇಲ್ಲ. ಆದರೆ ಪುಣೆಯಲ್ಲಿ ಕೊಹ್ಲಿ ಆಟಕ್ಕಿಂತ ಕೇದಾರ್ ಆಟ ಹೆಚ್ಚು ಪ್ರಭಾವಯುತವಾಗಿತ್ತು. ಕೇವಲ 65 ಎಸೆತಗಳಲ್ಲಿ ಕೇದಾರ್ ಶತಕ ಬಾರಿಸಿದರು. ಅಷ್ಟಕ್ಕೂ ತಂಡ 31ಕ್ಕೆ ಒಂದು ವಿಕೆಟ್ ಕಳೆದುಕೊಂಡಾಗ ಬ್ಯಾಟಿಂಗ್‌ಗೆ ಇಳಿಯುವವನಿಗಿಂತಲೂ 63ಕ್ಕೆ ನಾಲ್ಕು ವಿಕೆಟ್ ಬಿದ್ದಾಗ ಆಡಲು ತೊಡಗುವವನಿಗೂ ಬಹಳ ಅಂತರವಿದೆ. ಕೇದಾರ್ ಕೊಹ್ಲಿ ಮೀರಿ ನಿಂತಿದ್ದು ಇಲ್ಲೇ! ಮಾ.ವೆಂ.ಸ.ಪ್ರಸಾದ್