Advertisement

‘ಯೋಧರ ವೀರಮರಣಕ್ಕೆ ಸರಕಾರಿ ರಜೆ ಘೋಷಿಸಿ’

07:53 AM Jan 24, 2019 | Team Udayavani |

ಕೆಯ್ಯೂರು : ದೇಶದ ಗಡಿ ಕಾಯುವ ಸೈನಿಕರ ರಕ್ಷಾ ಕವಚದಿಂದ ನಾವೆಲ್ಲ ಇಂದು ನೆಮ್ಮದಿಯ ಜೀವನ ನಡೆಸುವಂತಾಗಿರುವುದು. ಸೈನಿಕರಿಲ್ಲದೆ ಹೋಗಿದ್ದರೆ ದೇಶದಲ್ಲಿ ಯಾವ ರಾಜಕೀಯ ಚಟುವಟಿಕೆಯೂ ನಡೆಯುತ್ತಿರಲಿಲ್ಲ. ದುರಂತ ಎಂದರೆ ಸೈನಿಕರು ವೀರಮರಣ ಹೊಂದಿದಾಗ ಸರಕಾರ ರಜೆ ಕೊಟ್ಟು ಗೌರವ ಸಲ್ಲಿಸುತ್ತಿಲ್ಲ. ಆದರೆ ಓರ್ವ ರಾಜಕಾರಣಿ ಮರಣ ಹೊಂದಿದರೆ ಸರಕಾರಿ ರಜೆ ಘೋಷಣೆ ಆಗುತ್ತಿರುವುದು ವಿಪರ್ಯಾಸ ಎಂದು ನಿವೃತ್ತ ಡಿವೈಎಸ್‌ಪಿ ಶಾಂತಾರಾಮ ರೈ ಮುಂಡಾಳಗುತ್ತು ಅವರು ಹೇಳಿದರು.

Advertisement

ಕೆದಂಬಾಡಿ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯ ಇದರ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಶ್ರೀ ಶಿರಾಡಿ ಭಕ್ತವೃಂದ ಇದ್ಪಾಡಿ ಇವರ ಪ್ರಾಯೋಜಕತ್ವದಲ್ಲಿ ಇದ್ಪಾಡಿ ಆಟದ ಮೈದಾನದಲ್ಲಿ ನಡೆದ 3ನೇ ವರ್ಷದ ಸಭಾ ಕಾರ್ಯಕ್ರಮ, ಗ್ರಾಮದ ವೈದ್ಯರು, ಸೈನಿಕರಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೇದಿಕೆ ನಿರ್ಮಾಣಕ್ಕೆ ದೇಣಿಗೆ
ಮುಖ್ಯ ಅತಿಥಿಯಾಗಿದ್ದ ಐ.ಸಿ. ಕೈಲಾಸ್‌ ಕೆದಂಬಾಡಿ ಮಾತನಾಡಿ, ಇದ್ಪಾಡಿ ಆಟದ ಮೈದಾನದಲ್ಲಿ ವೇದಿಕೆ ನಿರ್ಮಾಣ ಮಾಡುವುದಾದರೆ ವೈಯುಕ್ತಿಕ ನೆಲೆಯಲ್ಲಿ 25 ಸಾವಿರ ರೂ. ದೇಣಿಗೆ ನೀಡುತ್ತೇನೆ ಎಂದರು.

ಶ್ರೀ ಶಿರಾಡಿ ಭಕ್ತವೃಂದದ ಅಧ್ಯಕ್ಷ ಚಂದ್ರ ನಲಿಕೆ ಇದ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಭಕ್ತವೃಂದದ ಗೌ| ಸಲಹೆಗಾರ, ಕೆದಂಬಾಡಿ ಗ್ರಾಮ ಪಂಚಾಯತ್‌ಸದಸ್ಯ ರಾಘವ ಗೌಡ ಕೆರೆಮೂಲೆ ಪ್ರಸ್ತಾವನೆಗೈದರು. ಭಕ್ತವೃಂದದ ಕಾರ್ಯದರ್ಶಿ ಜಗದೀಶ್‌ ಅಮೀನ್‌ ಸ್ವಾಗತಿಸಿದರು. ಕೋಶಾಧಿಕಾರಿ ಜಯರಾಮ ಗೌಡ ಮುಂಡಾಳ ವಂದಿಸಿದರು. ಸುರೇಶ್‌ ಪೂಜಾರಿ ಇದ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ರಾಧಾಕೃಷ್ಣ ಪೂಜಾರಿ ಇದ್ಪಾಡಿ, ಸರ್ವ ಸದಸ್ಯರು ಸಹಕರಿಸಿದ್ದರು.

ವಿದ್ಯಾರ್ಥಿಗಳಿಗೆ ಗೌರವ
ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದ್ವಿತೀಯ ಪಿಯುಸಿಯ ಪವಿತ್ರಾ ಕೊಲ್ಲಾಜೆ ಮತ್ತು ಎಸೆಸೆಲ್ಸಿಯ ಶಿವಾನಿ ಬೋಳ್ಳೋಡಿ ಅವರನ್ನು ಗೌರವಿಸಲಾಯಿತು

Advertisement

ಸಾಧಕರಿಗೆ ಸಮ್ಮಾನ
ಕೆದಂಬಾಡಿ ಗ್ರಾಮದ ವೈದ್ಯ, ಸೈನಿಕ, ಪೊಲೀಸರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ ಕುಮಾರ್‌ ರೈ, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಆರ್‌ಪಿಎಫ್‌ ರಮೇಶ್‌ ರೈ ಚಾವಡಿ, ಸೆಕ್ಷನ್‌ ಕಮಾಂಡರ್‌ ಅಸ್ಸಾಂ ವಿದೀಪ್‌ ಕುಮಾರ್‌ ಕುಂಬ್ರ, ಜಮ್ಮು ಕಾಶ್ಮೀರ ಶ್ರೀನಗರದಲ್ಲಿ ಹೆಡ್‌ಕಾನ್ಸ್‌ ಟೆಬಲ್‌ ಆಗಿರುವ ಮಹೇಶ್‌ ಪಿ. ಪಿದಪಟ್ಲ, ಜಮ್ಮು ಕಾಶ್ಮೀರ 40 ರಾಷ್ಟ್ರೀಯ ರೈಫ‌ಲ್‌ ಗನ್ನಾರ್‌ ಬಿ.ಡಿ. ಲಕ್ಷ್ಮೀಶ ಕಡಮಜಲು ಅವರ ಪರವಾಗಿ ಕೇಚು ಪಾಟಾಳಿ, ಸರಸ್ವತಿ ಸೈನಿಕನ ಪತ್ನಿ ಚೈತ್ರಾ ಪಿ. ಹಾಗೂ ಝಾರ್ಖಂಡ್‌ ಇನ್ವೆಂಟರಿ ಗ್ರೇಡ್‌ ನಾಯಕ್‌ ಹುದ್ದೆಯಲ್ಲಿರುವ ಸುನೀಲ್‌ ಚೌಟ ಪಟ್ಟೆತ್ತಡ್ಕ ಅವರ ಪರವಾಗಿ ಬಾಲಕೃಷ್ಣ ಚೌಟ ದಂಪತಿ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next